Wednesday 24th, April 2024
canara news

ಶ್ರೀಲಂಕಾದಲ್ಲಿ ಮೊಳಗಿದ 27ನೇ ಅಂತರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬ

Published On : 24 Dec 2021   |  Reported By : Rons Bantwal


ಕನ್ನಡಕ್ಕೆ ಹೆಚ್ಚು ಮಾನ್ಯತೆ ನೀಡಿದ್ದೇ ಸಾಂಸ್ಕೃತಿಕ ಕಾರ್ಯಕ್ರಮಗಳು-ಮೇಲಣಗವಿಮಠ ಶಿವಗಂಗೆ ಶ್ರೀ

ಮುಂಬಯಿ (ಆರ್‍ಬಿಐ), ಡಿ.19: ಅಂತರಾಷ್ಟ್ರೀಯ ಭಾರತೀಯ ಸಾಂಸ್ಕೃತಿಕ ಪರಿಷತ್ ಹಾಗೂ ವಿಶ್ವ ಶಾಂತಿ ಪ್ರತಿಷ್ಠಾನ ಸಂಸ್ಥೆಗಳು ಜಂಟಿ ಸಹಯೋಗದೊಂದಿಗೆ ಕಳೆದ ಬುಧವಾರ (ಡಿ.16) ಶ್ರೀಲಂಕಾ ದೇಶದ ಕೊಲಂಬೊ ಸಮೀಪದ ಬೆನ್ತೋಟದಲ್ಲಿ 27ನೇ ಅಂತರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕದ ಅನೇಕ ಸಾಧಕರು,ಕಲಾವಿದರನ್ನು ಗುರುತಿಸಿ ಗ್ಲೋಬಲ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಜಿ ಮೇಲಣಗವಿಮಠ ಶಿವಗಂಗೆ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ತನ್ನದೆಯಾದ ಇತಿಹಾಸ ಇದೆ ವಿದೇಶದೆಲ್ಲೂ ಕನ್ನಡಕ್ಕೆ ಅತೀ ಹೆಚ್ಚು ಮಾನ್ಯತೆ ನೀಡಿ ಹೆಚ್ಚೆಚ್ಚು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು. ಅಂದಾಗಲೆ ಕನ್ನಡ ವಿಶ್ವ ವ್ಯಾಪ್ತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಭಾಷೆಯಾಗುತ್ತದೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪೆÇ್ರೀತ್ಸಾಹ ಸಿಗಬೇಕು ಎಂದರು.

ಪೂಜ್ಯ ಮಹದೇವ ದೇವರು ಮಾತನಾಡಿ ಕರುನಾಡಿನ ಅನೇಕ ಕಲಾವಿದರು ಸಾಧಕರನ್ನು ಗುರುತಿಸಿ ಅಂತರಾಷ್ಟೀಯ ಮಟ್ಟದಲ್ಲಿ ಗೌರವಿಸಿದ್ದು ಶ್ಲಾಘನೀಯ ಎಂದರು.

ಪರಿಷತ್ ಅಧ್ಯಕ್ಷ ಕೆ.ಪಿ ಮಂಜುನಾಥ ಸಾಗರ್ ಪ್ರಾಸ್ತಾವಿಕ ಮಾತನಾಡಿ ನಮ್ಮ ಸಂಸ್ಥೆ ಬೇರೆ ಬೇರೆ ದೇಶಗಳಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸಿ ಕನ್ನಡ ಸಾಧಕರನ್ನು ವಿದೇಶದಲ್ಲಿ ಗೌರವಿಸುತ್ತಿದ್ದೆವೆ. ಇದರಿಂದ ಹೊರರಾಷ್ಟ್ರಕ್ಕೂ ಕನ್ನಡದ ಕಂಪು ಹರಡುತ್ತಿದೆ, ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುವ ಈ ಕಾರ್ಯಕ್ರಮ ವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕವಾಗಿ ಸಾಮರಸ್ಯ ಮೂಡಿಸುವ ಕಿರು ಪ್ರಯತ್ನ ಎಂದರು

ಕಾರ್ಯಕ್ರಮದಲ್ಲಿ ಶ್ರೀಲಂಕಾದ ಉದ್ಯಮಿ ರಾಜೀವ ಫರ್ನಾಂಡೊ, ಡಿ.ಎಸ್.ವಿಶ್ವನಾಥ, ಡಾ| ಈ.ಆಂಜನೇಯ, ಹಾಜಿ ಮುನೀರ್ ಬಾವಾ, ಗೋ.ನಾ ಸ್ವಾಮಿ, ಜಯಲಕ್ಷ್ಮಿ ಬಾಯಿ ಉಪಸ್ಥಿತರಿದ್ದು ಬಿ.ಎನ್ ಹೊರಪೇಟಿ, ಷಣ್ಮುಖಯ್ಯ ತೋಟದ, ಯಾಕೂಬ್ ಖಾದರ್ ಗುಲ್ವಾಡಿ, ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಗೆ ಅತಿಥಿü ಗಣ್ಯರು ಪ್ರಶಸ್ತಿ ಪ್ರದಾನಿಸಿ ಗೌರವಿಸದರು.

ಶರಣಯ್ಯ ಇಟಗಿ ಮೆಹಬೂಬ್ ಕಿಲ್ಲೆದಾರ ಹಾಗೂ ಇನ್ನಿತರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಗೋ.ನಾ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here