Thursday 28th, March 2024
canara news

ಡಿ.26: ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿ ಸಮೀಕ್ಷೆ ಮತ್ತು ಭಜನಾ ಕೃತಿ ಬಿಡುಗಡೆ

Published On : 25 Dec 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಡಿ.24: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಕಚೇರಿ ಹಾಗೂ ಬಿಲ್ಲವ ಸಾಹಿತ್ಯ ಕಲಾ ವೇದಿಕೆ ಥಾಣೆ ಇವರ ಸಂಯುಕ್ತ ಆಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ `ಶ್ರೀ ನಾರಾಯಣ ಗುರು ವಿಜಯ ದರ್ಶನ' ಕೃತಿ ಸಮೀಕ್ಷೆ ಹಾಗೂ ಸಿ.ಎ ಪೂಜಾರಿ ಅವರ `ಶ್ರೀ ಗುರು ಭಜನಾ ಸಂಕೀರ್ತನ್' ಕೃತಿ ಬಿಡುಗಡೆ ಕಾರ್ಯಕ್ರಮ ಇದೇ ಡಿ.26ರ ರವಿವಾರ ಸಂಜೆ 4.30 ಗಂಟೆಗೆ ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿ (ಸಾಯಿಕೃಪಾ ಹೌಸಿಂಗ್ ಸೊಸೈಟಿ, ಸಾವರ್ಕರ್ ನಗರ, ಥಾಣೆ) ಇಲ್ಲಿ ಜರಗಲಿದೆ.

    

Babu Shiva Poojary             Channa A.Poojary

ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್ ಜಿ.ಅಮೀನ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಯಮಿ ಗಣೇಶ್ ಆರ್.ಪೂಜಾರಿ ಉದ್ಘಾಟಿಸಿ `ವಿಜಯ ದರ್ಶನ' ಕೃತಿಯನ್ನು ಹಾಗೂ ಅರುಣ ಟೆಕ್ಸ್‍ಟೈಲ್ಸ್ & ಟೈಲರ್ಸ್‍ನ ಮಾಲೀಕ ವಿಶ್ವನಾಥ ಎ.ಪೂಜಾರಿ ಅವರು ಶ್ರೀ ಗುರು ಭಜನಾ ಸಂಕೀರ್ತನೆ ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ.

ಶಿವಪ್ರಸಾದ ಪೂಜಾರಿ ಪುತ್ತೂರು, ಬಾಲು ಎಲ್.ಸಾಲ್ಯಾನ್, ಚಿತ್ತರಂಜನ್ ಅಮಿನ್, ವಿಶ್ವನಾಥ ಆರ್.ಪೂಜಾರಿ, ರವಿ ಆರ್.ಕೋಟ್ಯಾನ್ ಮುಂತಾದವರು ಅಭ್ಯಾಗತರಾಗಿ ಆಗಮಿಸಲಿದ್ದು, ಕವಿ ಸಾಹಿತಿ ಹಾಗೂ ಹೆಸರಾಂತ ನಾಟಕಕಾರ ಸಾ. ದಯಾ ಹಾಗೂ ಅಕ್ಷಯ ಮಾಸ ಪತ್ರಿಕೆ ಸಂಪಾದಕ ಡಾ| ಈಶ್ವರ ಅಲೆವೂರು ಅವರು ಕ್ರಮವಾಗಿ ಕೃತಿಗಳ ಸಮೀಕ್ಷೆ ಮಾಡÀುವರು.

ಕಾರ್ಯಕ್ರಮದಲ್ಲಿ ಸಮಾಜದ ಅರ್ಹ ವಿದ್ಯಾಥಿರ್üಗಳಿಗೆ ಆಥಿರ್üಕ ನೆರವು ಮತ್ತು ರಂಗೋಲಿ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿ ತುಳು ಕನ್ನಡಿಗರು ಹಾಗೂ ಸದಸ್ಯ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಥಾಣೆ ಸ್ಥಳೀಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು, ಯುವಾಭ್ಯುದಯ ಹಾಗೂ ಮಹಿಳಾ ಸಮಿತಿ ಸದಸ್ಯರು ಮತ್ತು ಬಿಲ್ಲವ ಸಾಹಿತ್ಯ ಕಲಾ ವೇದಿಕೆಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here