Saturday 23rd, September 2023
canara news

ಕವಿ-ಕಥೆಗಾರ ಗೋಪಾಲ ತ್ರಾಸಿ ಅವರ `ಲಂಡನ್ ಟು ವ್ಯಾಟಿಕನ್ಸಿಟಿ' ಪ್ರವಾಸ ಕಥನ ಲೋಕಾರ್ಪಣೆ

Published On : 25 Dec 2021   |  Reported By : Rons Bantwal


ಪ್ರವಾಸದ ಲಯಥಾವತ್ತಾದ ಚಿತ್ರಣದ ಕೈಪಿಡಿ : ಡಾ| ನೀಲಾವರ ಸುರೇಂದ್ರ ಅಡಿಗ

ಮುಂಬಯಿ (ಆರ್‍ಬಿಐ), ಡಿ.22: ಮುಂಬಯಿಯಲ್ಲಿರುವ ನಮ್ಮೂರಿನ ಕವಿ, ಗೋಪಾಲ ತ್ರಾಸಿ ಅವರ ಈ ಕೃತಿ ಪ್ರವಾಸ ಪ್ರಿಯರಿಗೆ ಕೈಪಿಡಿ ಅಂತಿದೆ. ಸುತ್ತಾಡಿದ ಸ್ಥಳಗಳ ಕುರಿತಷ್ಟೇ ಬರೆಯದೆ, ಪ್ರವಾಸಕ್ಕೂ ಮುನ್ನ ನಡೆಸ ಬೇಕಾದ ಪೂರ್ವತಯಾರಿ, ಅಗತ್ಯ ಬೇಕಾಗುವ ಕಾಗದ ಪತ್ರಗಳ ದಾಖಲೆಗಳ ವಿವರ, ವೀಸಾ ಪಡೆಯುವ ಪ್ರಕ್ರಿಯೆ ಮುಂತಾದವುಗಳ ಕುರಿತು ವಿವರವಾದ ಮಹತ್ವದ ಮಾಹಿತಿಗಳನ್ನೂ ಕೋಡುತ್ತಾರೆ. ಸಣ್ಣಸಣ್ಣ ವಿಷಯಗಳ ಸೂಕ್ಷ ್ಮಅವಲೋಕನ, ಮೋಜಿನ ಸನ್ನಿವೇಶ ಪ್ರಸಂಗಗಳು ಬೋರ್ ಹೊಡೆಯದಂತೆ ಕುತೂಹಲ ಕೆರಳಿಸುತ್ತವೆ. ಸರಳವಾದ ಅಚ್ಚುಕಟ್ಟಾದ ಭಾಷೆ ಈ ಕೃತಿಯ ಹೆಗ್ಗಳಿಕೆ. ತಾವು ಕಂಡದ್ದನ್ನು ಅನುಭವಿಸಿದ್ದ ಲಯಥಾವತ್ತಾದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಎಲ್ಲೂ ತಮ್ಮ ನಿಲುವಿನ ಭೌದ್ಧಿಕ ಹೇರಿಕೆ ತರಹದ ಅಭಿಪ್ರಾಯಗಳಿಲ್ಲ ಎಂದÀು ಕನ್ನಡ ಸಾಹಿತ್ಯ ಪರಿಷತು ್ತಉಡುಪಿ ಜಿಲ್ಲಾಧ್ಯಕ್ಷ, ಹಿರಿಯ ಸಾಹಿತಿ ಡಾ| ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.

ಡಾ| ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟ ತಟ್ಟು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕಳೆದ ಶನಿವಾರ ಕೋಟದ ಡಾ| ಶಿವರಾಮ ಕಾರಂತ ಥಿüೀಮ್ ಪಾರ್ಕ್‍ನಲ್ಲಿ ಸಂಗೀತ ಕಾರಂಜಿಯ ವೀಕ್ಷಣಾ ಅಟ್ಟಣಿಗೆಯಲ್ಲಿ ಬೆಳದಿಂಗಳ ಹೊಂಬೆಳಕಿನಲ್ಲಿ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮ ಜರುಗಿಸಿದ್ದು, ಕವಿ, ಕಥೆಗಾರ, ಅಂಕಣಕಾರ ಗೋಪಾಲ ತ್ರಾಸಿ ಅವರ `ಲಂಡನ್ ಟು ವ್ಯಾಟಿಕನ್ಸಿಟಿ' ಎಂಟು ದೇಶ-ನೂರೆಂಟು ವಿಶೇಷ ಪ್ರವಾಸ ಕಥನ ಕೃತಿ ಲೋಕಾರ್ಪಣೆಗೈದು ಡಾ| ನೀಲಾವರ ಸುರೇಂದ್ರ ಮಾತನಾಡಿದರು.

ಕಾರಂತ ಪ್ರತಿಷ್ಠಾನ ಕೋಟ ಇದರ ಕಾರ್ಯಾಧ್ಯಕ್ಷ ಮುಖ್ಯಅತಿಥಿüಯಾಗಿದ್ದು ಆನಂದ ಸಿ.ಕುಂದರ್ ಮಾತನಾಡಿ ಒಳ್ಳೆಯ ಕಾರ್ಯಕ್ರಮ ಮಾಡುವ ಆಲೋಚನೆಯಿದ್ದರೆ ಯಾವತ್ತೂ ಅದಕ್ಕೆ ನಮ್ಮ ಸಹಾಯ ಇದ್ದೆಇರುತ್ತದೆ. ನಮ್ಮಲ್ಲಿ ನರೇಂದ್ರ ಕುಮಾರ ಕೋಟ ಅವರಂತಹ ಕ್ರಿಯಾಶೀಲರ ತಂಡ ಸದಾ ಹೊಸಹೊಸ ಕಾರ್ಯಕ್ರಮ ನೀಡುವುದರಲ್ಲಿ ನಿರತರಾಗಿರುವುದರಿಂದ ಇಂತಹದ್ದೆಲ್ಲ ಸಾಧ್ಯವಾಗುತ್ತದೆ ಎಂದುಶುಭ ಹಾರೈಸಿದರು.

ಶಿಕ್ಷಕ, ಯುವಲೇಖಕ ಸತೀಶವಡ್ಡರ್ಸೆ ಕೃತಿಪರಿಚಯಗೈದು ಈ ಪ್ರವಾಸ ಕೃತಿಯನ್ನು ಓದುವಾಗ, ಲೇಖಕರ ಜೊತೆಗೆ ನಾವೂ ಸಹ ಆಯಾಸ್ಥಳಗಳಲ್ಲಿ ಅವರೊಂದಿಗೆ ತಿರುಗಾಡಿದಂತಹ ಅನುಭವ ಕೊಡುವ ಅನನ್ಯ ಶೈಲಿ ಖುಷಿ ಕೊಡುತ್ತದೆ. ಹಿಂದಿನ ಇತಿಹಾಸ, ಜನಪದ ಕಥೆಗಳನ್ನು ಹೇಳುವ ಮಾಹಿತಿ ಸಂಗ್ರಹ ಕೌತುಕಗೊಳಿಸುತ್ತದೆ. ಇದೊಂದು ವಾಸ್ತವ ರೂಪದ ಪ್ರವಾಸ ಕಥನ ಅನ್ನಬಹುದು. ಎಲ್ಲೂ ಅತೀ ಎನ್ನಿಸದೆ, ಕಥನ ಎಂದಾಗ ಅದು ಕಾದಂಬರಿಯಾಗದಂತೆ ಎಚ್ಚರಿಕೆ ವಹಿಸಿ ಬರೆಯುವಲ್ಲಿ ಲೇಖಕರು ಯಶಸ್ಸಾಗಿದ್ದಾರೆ ಎಂದರು.

ಕೋಟ ತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಗ್ರಾಮ ಪಂಚಾಯತ್ ವಲಯದಲ್ಲಿ ಈ ರೀತಿಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು, ಖ್ಯಾತ ಸಾಹಿತಿ ಡಾ| ಶಿವರಾಂಕಾರಂತರನ್ನು ಸ್ಮರಿಸುವ ಕೆಲಸ ಅಭಿನಂದನೀಯ. ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ನಮ್ಮಿಂದಾದ ಎಲ್ಲ ಸಹಕಾರ ನೆರವನ್ನು ನಾವು ನೀಡಲು ಸಿದ್ಧ ಎಂದರು.

ಉಪನ್ಯಾಸಕಿ, ಸಾಹಿತಿ ವಾಸಂತಿ ಅಂಬಲಪಾಡಿ ಅವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಥಿüೀಮ್ ಪಾರ್ಕ್‍ನÀ ಕಾರ್ಯದರ್ಶಿ, ನರೇಂದ್ರಕುಮಾರ ಕೋಟ ಪ್ರಾಸ್ತಾವನೆಗೈದರು. ಉಪನ್ಯಾಸಕ, ಕವಿ ಕೆ. ಸಂಜೀವ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಟ್ರಸ್ಟಿ ಸುಭ್ರಾಯ ಆಚಾರ್ಯ ಧನ್ಯವಾದಗೈದರು. ಮುಖ್ಯೋಪಾಧ್ಯಾಪಕಿ, ಕವಿ ಅಮಿತಾಂಜಲಿ ಕಿರಣ್ ಅಧ್ಯಕ್ಷತೆಯಲ್ಲಿ ಬೆಳದಿಂಗಳ ಕವಿಗೋಷ್ಠಿ ಜರಗಿತು.

 




More News

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Comment Here