Friday 19th, April 2024
canara news

ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ; ಪದಾಧಿಕಾರಿಗಳ ನೇಮಕ

Published On : 16 Jan 2022   |  Reported By : Rons Bantwal


ಅಧ್ಯಕ್ಷರಾಗಿ ಡಾ| ಆರ್.ಕೆ ಶೆಟ್ಟಿ ಅವಿರೋಧ ಆಯ್ಕೆ

ಮುಂಬಯಿ (ಆರ್‍ಬಿಐ), ಜ.07: ಕರ್ನಾಟಕದ ಜಾನಪದ ಸಂಪತ್ತುಗಳಾದ ವೈವಿಧ್ಯಮ ಕಲೆ, ಸಂಸ್ಕಾರ, ಸಂಸ್ಕ್ರತಿ, ಆಚಾರ, ವಿಚಾರಗಳನ್ನು ಕರ್ನಾಟಕದ ಹೊರರಾಜ್ಯಗಳಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಮಣ್ಣಿನಲ್ಲಿ ಶತಮಾನದಿಂದ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ತುಳು ಕನ್ನಡಿಗರ ಸೇವೆ ಅನುಪಮವಾದುದು. ಈ ನಿಟ್ಟಿನಲ್ಲಿ ಕರ್ನಾಟ ಜಾನಪದ ಪರಿಷತ್ತು ಇದರ ಘಟಕವನ್ನು ಮಹಾರಾಷ್ಟ್ರ ರಾಜ್ಯಕ್ಕೆ ವಿಸ್ತರಿಸಿ ಸೇವಾ ನಿರತರಾಗಲು ಕಳೆದ ಬುಧವಾರ (ಜ.05) ಬೃಹನ್ಮುಂಬಯಿ ಇಲ್ಲಿನ ದಾದರ್ ಪಶ್ವಿಮದಲ್ಲಿನ ಕೊಹಿನೂರು ಸ್ವಾ ್ಕ ್ಯರ್‍ನ ಇಸ್ಸಾರ್‍ಕಚೇರಿಯಲ್ಲಿ ಸಭೆ ಜರಗಿಸಲಾಯಿತು.

      

Dr. R.K Shetty                                    Dr. Surendrakumar Hegde                           Ashoka Pakkala

     

Ganesh G Naik                   Padmanabha Sashihitlu                          Kusuma Poojary

      

Anitha U. Shetty                Shrinivas P Saphalya                                 Krishnara

ಕರ್ನಾಟಕ ಜನಪದ ಪರಿಷತ್ತು ಇದರ ಅಧ್ಯಕ್ಷ ಟಿ.ತಿಮ್ಮೇಗೌಡ ಅವರ ಅನುಮೋದನೆಯ ಮೇರೆಗೆ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕಾತಿ ಬಗ್ಗೆ ಕರ್ನಾಟಕ ಸರಕಾರ ಮಾನ್ಯತಾ ಪತ್ರವನ್ನು ಮಂಡಿಸುವುದರ ಮೂಲಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಿಳಿಯಪಡಿಸಲಾಯಿತು .

ಜೀವವಿಮಾ ಕ್ಷೇತ್ರದಲ್ಲಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆಗೈದ ಪ್ರತಿಷ್ಠಿತ ತುಳು ಕನ್ನಡಿಗ, ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಆಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ಡಾ| ಆರ್.ಕೆ ಶೆಟ್ಟಿ ಇವರನ್ನು ಕರ್ನಾಟ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ನೂತನ ಅಧ್ಯಕ್ಷರನ್ನಾಗಿ ಸಭೆಯು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಳಿಸಿತು.

ಇತರ ಪದಾಧಿಕಾರಿಗಳಾಗಿ ಡಾ| ಸುರೇಂದ್ರಕುಮಾರ್ ಹೆಗ್ಡೆ (ಉಪಾಧ್ಯಕ್ಷರು), ಅಶೋಕ ಪಕ್ಕಳ (ಗೌರವ ಪ್ರಧಾನ ಕಾರ್ಯದರ್ಶಿ), ಗಣೇಶ್ ಜಿ.ನಾಯ್ಕ್ (ಗೌರವ ಕೋಶಾಧಿಕಾರಿ), ಪದ್ಮನಾಭ ಸಸಿಹಿತ್ಲು (ಜೊತೆ ಕಾರ್ಯದರ್ಶಿ), ಕುಸುಮಾ ಪೂಜಾರಿ (ಜೊತೆ ಕೋಶಾಧಿಕಾರಿ), ಅನಿತಾ ಯು.ಶೆಟ್ಟಿ (ಕಾರ್ಯಾಧ್ಯಕ್ಷೆ-ಮಹಿಳಾ ವಿಭಾಗ), ಶ್ರೀನಿವಾಸ ಪಿ.ಸಾಫಲ್ಯ (ಕಾರ್ಯಾಧ್ಯಕ್ಷರು, ಸಾಂಸ್ಕೃತಿಕ ಸಮಿತಿ), ಕೃಷ್ಣರಾಜ್ ಶೆಟ್ಟಿ (ಜೊತೆ ಕಾರ್ಯಾಧ್ಯಕ್ಷರು, ಸಾಂಸ್ಕೃತಿಕ ಸಮಿತಿ), ಇವರನ್ನು ಆಯ್ಕೆ ಮಾಡಲಾಯಿತು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here