Thursday 18th, April 2024
canara news

ಸೂರತ್‍ನಲ್ಲಿ ಕೆಎಫ್‍ಸಿ'ಎಸ್ ಟ್ರೋಫಿ-2022 ತೃತೀಯ ವಾರ್ಷಿಕ ಪಂದ್ಯಾಟ

Published On : 22 Jan 2022   |  Reported By : Rons Bantwal


ಕ್ರೀಡಾ ಸ್ಪರ್ಧೆಗಳು ಪ್ರತಿಭಾನ್ವೇಷಣೆಗೆ ವೇದಿಕೆಗಳಾಗುತ್ತವೆ : ರಾಧಾಕೃಷ್ಣ ಶೆಟ್ಟಿ

ಮುಂಬಯಿ (ಆರ್‍ಬಿಐ), ಜ.20: ಕರ್ನಾಟಕ ಫ್ರೆಂಡ್ಸ್ ಕ್ರಿಕಟರ್ಸ್ ಸೂರತ್ (ಕೆಎಫ್‍ಸಿ) ಸಂಸ್ಥೆಯು ಜಗದೀಶ್ ರೈ ಅಡಜನ್ (ಸೂರತ್) ವ್ಯವಸ್ಥಾಪಕತ್ವದಲ್ಲಿ ಕೇವಲ ಮನೋರಂಜನೆಗಾಗಿ ಗುಜರಾತ್‍ನಾದ್ಯಂತ ನೆಲೆಯಾಗಿರುವ ಕನ್ನಡಿಗರಿಗೆ ಈ ಬಾರಿ ತೃತೀಯ ವಾರ್ಷಿಕವನ್ನಾಗಿಸಿ ಕೆಎಫ್‍ಸಿ'ಎಸ್ ಟ್ರೋಫಿ-2022 ಪಂದ್ಯಾಟವನ್ನು ಕಳೆದ ಆದಿತ್ಯವಾರ ಗುಜರಾತ್ ರಾಜ್ಯದ ಸೂರತ್ ಇಲ್ಲಿನ ಎಲ್.ಪಿ ಸವಾನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾ ಮೈದಾನದÀಲ್ಲಿ ಆಯೋಜಿಸಿತ್ತು.

ಸೂರತ್ ಪರಿಸರದ ಹಿರಿಯ ಉದ್ಯಮಿ, ಸಮಾಜ ಸೇವಕ ಕೊಡುಗೈದಾನಿ ರಾಧಾಕೃಷ್ಣ ಶೆಟ್ಟಿ ಸೂರತ್ ದೀಪ ಬೆಳಗಿಸಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಯನ್ನಿತ್ತು ಶುಭಾರೈಸಿ ಕ್ರೀಡಾ ಸ್ಪರ್ಧೆಗಳು ಯುವಜನತೆಯಲ್ಲಿ ಉತ್ಸಾಹ ತುಂಬಲು ಪ್ರಯೋಜನಕಾರಿ. ಮಾತ್ರವಲ್ಲದೆ ಮನುಜನಲ್ಲಿನ ಪ್ರತಿಭಾನ್ವೇಷಣೆಗೆ ವೇದಿಕೆಗಳಾಗುತ್ತವೆ. ಹೊರನಾಡ ನಮ್ಮಲ್ಲಿನ ಜನತೆ ಅವರಲ್ಲಿನ ಕ್ರೀಡಾಸ್ಪೂರ್ತಿಯನ್ನು ಅನಾವಣ ಗೊಳಿಸಲು ಇಂತಹ ಪಂದ್ಯಾಟಗಳು ಸಹಾಯಕ ಆಗಿವೆ ಎಂದರು.

ಅತಿಥಿü ಅಭ್ಯಾಗತರುಗಳಾಗಿ ಫರ್ಚ್ಯೂನ್ ಹಾಸ್ಪಿಟಾಲಿಯ ದಯಾನಂದ ಶೆಟ್ಟಿ, ಶಿವ ಕೇಟರಿಂಗ್ ಮಾಲಕ ಶಿವರಾಮ ಶೆಟ್ಟಿ, ಗುಜರಾತ್ ಬಿಲ್ಲವರ ಸಂಘದ ಅಧ್ಯಕ್ಷ ವಿಶ್ವನಾಥ್ ಜಿ. ಪೂಜಾರಿ ಬಾರ್ಡೋಲಿ (ಸೂರತ್), ಕನ್ನಡ ಸಮಾಜ ಸೂರತ್ ಅಧ್ಯಕ್ಷ ದಿನೇಶ್ ಶೆಟ್ಟಿ, ಉದ್ಯಮಿಗಳಾದ ದಿನೇಶ್ ಶೆಟ್ಟಿ ಸೂರತ್, ಸುಕೇಶ್ ಎ.ಶೆಟ್ಟಿ, ಹನಿ ಗಾರ್ಡನ್ ತಂಡದ ಸಂಚಾಲಕ ನಾಗರಾಜ್ ಶೆಟ್ಟಿ, ಹರೀಶ್ ಶೆಟ್ಟಿ, ಸಮಾಜ ಸೇವಕ ರಾಧಾಕೃಷ್ಣ ಮೂಲ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಫಿಟ್ನೆಸ್ ಪ್ರಸಿದ್ಧಿಯ ರಾಜಾಶೋಕ್ ಶೆಟ್ಟಿ ಸೂರತ್ ಮಾತಾನಾಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸುದರಿಂದ ನಮ್ಮ ದೇಹವು ಸ್ಥಿರವಾಗಿದ್ದು ಬಲಯುತವಾಗುತ್ತದೆ. ಶರೀರದ ದಡ್ಡತನ ದೂರ ಆಗುತ್ತದೆ. ಕ್ರೀಡೆ ಮನುಷ್ಯನ ಜೀವನದಲ್ಲಿ ಸ್ಫೂರ್ತಿದಾಯಕ, ಸಂಘಟನಾಶೀಲತೆಗೆ ಶಕ್ತಿಯಾಗಿದೆ ಎಂದು ಪಾಲ್ಗೊಂಡ ಎಲ್ಲಾ ಕ್ರೀಡಾಳುಗಳಿಗೆ ಮತ್ತು ಸಂಘಟಿಕರಿಗೆ ಶುಭಕೋರಿದರು.

ಗುಜರಾತ್‍ನಲ್ಲಿ ನೆಲೆಸಿರುವ ಕರ್ನಾಟಕದ ಜನತೆಗೆ ಮಾತ್ರ ಸೀಮಿತವಾಗಿದ್ದ ಪಂದ್ಯಾಟದಲ್ಲಿ ಅಂತಿಮವಾಗಿ ಏಳು ತಂಡಗಳು ಕಣದಲ್ಲಿದ್ದು ನಿಯಮಿತ ಓವರ್‍ಗಳ ಪಂದ್ಯದಲ್ಲಿ ಕೆಎಫ್‍ಸಿ ಸೂರತ್ ತಂಡ ಮತ್ತು ಹನಿ ಗಾರ್ಡನ್ ದಮನ್ ತಂಡಗಳು ಅಂತಿಮ ಪಂದ್ಯಾಟದಲ್ಲಿ ಸೆಣದಾಡಿದ್ದು ಕೆಎಫ್‍ಸಿ ಸೂರತ್ ತಂಡ ಪ್ರಥಮಕ್ಕೆ ಭಾಜನವಾಯಿತು.

ಗುಜರಾತ್‍ವಾಸಿ ಆಹ್ಮದಾಬಾದ್, ಬರೋಡ, ವಾಪಿ, ದಮನ್, ಸಿಲ್ವಾಸ, ವಲ್ಸಡ್, ಸೂರತ್, ಅಂಕ್ಲೇಶ್ವರ್ ಮತ್ತಿತರ ನಗರಗಳಲ್ಲಿನ ಕನ್ನಡಿಗರ ಪಾಲ್ಗೊಳ್ಳುವಿಕೆಯಲ್ಲಿನ ಈ ಪಂದ್ಯಾಟದಲ್ಲಿ ಕೆಎಫ್‍ಸಿ ಸದಸ್ಯರು ಹಾಜರಿದ್ದು ಕೆಎಫ್‍ಸಿ'ಎಸ್ ಟ್ರೋಫಿ-2022 ಯಶಸ್ವಿ ಗೊಳಿಸಿದ್ದು, ಕೊನೆಯ ಪಂದ್ಯದಲ್ಲಿ ವಿಜಯ ನಾಯ್ಕ್, ಪ್ರದೀಪ್ ಶೆಟ್ಟಿ, ನಿತಿನ್ ಶೆಟ್ಟಿ, ಪ್ರಥ್ವಿ ಶೆಟ್ಟಿ, ಚೇತನ್ ಕುಮಾರ್ ದಮನ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಗಣ್ಯರು ಉಪಸ್ಥಿತರಿದ್ದು ಫರ್ಚ್ಯೂನ್ ಹಾಸ್ಪಿಟಾಲಿ ಪ್ರಾಯೋಜಕತ್ವದ ಪಾರಿತೋಷಕಗಳನ್ನು ವಿಜೇತರಿಗೆ ವಿತರಿಸಿ ಅಭಿನಂದಿಸಿದರು.

ಜಗದೀಶ ರೈ ನಾಯಕತ್ವದ ಕೆಎಫ್‍ಸಿ ತಂಡ ದಮಾನ್ ಕೆಎಫ್‍ಸಿ'ಎಸ್ ಟ್ರೋಫಿ-2022 ಫಲಕ ಮತ್ತು ರೂಪಾಯಿ 25,000/- ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿದರೆ ಸುಕೇಶ್ ಎ.ಶೆಟ್ಟಿ ನಾಯಕತ್ವದ ಹನಿ ಗಾರ್ಡನ್ ತಂಡವು ದ್ವಿತೀಯ ಬಹುಮಾನ ತನ್ನದಾಗಿಸಿತು. ರಜನಿ ಶೆಟ್ಟಿ ಸೂರತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here