Friday 2nd, June 2023
canara news

ಅವಿಭಜಿತ ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ

Published On : 24 Jan 2022   |  Reported By : Rons Bantwal


ಕ.ರ.ವೆ ನಾರಾಯಣ ಗೌಡರಿಗೊವಿಶ್ವನಾಥ ದೊಡ್ಮನೆ ವಿನಂತಿ

ಮುಂಬಯಿ, ಜ.18: ಕರ್ನಾಟಕದ ಎರಡು ಜಿಲ್ಲೆಯ ಹೆಸರು. ಉರ್ದುವಿನಿಂದ ಕೂಡಿದೆ ಗೊತ್ತಿದೆಯೇ.. (?) ಕರವೆ (ಕರ್ನಾಟಕ ರಕ್ಷಣ ವೇದಿಕೆ) ಕನ್ನಡ ಪರ ಹೋರಾಟಗಾರರೆ.....! ಉತ್ತರ ಕನ್ನಡ, ದಕ್ಷಿಣ ಕನ್ನಡ ಅಲ್ಲದೆ ಉತ್ತರ ಕನ್ನಡಕ್ಕೆ (ಕೆನರಾ ಲೋಕಸಭಾ ಕ್ಷೇತ್ರ ಎನ್ನುತ್ತಾರೆ) ಈ ಹೆಸರು ಹೇಗೆ ಬಂತು ಕನ್ನಡ ಪರ ಹೋರಾಟಗಾರರೆ... (?) ಇದು ಟಿಪ್ಪು ಸುಲ್ತಾನ ಕಾಲದಲ್ಲಿ ಕನ್ನಡ ಬಾರದ ಆತನ ಆಡಳಿತಗಾರರು "ಕಿನಾರಾ" ಎ0ದು ಕರೆದ ಫಲವಾಗಿ ಕೆನರಾ ಜಿಲ್ಲೆಯಾಗಿದೆ. ಕಿನಾರಾ ಎಂದರೇನು....? ಸಮುದ್ರ ಸರಹದ್ದು ಎನ್ನಲು. ಸಮುದ್ರ ಕಿನಾರಾ ಎಂದರಂತೆ (?) ಮುಂದೆ ಬ್ರಿಟಿಷ್‍ರು ಅದನ್ನೆ ಮುಂದುವರೆಸಿದರು. ಸರ್ ಎರಡು ಜಿಲ್ಲೆಯವರು ಗಲಾಟೆ ಮಾಡುತ್ತಾರೆಯೆ...? ಎಂದು ಮಯೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನ (ರಿ.) ಮುಂಬಯಿ ಸಂಸ್ಥೆಯ ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರೆಶ್ನಿಸಿದ್ದಾರೆ.

ಸಂಸ್ಕೃತ ವಿ.ವಿಗೆ ವಿರೋಧಿಸುವವರೆÉ ಎರಡು ಜಿಲ್ಲೆಯ ಜನರ ಹೃದಯ ವೈಶಾಲ್ಯತೆ ನೋಡಿ ಕಲಿಯಿರಿ. ಕರ್ನಾಟಕದಲ್ಲಿರುವ ಉರ್ದು ಭಾಷಿಕರು ಕನ್ನಡ ಮಾತನಾಡುವ ರೀತಿ ಕೇಳಿದ್ದಿರಾ ಎಂದಾದರು.? ಸಮುದ್ರ ಕಿನಾರಾ' ಕಿನಾರಾ ಎಂದು ಅವರು ಕರೆದದ್ದು ಮುಂದೆ ಕೆನರಾ ಜಿಲ್ಲೆ ಆಗಿದೆಯಂತೆ (!). ಈ ಎರಡು ಜಿಲ್ಲೆಯಲ್ಲಿ ಕನ್ನಡವಲ್ಲದೆ, ಕೊಂಕಣಿ, ತುಳು, ಬ್ಯಾರಿ ಸೇರಿದಂತೆ ಹಲವು ಭಾಷೆಗಳಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹೇಗಾಯಿತು ಉರ್ದು ಭಾಷೆಯ ಪ್ರಭಾವ ರಾಜ್ಯದಲ್ಲಿರುವ (ಹೆಚ್ಚಿನ) ಉರ್ದು ಭಾಷಿಕರಿಗೆ ಕನ್ನಡ ಸರಿಯಾಗಿ ಮಾತನಾಡಲು ಕಲಿಸಿ ಮತ್ತೆ ಸಂಸ್ಕೃತ ವಿ.ವಿ ವಿರೋಧಿಸಿ.

ನಮ್ಮ ಬ್ರದರ್ಸ್ ಕನ್ನಡ ಮಾತನಾಡುವುದನ್ನು ಕೇಳಿದರೆ ಓ.. ದೇವರೆ ಏನಿಸುತ್ತದೆ. ಈ ರಾಜ್ಯದ ನಾಗರಿಕರಾಗಿ ಆ ರೀತಿ ಕನ್ನಡವನ್ನು ತಪ್ಪುತಪ್ಪಾಗಿ ಉಚ್ಛರಿಸುವುದೆ..? ಕರ್ನಾಟಕದಲ್ಲಿರುವ ಸಂಸ್ಕೃತ ಪ್ರೇಮಿಗಳು ಕನ್ನಡವನ್ನು ಸರಿಯಾಗಿ ಮಾತನಾಡುತ್ತಾರೆ ತಪ್ಪುತಪ್ಪಾಗಿ ಕನ್ನಡ ಮಾತನಾಡುವುದಿಲ್ಲ. ಇಲ್ಲಿಯ ಸರಕಾರದ ಎಲ್ಲ ಸೌಲಭ್ಯ ಪಡೆದು ಭಾಷೆಯನ್ನು ತಪ್ಪಾಗಿ ಉಚ್ಚರಿಸುವುದು ಸರಿಯೆ? ಸೌಲಭ್ಯ ಬೇಕು ಈ ನೇಲದ ಸಂಸೃತಿ ಅಂದರೆ ಕಾನೂನು ಬೇಡವೆಂದರೆ ಹೇಗೆ ..?

ಸಂಸ್ಕೃತ ವಿರೋಧಿಸುವವರು ಉತ್ತರ ಕನ್ನಡ ದಕ್ಷಿಣ ಕನ್ನಡ (ಸೌತ್ ಕೆನರಾ' ಅರ್ಥ ಕೆನರಾ ಎನ್ನುವ ಉರ್ದು ಇಂಗ್ಲಿಷಿ ಮಿರ್ಷಿತ ಜಿಲ್ಲೆಯ ಹೆಸರನ್ನು ಬದಲಿಸಲು ಹೋರಾಡಿ ಇಲ್ಲ. ವಿಶ್ವದ ಶ್ರೇಷ್ಠ ಭಾಷೆಯಾದ ಸಂಸ್ಕೃತ ವಿವಿಗೆ ಬೆಂಬಲಿಸಿ. ಬೆಂಬಲಿಸಲು ಆಗದಿದ್ದರೆ ಶಾಂತಿಯಿಂದಲಾದರು ಇರಿ ಎಂದು ವಿಶ್ವನಾಥ ದೊಡ್ಮನೆ ಅವರು ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣ ಗೌಡರಿಗೆ ಮನವಿ ಮಾಡಿದ್ದಾರೆ.
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here