Friday 9th, May 2025
canara news

ಬಿಎಸ್‍ಕೆಬಿಎ ಗೋಕುಲದ ವತಿಯಿಂದ ಆಚರಿಸಲ್ಪಟ್ಟ ಗಣತಂತ್ರ ದಿನಾಚರಣೆ

Published On : 29 Jan 2022   |  Reported By : Rons Bantwal


ಶೀಘ್ರದಲ್ಲೇ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ-ಡಾ| ಸುರೇಶ್ ರಾವ್ ಕಟೀಲು
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.28: ಗೋಕುಲ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯ ಹಂತ ತಲುಪಿದೆ. ಆದರೆ ಕೊರೋನಾದ ಮೂರನೆಯ ಅಲೆಯಿಂದಾಗಿ ಜನವರಿ ಅಂತ್ಯದಲ್ಲಿ ಆಯೋಜಿಸಿದ್ದ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವನ್ನು ಮುಂದುವರಿಸಬೇಕಾದ ಅನಿವಾರ್ಯತೆ ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ, ಸದಸ್ಯ ಬಾಂಧವರು ಹಾಗೂ ಭಕ್ತಾದಿಗಳೆಲ್ಲರ ತನು-ಮನ-ಧನದ ಸಹಕಾರದೊಂದಿಗೆ ಶ್ರೀ ಗೋಪಾಲಕೃಷ್ಣ ದೇವರನ್ನು ಮೂಲ ಸ್ಥಾನದಲ್ಲಿ ವೈಭವೋಪೇತವಾಗಿ ಪುನರ್ ಪ್ರತಿಷ್ಠಾಪನೆ ಗೈಯಲಿದ್ದೇವೆ ಎಂದು ಬಿಎಸ್‍ಕೆಬಿ ಎಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಬಿಎಸ್‍ಕೆಬಿ ಎಸೋಸಿಯೇಶನ್ ಗೋಕುಲದ ವತಿಯಿಂದ ನೆರೂಳ್ ಅಲ್ಲಿನ ಆಶ್ರಯದಲ್ಲಿ ಭಾರತದ 73ನೇ ಗಣರಾಜ್ಯೋತ್ಸವವನ್ನು ಆಚರಿಸಿದ್ದು, ಪ್ರಾತಃಕಾಲ ಡಾ| ಸುರೇಶ್ ರಾವ್ ಧ್ವಜಾರೋಹಣಗೈದು ನೆರೆದ ರಾಷ್ಟ್ರಪ್ರೇಮಿಗಳಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿ ಮಾತನಾಡಿದರು.

 

ಪ್ರಾತಃಕಾಲ ಸಂಘÀದ ಉಪಾಧ್ಯಕ್ಷ ವಾಮನ್ ಹೊಳ್ಳ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕೊರೋನಾ ನಿಯಮಾವಳಿಗಳನ್ನು ಅನುಸರಿಸಿ, ಸೀಮಿತ ಸದಸ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಆಚರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶ್ರಯ ಸಭಾಗೃಹದಲ್ಲಿ ಅನಘಾ ಉಪ್ಪರ್ಣ ಮತ್ತು ಶ್ರೀಲಕ್ಷ್ಮೀ ಉಡುಪ ಇವರ ನಿರೂಪಣೆಯಲ್ಲಿ ಯುವ ಕಲಾವೃಂದವು ಸಂಗೀತೋಪಕರಣಗಳ ಮೂಲಕ ದೇಶಭಕ್ತಿಗೀತೆಗಳು, ಆಶ್ರಯ ನಿವಾಸಿಗಳು ಮತ್ತು ಸಂಸ್ಥೆಯ ಹಿರಿಯ ಹಾಗೂ ಕಿರಿಯ ಸದಸ್ಯ ಬಾಂಧವರು ದೇಶಭಕ್ತಿ ಗೀತೆಗಳ ಗಾಯನ, ನೃತ್ಯಗಳನ್ನು, ಭಾಗವತ ಕಂಡ ಮಹಿಳೆಯರು ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಗೊಳಿಸಿದರು. ಕೆಲವು ಸದಸ್ಯ ಬಾಂಧವರು ಜೂಮ್ ಜಾಲ ತಾಣದ ಮೂಲಕ ಗಾಯನ, ನೃತ್ಯಗಳನ್ನು ಪ್ರದರ್ಶಿಸಿದರು.

ಡಾ| ಸುರೇಶ್ ಎಸ್.ರಾವ್ ಅಧ್ಯಕ್ಷತೆಯಲ್ಲಿ ಜರಗಿದ ಸರಳ ಸಭಾ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದು ಎಸ್‍ಎಸ್‍ಸಿ, ಹೆಚ್‍ಎಸ್‍ಸಿ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಶಿವರಾಯ ರಾವ್ ಪ್ರತಿಭಾನ್ವಿತರ ಯಾದಿ ವಾಚಿಸಿದರು. ಕಾರ್ಯಕ್ರಮ ಯು ಟ್ಯೂಬ್ ಜಾಲತಾಣದ ಮೂಲಕ ನೇರ ಪ್ರಸಾರಗೊಂಡಿದ್ದು ಎ.ಪಿ.ಕೆ ಪೆÇೀತಿ ಕಾರ್ಯಕ್ರಮ ನಿರೂಪಿಸಿ, ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here