Friday 9th, May 2025
canara news

ಭಾಷೆಗಳ ನಡುವಿನ ವೈಷಮ್ಯ ಅಕ್ಷಮ್ಯ: ಮೋರ್ಲ ರತ್ನಾಕರ ಶೆಟ್ಟಿ

Published On : 06 Feb 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಫೆ. 02 : ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ತಲಪಾಡಿ ಇಲ್ಲಿನ ಸಂಕೋಳಿಗೆ ಸಭಾಂಗಣದಲ್ಲಿ ಸಂಜೆ ಜರಗಿದ ಸಮಾರೋಪ ಸಮಾರಂಭವು ಮುಂಬಯಿ ಭಾಜಪ ಕಾನೂನು ಕೋಶದ ಅಧ್ಯಕ್ಷ ನಾ| ಮೋರ್ಲ ರತ್ನಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋರ್ಲಾ ಭಾಷೆಗಳು ಸಂವೇದನಾಶೀಲವಾಗಿರುತ್ತವೆ. ಅದು ಭಾಷೆಗಳ ನಡುವೆ ಭಾವನಾತ್ಮಕ ಬೇಸುಗೆಯಾಗಿರಬೇಕೆ ಹೊರತು ಯಾವುದೇ ಕಾರಣಕ್ಕೂ ಅದು ವೈಷಮ್ಯಕ್ಕೆ ಕಾರಣವಾಗಬಾರದು, ಬೌಗೋಳಿಕ ಗಡಿ ಗುರುತಿಸುವಿಕೆ ಸಾಧ್ಯ ಆದರೆ ಭಾಷಾ ಸಮುದಾಯದ ಗಡಿ ಅತಾರ್ಕಿಕ ಎಂದರು. ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ್ ರೇವಣ್ಕರ್ ಕಲಾವಿದರಿಗೆ ಪ್ರಶಂಸನಾ ಪತ್ರ ಪ್ರದಾನಿಸಿ ಅಭಿನಂದಿಸಿದರು.

ಮಂಗಳೂರು ಉತ್ತರ ಎಸಿಪಿ ಎಸ್. ಮಹೇಶ ಕುಮಾರ್, ಬರ್ಕೆ ಪೆÇಲೀಸ್ ನಿರೀಕ್ಷಕರಾದ ಜ್ಯೋತಿರ್ಲಿಂಗ ಹೊನಕಟ್ಟಿ ಮತ್ತು ಒಮೇಗಾ ಹಾಸ್ಪಿಟಲ್ ಆಡಳಿತಾಧಿಕಾರಿ ಎಸ್.ಎಲ್ ಭಾರದ್ವಾಜ್ ಮತ್ತು ಬೆಂಗಳೂರು ಹೈಕೋರ್ಟು ನ್ಯಾಯವಾದಿ ರಘುನಾಥ್ ಅತಿಥಿಗಲಕಾಗಿದ್ದು ನಾಡು ನುಡಿ ಮತ್ತು ವಿವಿಧ ಕ್ಷೇತ್ರದ ಸಾಧಕರಾದ ಗೋಪಾಲ ಶೆಟ್ಟಿ ಅರಿಬೈಲು, ರಾಮಣ್ಣ ಮುಗ್ರೋಡಿ, ಮುಹ್ಮದ್ ಅಸ್ಕರ್ ಮುಡಿಪು, ಶಿವರಾಮ ಕಾಸರಗೋಡು, ಇಂ| ಬಿ. ಹೇಮಂತ್ ಕುಮಾರ್, ಶ್ರೀ ಎ. ಸಿದ್ದಿಕ್ ತಲಪಾಡಿ ಇವರಿಗೆ ಗೌರವ ಪುರಸ್ಕಾರ ಪ್ರದಾನಿಸಿದರು.

ವೇದಿಕೆಯಲ್ಲಿ ಪ್ರಸಿದ್ಧ ಜಾನಪದ ಗಾಯಕ ಗೋ.ನಾ ಸ್ವಾಮಿ, ಹಾಗೂ ಟ್ರಸ್ಟ್ ಮುಖ್ಯಸ್ಥ ಇಂ. ಕೆ.ಪಿ ಮಂಜುನಾಥ್ ಸಾಗರ್ ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here