Friday 9th, May 2025
canara news

ಲತಾ ಮಂಗೇಶ್ಕರ್ ನಿಧನಕ್ಕೆ ಸಚಿವ ನಾರಾಯಣ ಗೌಡ ಸಂತಾಪ

Published On : 06 Feb 2022   |  Reported By : Rons Bantwal


ಮುಂಬಯಿ, ಫೆ.06: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತ ರತ್ನ ಪುರಸ್ಕೃತರಾಗಿದ್ದು ಇಂದಿಲ್ಲಿ ಅಗಲಿದ ಪ್ರಸಿದ್ಧ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿಅಂಶ ಸಚಿವ ಡಾ| ಕೆ.ಸಿ ನಾರಾಯಣ ಗೌಡ ಸಂತಪ ವ್ಯಕ್ತಪಡಿಸಿದ್ದಾರೆ.

 

ಒಕ್ಕಲಿಗ ಸಂಘ ಮಹಾರಾಷ್ಟ್ರ ಮತ್ತು ಅಧ್ಯಕ್ಷ, ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬಯಿ ಇದರ ಕಾರ್ಯಾಧ್ಯಕ್ಷ, ಮುಂಬಯಿ ಉದ್ಯಮಿಯಾಗಿದ್ದು ಅಂದಿನ ದಿನಗಳಲ್ಲಿ ಮುಂಬಯಿನಲ್ಲಿನ ಲತಾ ಮಂಗೇಶ್ಕರ್ ಅವರ ಅನೇಕ ಸಂಗೀತ ಕಚೇರಿಗಳಲ್ಲಿ ಪಾಲ್ಗೊಳ್ಳುವ ಹಾಗೂ ಹಲವಾರು ಬಾರಿ ವೈಯಕ್ತಿಕ ಭೇಟಿಯಾದ ದಿನಗಳನ್ನು ನೆನಪಿಸಿಕೊಂಡ ಸಚಿವರು ವಿಶ್ವಕಂಡ ಅಪ್ರತಿಮ ಸಂಗೀತ ವಿದ್ವಾಂಸೆಯನ್ನು ನಾವು ಕಳಕೊಂಡಿದ್ದೇವೆ. ಹಿಂದೂಸ್ತಾನಿ ಸಂಗೀತದ ಆಸ್ತಿಯಾಗಿದ್ದ ಇವರ ಅಗಲಿಕೆ ರಾಷ್ಟ್ರಕ್ಕೆ ತುಂಬಲಾಗದ ನಷ್ಟ ಎಂದು ಸಚಿವ ನಾರಾಯಣ ಗೌಡ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಲತಾ ಮಂಗೇಶ್ಕರ್ ನಿಧನವು ಭಾರತೀಯ ಸಂಗೀತ ಭ್ರಾತೃತ್ವದಲ್ಲಿ ಭಾರೀ ನಷ್ಟವಾಗಿದ್ದು ಇದು ವಿಶ್ವದ ಸಂಗೀತಪ್ರೇಮಿಗಳಿಗೊಂದು ಆಘಾತ ಮತ್ತು ದುಃಖಿತ ವಿಷಯವಾಗಿದ್ದು ಅವರ ಗಾನಪ್ರಿಯನಾಗಿದ್ದ ತಾನೂ ವಿಷಾದ ವ್ಯಕ್ಯಪಡಿಸುತ್ತಾ ಆಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರುವೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here