Friday 19th, April 2024
canara news

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಸದಸ್ಯರಿಂದ ಪುಣ್ಯಕ್ಷೇತ್ರ ಗಳ ದರ್ಶನ.

Published On : 12 Feb 2022   |  Reported By : Rons Bantwal


ಮುಂಬಯಿ, ಫೆ.12: ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಯ ಸುಮಾರು 50 ಜನರ ತಂಡವು ಕಳೆದ ಫೆ.5 ರಿಂದ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳ ದರ್ಶನ ನಡೆಸಿತು.

ಮಾಜಿ ಕಾರ್ಯಾಧ್ಯಕ್ಷ ರವಿ ಸನಿಲ್ ನೇತೃತ್ವದಲ್ಲಿ ಮುಂಬಯಿಯಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟ ತಂಡವು ಮಾರನೇ ದಿನ ಕುಂದಾಪುರ ತಲುಪಿ ಅಲ್ಲಿಂದ ಆನೆಗುಡ್ಡೆ ಗಣಪತಿ ದೇವರ ಮತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಮರಣಕಟ್ಟೆ ಬ್ರಹ್ಮಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ ಹಾಗೂ ಮುರ್ಡೇಶ್ವರ ಈಶ್ವರ ದೇವರ ದರ್ಶನ ಪಡೆಯಿತು.

ನಂತರ ಕುಂದಾಪುರ, ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರು, ಶೃಂಗೇರಿ ಶರದಾಂಬೆ ಯ ದರ್ಶನ ಪಡೆದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ರಾತ್ರಿ ಉಜಿರೆಯಲ್ಲಿ ಉಳಿದು ಮೂರನೇ ದಿನ ಬೆಳಿಗ್ಗೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಕೋಟಿ ಚೆನ್ನಯರ ಜನ್ಮಸ್ಥಳ ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ತಾಯಿ ದೇಯಿಬೈದ್ಯೆತಿ ದರ್ಶನ ಪಡೆದು ಕುಳಾಯಿಯಲ್ಲಿ ಗುರು ನಾರಾಯಣ ದರ್ಶನ, ಬಪ್ಪನಾಡು ದುರ್ಗಾಪರಮೇಶ್ವರಿ ಹಾಗೂ ಕಾಪು ಮಾರಿಯಮ್ಮನ ದರ್ಶನ ದೊಂದಿಗೆ ದೇಗುಲ ದರ್ಶನ ಮುಕ್ತಾಯ ಗೊಳಿಸಿಕಾಪು ಲೈಟ್ ಹೌಸ್ ರಿಸೋರ್ಟ್ ನಲ್ಲಿ ವಿಶ್ರಾಂತಿ ಪಡೆಯಿತು. ಫೆ.10 ರಂದು ಮುಂಬಯಿಗೆ ಮರು ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಕುಶ ಸನಿಲ್, ರಾಜೇಶ್ ಕೋಟ್ಯಾನ್, ಆರ್.ಕೆ. ಸುವರ್ಣ, ಮನೋಜ್ ಆರ್. ಕುಕ್ಯಾನ್, ಚಂದ್ರಹಾಸ್ ಪಾಲನ್, ದೇವರಾಜ್ ಪೂಜಾರಿ ಇವರುಗಳು ಊಟೋಪಚಾರ ದ ವ್ಯವಸ್ಥೆ, ಶ್ರೀಧರ್ ಅಮೀನ್, ರಾಜು ಜಿ.ಪೂಜಾರಿ, ಪುರಂದರ ಪೂಜಾರಿ, ಅಶೋಕ್ ಅಮೀನ್ ಇವರು ಉಪಾಹಾರ ವ್ಯವಸ್ಥೆ ಮಾಡಿದರು.

ಗೌರವ ಅಧ್ಯಕ್ಷ ದೇವರಾಜ ಪೂಜಾರಿ, ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ಮತ್ತು ಪದಾಧಿಕಾರಿಗಳು, ಸದಸ್ಯರ ಸಹಕಾರದಿಂದ ಪುಣ್ಯಕ್ಷೇತ್ರಗಳ ದರ್ಶನ ಯಶಸ್ವಿಯಾಗಿ ನೆರವೇರಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here