Friday 9th, May 2025
canara news

ಮಹಾರಾಷ್ಟ್ರ ರಾಜಭವನದ ದರ್ಬಾರ್ ಹಾಲ್ ಸೇವಾರ್ಪಣೆ

Published On : 12 Feb 2022   |  Reported By : Rons Bantwal


ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಪುರೋಹಿತರಿಂದ ಪೂಜೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.11: ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರ ರಾಜಭವನದಲ್ಲಿ ನೂತನವಾಗಿ ನಿರ್ಮಿಸಲಾದ ದರ್ಬಾರ್ ಹಾಲ್ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಭಾರತದ ರಾಷ್ಟ್ರಪತಿ ರಾಮ್‍ನಾಥ್ ಕೋವಿದ್ ಅವರು ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ರಾಷ್ಟ್ರಪತಿಗಳು ಉದ್ಘಾಟಿಸಿದ್ದು ಆ ಮುನ್ನ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶದ ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಇವರು ತನ್ನ ಪೌರೋಹಿತ್ಯದಲ್ಲಿ ದ್ವಾರಪಾಲಕ ಪೂಜೆ ಮತ್ತು ಲಕ್ಷಿ ್ಮೀನಾರಾಯಣ ಪೂಜೆ ನೆರವೇರಿಸಿದರು. ವಿದ್ವಾನ್ ಪವನ ಭಟ್ ಅಣ್ಣಿಕೇರಿ ಸಹಕರಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್, ಲೋಕೋಪಯೋಗಿ ಸಚಿವ ಅಶೋಕ್ ಚವ್ಹಾಣ್, ಶಿಷ್ಟಾಚಾರ ಸಚಿವ ಆದಿತ್ಯ ಠಾಕ್ರೆ, ಬಾಂಬೆ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಾಂಕರ್ ದತ್ತಾ, ವಿಧಾನ ಪರಿಷತ್ತ್ತ್‍ನ ಉಪ ಸಭಾಪತಿ ಡಾ| ನೀಲಂ ಗೋರ್ಹೆ, ಉಪಸಭಾಪತಿ ನರಹರಿ ಜಿರ್ವಾಲ್, ರಾಜ್ಯ ಸಚಿವೆ ಅದಿತಿ ತಟ್ಕ್ಕರೆ ಮತ್ತಿತರ ಆಹ್ವಾನಿತರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here