Friday 9th, May 2025
canara news

ಅಸಲ್ಫಾದಲ್ಲಿ ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಜರುಗಿದ ಅರಸಿನ ಕುಂಕುಮ

Published On : 15 Feb 2022   |  Reported By : Rons Bantwal


ಮುಂಬಯಿ,(ಆರ್‍ಬಿಐ)ಫೆ.15: ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು ಕಳೆದ ಭಾನುವಾg(ಫೆ.13) ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವು ನೇರವೇರಿತು.

ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಡಾ| ಸಹನಾ ನಿಶಾಂತ್, ಗೌರವ ಅತಿಥಿsಯಾಗಿ ಮಾಜಿ ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕಿ ಅನುಶ್ರೀ ಶಿವರಾಮ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ರಮೇಶ್ ಭಂಡಾರಿ, ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ಕೋಶಾಧಿಕಾರಿ ನ್ಯಾ| ಶ್ಯಾಮ್ ಆರ್. ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಮಾರ್ಗದರ್ಶನದಲ್ಲಿ ಆಯೋಜಿಸಲಾದ ವಾರ್ಷಿಕ ಕಾರ್ಯಕ್ರಮಕ್ಕೆ ಪೂರ್ವಾಹ್ನ ಪದಾಧಿಕಾರಿಗಳು, ಅತಿಥಿsಗಳು ಮತ್ತು ಮಹಿಳಾ ಸದಸ್ಯೆಯರು ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರು ಮತ್ತು ಶ್ರೀ ಗೀತಾಂಬಿಕಾ ಮಾತೆಗೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಹಿಳಾ ವಿಭಾಗದ ಸದಸ್ಯೆಯರು ವಿವಿಧ ನೃತ್ಯಾವಳಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ, ಗೌರವ ಕೋಶಾಧಿಕಾರಿ ಕರುಣಾಕರ್ ಭಂಡಾರಿ, ನಿಕಟಪೂರ್ವಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ (ಸಲಹಾ ಸಮಿತಿ ಕಾರ್ಯಾಧ್ಯಕ್ಷ)

ರುಕ್ಮಯ ಭಂಡಾರಿ, ರಾಕೇಶ್ ಭಂಡರಿ, ರಂಜಿತ್ ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಲಲಿತಾ ವಿ.ಭಂಡಾರಿ, ರುಕ್ಮಿಣಿ ಭಂಡಾರಿ ಮಾಜಿ ಕೋಶಾಧಿಕಾರಿ ರಮೇಶ್ ಪೆÇವಾಯಿ, ಕೇಶವ ಭಂಡಾರಿ, ರೇಖಾ ಅಣ್ಣು ಭಂಡಾರಿ, ವಿಶ್ವನಾಥ ಭಂಡಾರಿ, ವನಿತಾ ಮಲಾಡ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳೆಯರನೇಕರು ಉಪಸ್ಥಿತರಿದ್ದರು. ರೀಯಾ ರಂಜೀತ್ ಪ್ರಾರ್ಥನೆಗೈದರು. ಪಲ್ಲವಿ ರಂಜಿತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here