Saturday 27th, July 2024
canara news

ಖಾರ್ ಪೂರ್ವದ ಪಹೇಲ್ವಾನ್ ಚಾಳ್‍ನ ಶ್ರೀ ಶನಿಮಹಾತ್ಮ ಸೇವಾ ಸಮಿತಿಯಿಂದ

Published On : 26 Feb 2022   |  Reported By : Rons Bantwal


ಸಂಪನ್ನಗೊಂಡ 55ನೇ ವಾರ್ಷಿಕ ಶನೀಶ್ವರ ಮಹಾಪೂಜೆ - ಗ್ರಂಥ ಪಾರಾಯಣ

ಮುಂಬಯಿ (ಆರ್‍ಬಿಐ), ಫೆ.25: ಖಾರ್ ಪೂರ್ವದ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿನ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಕಳೆದ ಶನಿವಾರ ತನ್ನ 55ನೇ ವಾರ್ಷಿಕ ಶನೀಶ್ವರ ಮಹಾಪೂಜೆಯನ್ನು ಶ್ರದ್ಧಾಪೂರ್ವಕವಾಗಿ ಸಂಪನ್ನಗೊಳಿಸಿತು. ಸಮಿತಿಯ ಅರ್ಚಕ ನಾಗೇಶ್ ಸುವರ್ಣ ಮತ್ತು ಜೊತೆ ಅರ್ಚಕ ಯೋಗೇಶ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಜೊತೆ ಅರ್ಚಕ ರವೀಂದ್ರ ಕೋಟ್ಯಾನ್ ಮತ್ತು ವಿಮಲಾ ಕೋಟ್ಯಾನ್ ಯಜಮಾನಿಕೆಯಲ್ಲಿ ಗಣಹೋಮ ಹಾಗೂ ಮಹಿಳಾ ಮಂಡಳಿ ಕಾರ್ಯದರ್ಶಿ ರೇವತಿ ಕೆ.ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಯಜಮಾನಿಕೆಯಲ್ಲಿ ಸತ್ಯನಾರಾಯಣ ಪೂಜೆ, ತಾರಾನಾಥ್ ಹೆಜ್ಮಾಡಿ ಮತ್ತು ಇ0ದಿರಾ ತಾರಾನಾಥ್ ಯಜಮಾನಿಕೆಯಲ್ಲಿ ಕಲಶ ಪ್ರತಿಷ್ಠಾಪನೆ ನಡೆಯಿತು.

ಸಮಿತಿಯ ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಬೋಜ ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಯೋಗೇಶ ಕೆ.ಹೆಜ್ಮಾಡಿ, ಗೌ| ಕೋಶಾಧಿಕಾರಿ ನಾಗೇಶ್ ಸುವರ್ಣ, ಉಪ ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ ಮತ್ತು ಮೋಹನ್ ಪೂಜಾರಿ ಇವರುಗಳ ಅರ್ಥ ವಿವರಣೆ, ವಾಚಾಟಿಕೆಯಲ್ಲಿ ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ ನಡೆಯಿತು.

ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ, ಮಹಿಳಾ ವಿಭಾಗದ ಗೌರವ ಕಾರ್ಯಧ್ಯಕ್ಷೆ ರಜನಿ ಆರ್.ಕೋಟ್ಯಾನ್, ಕಾರ್ಯಧ್ಯಕ್ಷೆ ಶೋಭಾ ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ ಸರಸ್ವತಿ ಪೂಜಾರಿ, ಕಾರ್ಯದರ್ಶಿ ರೇವತಿ ಶೆಟ್ಟಿ, ಉಪ ಕಾರ್ಯದರ್ಶಿ ಶೋಭಾ ಸಾಲಿಯಾನ್, ಯುವಕ ವೃಂದದ ಕಾರ್ಯಧ್ಯಕ್ಷ ವಿಜಯ ಸಾಲಿಯಾನ್, ದೀಕ್ಷಿತ್ ಎಲ್.ದೇವಾಡಿಗ, ಸಚಿನ್ ಪೂಜಾರಿ ಹಾಗೂ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಕಾ0ದಿವಲಿ ಸ್ಥಳೀಯ ಕಚೇರಿ ಕಾರ್ಯಕರ್ತರು, ಭಕ್ತರನೇಕರು ಭಜನೆಗೈದರು. ಬಳಿಕ ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಅಧ್ಯಕ್ಷ ಶಂಕರ್ ಕೆ.ಸುವರ್ಣ, ಉಪಾಧ್ಯಕ್ಷ ದೇವೇ0ದ್ರ ವಿ.ಬಂಗೇರ, ಜೊತೆ ಕಾರ್ಯದರ್ಶಿ ಜನಾರ್ದನ ಸಾಲಿಯಾನ್, ಜೊತೆ ಕೋಶಾಧಿಕಾರಿ ವಿನೋದ್ ಹೆಜ್ಮಾಡಿ, ಕೊಡುಗೈದಾನಿ ಉಮೇಶ್ ಕಾಪು, ಮಾಜಿ ನಗರ ಸೇವಕ ದೀಪಕ್ ಭೂತ್ಕರ್, ನಗರ ಸೇವಕಿ ಪ್ರಜ್ಞ ಭೂತ್ಕರ್, ಎಂಎನ್‍ಎಸ್‍ನ ಕಾರ್ಯಕರ್ತರಾದ ರೂಪೇಶ್ ಮಲಸುರೆ, ಕೊಠಡಿಯ ಮುಖ್ಯಾಧಿಕಾರಿ ಅಶೋಕ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್‍ನ ಜಯಂತಿ ಉಳ್ಳಾಲ್, ಶಂಕರ್ ಡಿ.ಪೂಜಾರಿ, ಧರ್ಮಪಾಲ್ ಅಂಚನ್, ವರದ ಉಳ್ಳಾಲ್, ಹರೀಶ್ ಜಿ.ಸಾಲಿಯಾನ್, ಧನಂಜಯ ಶಾ0ತಿ, ಹರೀಶ್ ಶಾ0ತಿ ಹೆಜ್ಮಾಡಿ, ರವೀಂದ್ರ ಶಾ0ತಿ ಉಪಸ್ಥಿತರಿದ್ದು ಬಿಲ್ಲವರ ಎಸೋಸಿಯೇಶನ್‍ನ ಸೇವಾದಳದ ಗಣೇಶ್ ಪೂಜಾರಿ ಹಾಗೂ ಸಂಗಡಿಗರ ಸಹಕಾರದಿಂದ ವಾರ್ಷಿಕ ಮಹಾಪೂಜೆ ಸಮಾಪನಗೊಂಡಿತು.

ನಾಳೆ (ಫೆ.27) ಆದಿತ್ಯವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸಮಿತಿ ಸದಸ್ಯರಿಂದ ಹಾಗೂ ಸದಸ್ಯರ ಮಕ್ಕಳಿಂದ ಸಂಗೀತ ನೃತ್ಯ, ಸಭಾ ಕಾರ್ಯಕ್ರಮ, ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಹರೀಶ್ ಜಿ.ಅಮೀನ್ ಹಾಗೂ ಸಮಿತಿಯ ಗೌರವ ಅಧ್ಯಕ್ಷರಾಗಿದ್ದು ದಾಂಪತ್ಯ ಜೀವನದ ಸ್ವರ್ಣಮಹೋತ್ಸವ ಪೂರೈಸಿದ ಶ್ರೀಧರ್ ಜೆ.ಪೂಜಾರಿ ಮತ್ತು ಶಾರದ ಪೂಜಾರಿ ದಂಪತಿಗೆ ಸನ್ಮಾನ, ಬಹುಮಾನ ವಿತರಣೆ ಬಳಿಕ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿ0ದ ಶನಿಮಹಾತ್ಮ ಮಹಾತ್ಮೆ ವಿಕ್ರಮಾದಿತ್ಯ ವಿಜಯ ಯಕ್ಷಗಾನ ಪ್ರದರ್ಶನ ಜರಗಲಿದೆ. ಮಹಾನಗರÀದ ಭಕ್ತಾಭಿಮಾನಿಗಳು ಆಗಮಿಸಿ ಮನಧನಗಳಿಂದ ಸಹಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಯೋಗೇಶ ಕೆ.ಹೆಜ್ಮಾಡಿ ತಿಳಿಸಿದ್ದಾರೆ.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here