Wednesday 18th, May 2022
canara news

ತುಳುನಾಡ ರಕ್ಷಣಾ ವೇದಿಕೆಯಿಂದ ಹೊದಿಕೆ ವಿತರಣೆ ಅಭಿಯಾನ ಸಮಾರೋಪ

Published On : 07 Mar 2022   |  Reported By : Rons Bantwal


ಮಾನವೀಯತೆ ಮೈಗೂಡಿಸಿ ಜೀವನ ಸಾಗಿಸಿ : ಡಾ| ಫ್ರಾಂಕ್ ಫೆರ್ನಾಂಡಿಸ್

ಮುಂಬಯಿ (ಆರ್‍ಬಿಐ), ಮಾ.07: ತುಳುನಾಡ ರಕ್ಷಣಾ ವೇದಿಕೆ ಗೌರವ ಸಲಹೆಗಾರ, ಮುಂಬಯಿಯಲ್ಲಿನ ಪ್ರತಿಷ್ಠಿತ ಉದ್ಯಮಿ ಫ್ರಾನ್ಸಿಸ್ ರಸ್ಕೀನ್ಹಾ ಅವರ ಪ್ರಧಾನ ಪ್ರಾಯೋಜಕತ್ವದೊಂದಿಗೆ ತುಳುನಾಡ ರಕ್ಷಣಾ ವೇದಿಕೆಯು ಹಮ್ಮಿಂಡಿದ್ದ ಹೊದಿಕೆ ವಿತರಣೆ ಅಭಿಯಾನ ಸಮಾರೋಪ ಕಾರ್ಯಕ್ರಮ ಕಳೆದ ಭಾನುವಾರ (ಮಾ.6) ಮಂಗಳೂರು ನಗರಪಾಲಿಕೆ ವಸತಿ ರಹಿತರ ಕೇಂದ್ರದಲ್ಲಿ ನಡೆಸಲ್ಪಟ್ಟಿತು. ಮಡ್ಯಾರ್ ಇಲ್ಲಿನ ಶಿವಗಿರಿ ಮಠದ ಶ್ರೀ ದುರ್ಗಾನಂದ ಸ್ವಾಮೀಜಿ ಮತ್ತು ವೇದಿಕೆಯ ಅಂತಾರಾಷ್ಟ್ರೀಯ ಗೌರವ ಅಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಬೀದಿ ಬೀದಿಗಳಲ್ಲಿ ಜೀವನ ಸಾಗಿಸಿ ರಾತ್ರಿಹೊತ್ತು ರಸ್ತೆ ಬದಿಯಲ್ಲಿ ಮಲಗುವ ನಿರ್ಗತಿಕರು ಹಾಗೂ ಬಡ ವರ್ಗದವರಿಗೆ ಚಳಿಗಾಲ ಹಾಗೂ ವಿಪರಿತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಬರದಂತೆ ಹೊದಿಕೆ ವಿತರಣಾ ಅಭಿಯಾನ ಮಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹಾಗೂ ಇತರ ಪದಾಧಿಕಾರಿಗಳು ನಿರಾಶ್ರಿತರಿಗೆ ಹೊದಿಕೆ ನೀಡುವ ಕಾರ್ಯಕ್ರಮ ಜ.23ರಿಂದ ನಡೆಸಿಕೊಂಡು ಬರುತ್ತಿದ್ದು ಇದುವರೆಗೆ 2 ತಿಂಗಳಿಂದ ಸುಮಾರು ಒಂದು ಸಾವಿರ ಹೊದಿಕೆ ಹಂಚಲಾಯಿತು ಎಂದು ಯೋಗೀಶ್ ಶೆಟ್ಟಿ ತಿಳಿಸಿದರು.

ನಿರಾಶ್ರಿತರಿಗೆ ಹಾಗೂ ಬಡವರಿಗೆ ಹೊದಿಕೆ ವಿತರಿಸಿ ಮಾತನಾಡಿದ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರು ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ. ಇಂತಹ ಸೇವೆಗೈದು ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಬದುಕನ್ನು ಹಸನುಗೊಳಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲಿ ತುಳುನಾಡ ರಕ್ಷಣಾ ಮುಖಂಡರುಗಳಾದ ಜೆ.ಇಬ್ರಾಹಿಂ, ಜ್ಯೋತಿ ಜೈನ್, ಕ್ಲಿಟಸ್ ಲೋಬೊ, ಹರೀಶ್ ಶೆಟ್ಟಿ, ಜೋಸೆಫ್ ಲೋಬೊ, ರೋಶನ್, ಗೈಟನ್ ಉಪಸ್ಥಿತರಿದ್ದು ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಸತಿ ಕೇಂದ್ರದ ಪ್ರಮುಖರಾದ ಎಂ.ಪಿ ಶೆಣೈ ಧÀನ್ಯವದಿಸಿದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here