Friday 9th, May 2025
canara news

ಎ.03: ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಇವರ ಗುರು ಮಂದಿರ ಉದ್ಘಾಟನೆ

Published On : 27 Mar 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಮಾ.25: ಬಿಲ್ಲವರ ಸೇವಾ ಸಂಘ (ರಿ.) ಸಂತೆಕಟ್ಟೆ ಕಲ್ಯಾಣಪುರ ಉಡುಪಿ ಇದರ ಬರುವ ಎ.2ನೇ ಶನಿವಾರ ಮತ್ತು ಎ.3ನೇ ಭಾನುವಾರ ನಯಂಪಳ್ಳಿ 4ನೇ ಅಡ್ಡರಸ್ತೆಯಲ್ಲಿನ ಸಂಘದ ನಿವೇಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠೆ ಗುರು ಮಂದಿರದ ಉದ್ಘಾಟನೆ ಹಾಗೂ ಸಭಾ ಭವನದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದೆ.

       

     Vikhyatananda Swamiji                 Shivagiri Satyananda Swamiji               Shekar Gujjarabettu

Billawa Seva Bhavana Santekatte


ಎ.02ನೇ ಶನಿವಾರ ಸಂಜೆ 3:00 ಗಂಟೆಯಿಂದ ಸಂತೆÀಕಟ್ಟೆ ಕೋಟಿಚೆನ್ನಯ ಕಟ್ಟೆಯಿಂದ ಗುರುಗಳ ಶಿಲಾ ಮೂರ್ತಿಯು ಶೋಭಾಯಾತ್ರೆಯಲ್ಲಿ ಮಂದಿರಕ್ಕೆ ಆಗಮನ, ಸ್ಥಳ ಶುದ್ಧಿ, ಉಗ್ರಾಣ ಮುಹೂರ್ತ, ದೀಪ ಪ್ರಜ್ವಲನಂ, ಗುರುಗಣಪತಿ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ಅಘೋರ ಹೋಮ, ಮಹಾ ಸುದರ್ಶನಯಾಗ ನಡೆಸಲಾಗುವುದು. ಎ.03ನೇ ಭಾನುವಾರ ಬೆಳಿಗ್ಗೆ ಪ್ರಾಥಃಕಾಲ 06:25 ಗಂಟೆÉಗೆ ವೇ| ಮೂ| ಬನ್ನಂಜೆ ಕೇಶವ ಶಾಂತಿ ಇವರ ಪೌರೋಹಿತ್ಯದಲ್ಲಿ ಮಹೋತ್ಸವದ ಬ್ರಹ್ಮಕಲಶ, ಶತಕುಂಭಾಭಿಷೇಕ, ಮಂಡಲ ಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀಗುರುಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠೆ ನಡೆಸಲಾಗುವುದು.

ಎ.03ನೇ ಭಾನುವಾರ ಬೆಳಿಗ್ಗೆ ಗಂಟೆ 5:00 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿಗಣಪತಿ ಹೋಮ, ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಅಮೃತ ಶಿಲಾ ಬಿಂಬ ಪ್ರತಿಷ್ಠೆ, ಸಾನಿಧ್ಯ ಕಲಶ, ತತ್ವಕಲಾ ಹೋಮ, ವೃಷಭ ಲಗ್ನದಲ್ಲಿ ಬ್ರಹ್ಮ ಕಲಶಾಭಿಷೇಕ, ಪೂರ್ವಾಹ್ನ 10:30 ಬೆಳಿಗ್ಗೆ ಗಂಟೆಗೆ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು (ಬೆಂಗಳೂರು) ಇದರ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮತ್ತು ಕೇರಳ ಶಿವಗಿರಿ ಮಠದÀ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಇವರ ಆಶೀರ್ವಚನದೊಂದಿಗೆ ಶ್ರೀ ನಾರಾಯಣಗುರು ಮಂದಿರದ ಉದ್ಘಾಟನೆ ನಡೆಯಲಿದೆ. ನಾಡಿನ ಅನೇಕ ಸಮಾಜ ಬಾಂಧವರು, ಗಣ್ಯಾತಿಗಣ್ಯರು ಅತಿಥಿüಗಳಾಗಿ ಆಗಮಿಸಲಿದ್ದು ಕರ್ನಾಟಕ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಸಮುದಾಯ ಭವನದ ಶಿಲಾನ್ಯಾಸ ನಡೆಸುವರು. ಕರ್ನಾಟಕ ಸರಕಾರದ ಹಿಂದುಳಿದ ವರ್ಗ ಮತ್ತು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾಭವನದ ಶಿಲಾನ್ಯಾಸ ನಡೆಸಲಿದ್ದು, ಇಂಧನ, ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಮತ್ತು ಉಡುಪಿ ಶಾಸಕ ಕೆ.ರಘುಪತಿ ಭಟ್ ಮಂದಿರ ಉದ್ಘಾಟಿಸುವರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಸೇವಾ ಕಛೇರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮುದಾಯ ಭವನದ ನೀಲನಕಾಶೆ ಅನಾವರಣ ನಡೆಸುವರು.

ಬಳಿಕ ಗುರುಗಳ ಪ್ರಸನ್ನ ಪೂಜೆ, ಪ್ರಸಾದ ವಿತರಣೆ,11:15 ಗಂಟೆಯಿಂದ ಸಭಾಕಾರ್ಯಕ್ರಮ, ಮಧ್ಯಾಹ್ನ 1:00 ಗಂಟೆಯಿಂದ ರವಿನಾಥ ವಿ.ಶೆಟ್ಟಿ, ತೋನ್ಸೆ ಪಡುಮನೆ (ಗುಜರಾತ್) ಸೇವಾರ್ಥ ಮಹಾ ಅನ್ನ ಸಂತರ್ಪಣೆ, ಸಂಜೆ 6:00 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ದೇಯಿ ಬೈದೆತಿ ಚಲನಚಿತ್ರ ಪ್ರದರ್ಶನ ನಡೆಸಲಾಗುವುದು.

ಭಗವದ್ಭಕ್ತರಾದತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಮಹೋತ್ಸವದಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಗುರುವರ್ಯರ ಕೃಪೆಗೆ ಪಾತ್ರರಾಗಿ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಬೇಕಾಗಿ ಸೇವಾ ಸಂಘದ ಗೌರವಾಧ್ಯಕ್ಷ ಭಾಸ್ಕರ ಜತ್ತನ್, ಅಧ್ಯಕ್ಷ ಶೇಖರ್‍ಗುಜ್ಜರ್‍ಬೆಟ್ಟು, ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು, ಕೋಶಾಧಿಕಾರಿ ಉಮೇಶ್ ಪೂಜಾರಿ, ಕಟ್ಟಡ ಸಮಿತಿ ಗೌರವಾಧ್ಯಕ್ಷ ಶ್ಯಾಮ್ ಕೆ.ಪೂಜಾರಿ, ಅಧ್ಯಕ್ಷ ಟಿ.ರಾಮ ಪೂಜಾರಿ, ಕಾರ್ಯದರ್ಶಿ ಶೇಖರ್ ಬಿ.ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಕೆ., ಮಹಿಳಾ ಘಟಕದ ಗೌರವಾಧ್ಯಕ್ಷೆ ಕುಸುಮ ಪೂಜಾರ್ತಿ, ಅಧ್ಯಕ್ಷೆ ಗೀತಾ ನಿರಂಜನ್, ಕಾರ್ಯದರ್ಶಿ ಉಷಾ ವಸಂತ್ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಈ ಮೂಲಕ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here