ಮಕ್ಕಳಲ್ಲಿ ಬಾಲ್ಯದಲ್ಲೇ ಮಾತೃಸಂಸ್ಕೃತಿಯನ್ನು ರೂಢಿಸಿ : ಶಾರದಾ ಎ.ಅಂಚನ್
ಮುಂಬಯಿ (ಆರ್‍ಬಿಐ), ಮಾ.23: ಎಲ್ಲರೂ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ತುಳುನಾಡ ಆಚಾರ ವಿಚಾರಗಳ ಬಗ್ಗೆ ತಿಳಿಸಿ ಮಾತೃಸಂಸ್ಕೃತಿಯನ್ನು ಉಳಿಸುವ ಕಾಯಕ ಪಾಲಕರದ್ದಾಗಬೇಕು. ತುಳುವರ ಆಚಾರ-ವಿಚಾರ, ದೈವ-ದೇವರ ಬಗ್ಗೆ ತಿಳಿಸಿದರೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸಬಹದು ಎಂದು ನಾಡಿನ ಹೆಸರಾಂತ ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ತಿಳಿಸಿದರು.
ಕಳೆದ ಭಾನುವಾರ ವಿಕ್ರೋಲಿ ಪೂರ್ವದಲ್ಲಿರುವ ವೀಕೆಸ್ ಇಂಗ್ಲೀಷ್ ಹೈಸ್ಕೂಲಿನ ಸಭಾಂಗಣದಲ್ಲಿ ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ತನ್ನ ಐದು ಪ್ರಾದೇಶಿಕ ವಲಯದ ಮಹಿಳಾ ವಿಭಾಗದ ಸಹಭಾಗಿತ್ವದೊಂದಿಗೆ ಆಚರಿಸಿದ ಜಾಗತಿಕ ಮಹಿಳಾ ದಿನಾಚರಣಾ ಸಂಭ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆಯನ್ನಿತ್ತು ಶಾರದಾ ಅಂಚನ್ ಮಾತನಾಡಿ ಮಹಿಳೆಯರು ನೆಮ್ಮದಿಯ ಬಾಳಿಗಾಗಿ, ಆರೋಗ್ಯವಂತರಾಗಿ ಸಧೃಡವಂತರಾಗಿ ಇರಬೇಕಾದರೆ ಯಾವ ರೀತಿಯ ಆಹಾರಪದ್ಧತಿ ಅನುಸರಿಸಬೇಕೆಂದು ತಿಳಿಸಿ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸುವ ಅಗತ್ಯ ಎಂದು ಮನಾವರಿಸಿ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುವ ವಿಧಾನವನ್ನು ತಿಳಿ ಹೇಳಿದರು.
ಶ್ರೀ ರಜಕ ಸಂಘ ಮುಂಬಯಿಯ ಕಾರ್ಯದರ್ಶಿ ಸುಮಿತ್ರ ಪಲಿಮಾರ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪ್ರವೀಣ ಕುಂದರ್, ಉಪಾಧ್ಯಕ್ಷೆ ಶಾಂತಿ ಸಾಲಿಯಾನ್, ವಿಶಾಲ ಡಿ. ಸಾಲಿಯಾನ್, ಸುಮಿತ ಸಾಲಿಯಾನ್, ಐದು ಪ್ರಾದೇಶಿಕ ವಲಯದ ಅಧ್ಯಕ್ಷೆಯರಾದ ಶಾಂತಸಾಲಿಯಾನ್, ಸಂಧ್ಯಾ ಸಾಲಿಯಾನ್, ಅನಿತ ಬುನ್ನನ್, ದಿವ್ಯ ಕುಂದರ್, ಶೀಲ ಸಾಲಿಯಾನ್, ಮುಂಬಯಿ ಮಹಿಳಾ ವಿಭಾಗದ ಪ್ರಥಮ ಕಾರ್ಯಾಧ್ಯಕ್ಷೆ ಸುಮಿತ್ರ ಗುಜರನ್ ಹಾಗೂ ಇತರ ಮಹಿಳಾ ಪದಾಧಿಕಾರಿಳು ವೇದಿಕೆಯಲ್ಲಿದ್ದು ಶಾರದ ಅಂಚನ್ ಅವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಜಕ ಸಮಾಜದ ಮಹಿಳೆಯರಾದ ಲಲಿತ ಸುಂದರ್ ಸಾಲಿಯಾನ್ ಮತ್ತು ಪ್ರಮೀಳಾ ಗಣೇಶ್ ಸಾಲಿಯಾನ್ ಇವರನ್ನು ಶಾಲು ಹೊದಿಸಿ ಸ್ಮರಣಿಕೆ, ಪುಷ್ಪಗುಚ್ಛ ನೀಡಿ ಗೌರವಿಸಿದರು.
ಡೊಂಬಿವಿಲಿ ವಿಭಾಗದ ಮಹಿಳೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಮಹಿಳೆಯರು ಮತ್ತು ಮಕ್ಕಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಅಂತೆಯೇ ವಿಶೇಷವಾಗಿ ನವಿಮುಂಬಯಿಯ ಬೇಬಿ ನಿರೋಶ ಸಾಲಿಯಾನ್ ಹಾಗೂ ಡೊಂಬಿವಿಲಿ ಪ್ರಾದೇಶಿಕ ವಲಯದ ಬೇಬಿ ಧನ್ಯತಾ ಸಾಲಿಯಾನ್ ಪ್ರಸ್ತುತ ಪಡಿಸಿದರು. ಇತರ ಪ್ರಾದೇಶಿಕ ವಲಯದ ಮಹಿಳೆಯರೂ ನೃತ್ಯ, ಸಂಗೀತ, ಪ್ರಹಸನ ಮತ್ತು ಗಾದೆಮಾತುಗಳನ್ನಾಡಿ ವಿವಿಧ ರೀತಿಯಲ್ಲಿ ಪ್ರೇಕ್ಷಕರನ್ನುರಂಜಿಸಿದರು. ಮುಂಬಯಿ ಮಹಿಳಾ ವಿಭಾಗದ ಸದಸ್ಯೆಯರು, ಸ್ವರ್ಗಸ್ಥರಾದ ಗಾನಕೋಕಿಲ ಲತಾ ಮಂಗೇಷ್ಕರ್ ಅವರ ಹಾಡಿಗೆ ನೃತ್ಯವನ್ನು ಮಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ವನಿತಾ ಶಶಿಧರ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ನಯನ ವಿಠಲ್ ಕುಂದರ್ ಧನ್ಯವಾದವನ್ನಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.