Wednesday 18th, May 2022
canara news

ಎ.09: ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠಾನದ ವಾರ್ಷಿಕ ಸಮಾವೇಶ

Published On : 03 Apr 2022   |  Reported By : Rons Bantwal


2021ನೇ ವಾರ್ಷಿಕ `ಚಕ್ರಧಾರಿ' ಪ್ರಶಸ್ತಿ-`ಕೃಷಿ ಬಂಧು' ಪುರಸ್ಕಾರಪ್ರದಾನ

ಮುಂಬಯಿ, ಎ.01: ಸಾಹಿತ್ಯ, ಸಂಸ್ಕøತಿ, ಜಾನಪದ, ಐತಿಹಾಸಿಕ, ಸಾಮಾಜಿಕವಾಗಿ ಕಳೆದ ಒಂದು ದಶಕದಿಂದ ತನ್ನ ಇತಿಮಿತಿಯೊಳಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವ ಮಯೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನ ತನ್ನ 12ನೇ ವಾರ್ಷಿಕ ಸಮಾವೇಶವನ್ನು ಇದೇ ಬರುವ ಎ.09ರ ಶನಿವಾರ ಸಂಜೆ 3.00 ಗಂಟೆಯಿಂದ ಕನ್ನಡ ವೆಲ್ಫೇರ್ ಸೊಸೈಟಿ, ಪಂತ್‍ನಗರ, ಘಾಟ್ಕೋಪರ್ ಪೂರ್ವ ಇಲ್ಲಿ ಹಮ್ಮಿಕೊಂಡಿದೆ.

   

Dharmapal Devdga                    K L Shantarama

   

Suresh S.Bhandary.                Vishwanath R.Hegde.

ಈ ಶುಭವಸರದಲ್ಲಿ ಮುಂಬಯಿಯ ಹಿರಿಯ ಸಮಾಜ ಸೇವಕರು, ಸಂಘಟಕ, ಭಾಷೆ, ಸಂಸ್ಕøತಿಗಳ ಆರಾಧಕರಾದ ಧರ್ಮಪಾಲ ಯು.ದೇವಾಡಿಗ ಇವರಿಗೆ ಪ್ರತಿಷ್ಠಾನದ 2021ನೇ ವಾರ್ಷಿಕ `ಚಕ್ರಧಾರಿ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂತೆಯೇ ವೃತ್ತಿಯಿಂದ ಇಂಜಿನಿಯರ್ ಆಗಿರುವ ಕೆ.ಎಲ್ ಶಾಂತಾರಾಮ ಅವರಿಗೆ `ಕೃಷಿ ಬಂಧು' ಪುರಸ್ಕಾರ ಪ್ರದಾನಿಸಿ ಗೌರವಿಸಲಾಗುವುದು. ಹಾಗೂ ಪ್ರತಿಷ್ಠಾನದ10ನೇ ಪ್ರಕಾಶಿತ `ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ' ಕೃತಿ ಬಿಡುಗಡೆ ಗೊಳಿಸಲಾಗುವುದು.

ಎ.09ರಂದು ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪೆÇಲ್ಯ ಉಮೇಶ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಆಗಮಿಸಲಿದ್ದು ನಿತ್ಯಾನಂದ ಡಿ.ಕೋಟ್ಯಾನ್, ಅಶೋಕ್ ಪಕ್ಕಳ ಇವರು ಅಭಿನಂದನಾ ನುಡಿ ಮತ್ತು ನಳಿನಿ ಪ್ರಸಾದ್ ಕೃತಿ ಪರಿಚಯಿಸಲಿದ್ದಾರೆ. ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ, ಕೃತಿಯ ಸಂಪಾದಕ ವಿಶ್ವನಾಥ ದೊಡ್ಮನೆ, ಉಪಾಧ್ಯಕ್ಷ ರಾಜೇಶ್ ಗೌಡ, ಪದ್ಮನಾಭ ಸಪಳಿಗ ಉಪಸ್ಥಿತರಿದ್ದು ದೇಶಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ ಮಹಾನಗರದ ಸಮಸ್ತ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಪ್ರತಿಷ್ಠಾನದ ಪರವಾಗಿ ವಿಶ್ವನಾಥ ದೊಡ್ಮನೆ ಈ ಮೂಲಕ ವಿನಂತಿಸಿದ್ದಾರೆ.

ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ: ಸನಾತನ ಧರ್ಮಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂವೇದನಶೀಲ ವಿಷಯಗಳ ಮೇಲೆ ನಾಡಿನ ಐವತ್ತಕ್ಕೂ ಅಧಿಕ ಹಿರಿ-ಕಿರಿಯ ಬರಹಗಾರರು, ಚಿಂತಕರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಅಪರೂಪದ ಕೃತಿ ಇದಾಗಿದೆ.

ಧರ್ಮಪಾಲ ದೇವಾಡಿಗ: ಸ್ವಲ್ಪ ತನಗಾಗಿ ಉಳಿದದ್ದು ಸಮಾಜ, ನಾಡು ನುಡಿಗಾಗಿ ಎನ್ನುವ ಧ್ಯೇಯವನ್ನು ಅಳವಡಿಸಿ ಕೊಂಡಿರುವ ಧರ್ಮಪಾಲ ಇವರು ತನ್ನ ಹತ್ತರ ಕಿಶೋರಾವಸ್ಥೆಯಲ್ಲಿ ಮುಂಬಯಿಗೆ ಬಂದವರು. ಅವರ ಜೀವನದ ಬಹುಭಾಗ ಕಳೆದದ್ದು ಮುಂಬಯಿಯಲ್ಲಿ. ಆದರೂ ಕರ್ಮಭೂಮಿಯಷ್ಟೇ ಜನ್ಮಭೂಮಿ ಪ್ರೀತಿಸುವ ಇವರು ತುಳು-ಕನ್ನಡ ಭಾಷಾಭಿಮಾನಿಯಾಗಿ ವಿವಿಧ ಸಾಮಾಜಿಕ, ಸಾಂಸ್ಕøತಿಕ ಸಂಘಟನೆಗಳ ನೇತೃತ್ವ ವಹಿಸಿ ಅದನ್ನು ಜವಾಬ್ದಾರಿಯಿಂದ ನಿಭಾಯಿಸಿದವರು. ಶತಮಾನದ ಹೊಸ್ತಿಲಲ್ಲಿರುವ ಮುಂಬಯಿಯ ಹಿರಿಯ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘದ ನೂತನ ಭವನದ ನಿರ್ಮಾಣ ಕಾರ್ಯದಿಂದ ಹಿಡಿದು ಅಖಿಲ ಭಾರತೀಯ ತುಳು ಒಕ್ಕೂಟದ ಅಧ್ಯಕ್ಷರಾಗಿ, ವಿಶ್ವ ತುಳು ಸಮ್ಮೇಳನ ಸಮಿತಿ ಉಪಾಧ್ಯಕ್ಷರಾಗಿ, ಅಖಿಲ ಭಾರತ ತುಳು ಒಕ್ಕೂಟ ಇದರ ಅಧ್ಯಕ್ಷರಾಗಿದ್ದು, ಮಂಗಳೂರು ಕಾವೂರು ಇಲ್ಲಿನ ತುಳು ಒಕ್ಕೂಟದ ಕಚೇರಿ ನಿರ್ಮಾಣ, ಉಡುಪಿ ಬಾರ್ಕೂರು ಇಲ್ಲಿನ ಶ್ರೀ ಏಕನಾಥೇಶ್ವರಿ ದೇವಾಲಯ ನಿರ್ಮಾಣದ ಉಸ್ತುವಾರಿಯಲ್ಲಿ ವಿಶೇಷ ಜವಾಬ್ದಾರಿ, ರೋಟರಿ ಕ್ಲಬ್ ಮುಲುಂಡ್ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಜನಾನುರೆಣಿಸಿದ್ದಾರೆ. ತಮ್ಮ ಉದ್ಯಮದಷ್ಟೇ ನಾಡು ನುಡಿಗೆ ಸಮಯ ಮೀಸಲಿಟ್ಟಿರುವುದು ಅವರ `ಧರ್ಮಪಾಲ' ಹೆಸರಿಗೆ ಅನ್ವರ್ಥವಾಗಿದೆ.

ಕೆ.ಎಲ್.ಶಾಂತಾರಾಮ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಅಲ್ಲಿನನ ಹಂಸಗಾರ ಮೂಲತಃ ಶಾಂತರಾಮ ಮುಂಬಯಿ ಚೆಂಬೂರು ನಿವಾಸಿ. ಹಂಸಗಾರದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಉನ್ನತ ಶಿಕ್ಷಣ ಪೂರೈಸಿರುವರು. ಸದ್ಯ ಯುಟಿಲಿಟಿ ಎಕ್ಸ್‍ಪರ್ಟ್ ಇನ್ ಮುಂಬಯಿ ಮೆಟ್ರೋದಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಡುವಿಲ್ಲದ ವೃತ್ತಿ ಜೀವನದ ಮಧ್ಯೆ ತಮ್ಮ ಅಟೋಮಿಕ್ ಸೊಸೈಟಿ ಖಾಲಿ ಜಾಗದಲ್ಲಿ ಸೊಸೈಟಿಯ ಅನುಮತಿಯ ಮೇರೆಗೆ ಬಾಳೆ, ತೆಂಗಿನತೋಟ ನಿರ್ಮಿಸಿರುವರು. ಬಾಳೆ, ತೆಂಗು, ಅಲ್ಲದೆ ನುಗ್ಗೆ, ಪಪ್ಪಾಯಿ, ಅರಿಶಿನ ಈ ರೀತಿಯ ವಿವಿಧ ತರಕಾರಿಗಳನ್ನು ಸಾವಯವ ಗೊಬ್ಬರ ಬಳಸಿ ಬೆಳೆಸುತ್ತಾರೆ. ಅಲ್ಪ ಜಾಗದಲ್ಲಿ ಸಹ ವಿವಿಧ ಬೆಳೆ ಬೆಳೆಯುವ ಶಾಂತಾರಾಮ ಅವರ ಪ್ರವೃತ್ತಿಗೆ ಹಾಗೂ ಕೃಷಿ ಪ್ರೇಮ ಪರಿಸರದವರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here