Friday 9th, May 2025
canara news

ಘಾಟ್ಕೋಪರ್‍ನಲ್ಲಿ ಜರುಗಿದ ಮಯೂರ ವರ್ಮ ಪ್ರತಿಷ್ಠಾನದ ವಾರ್ಷಿಕ ಸಮಾವೇಶ

Published On : 10 Apr 2022   |  Reported By : Rons Bantwal


ಭಾರತದಲ್ಲ್ಲಿ ಹುಟ್ಟಲು ಭಾಗ್ಯವಂತರಾಗಬೇಕು: ಪೆÇಲ್ಯ ಉಮೇಶ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.09: ಭಗವಂತನಿಂದ ಸ್ವತಃ ಭಾರತೀಯರಿಗಾಗಿ ನಿರ್ಮಿಸಲ್ಪಟ್ಟ ದೇಶವೇ ಭಾರತ ಆಗಿದೆ. ಅದೇ ಹಿಂದುರಾಷ್ಟ್ರ. ಇಲ್ಲಿ ಹುಟ್ಟಿದವರು ಧರ್ಮಿಷ್ಠರು, ಮಹಾನುಭಾವರು, ಪರೋಪಕಾರಿಗಳು ಮತ್ತು ಲೋಕಪ್ರಿಯರಾಗಿದ್ದಾರೆ. ಆದ್ದರಿಂದ ಭಾರತ ದೇಶದಲ್ಲಿ ಹುಟ್ಟಲು ಭಾಗ್ಯಬೇಕಾಗುತ್ತದೆ ಎಂದು ಸಮಾಜ ಸೇವಕ, ಹಿರಿಯ ಉದ್ಯಮಿ ಪೆÇಲ್ಯ ಉಮೇಶ್ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಘಾಟ್ಕೋಪರ್ ಪೂರ್ವ ಪಂತ್‍ನಗರದಲ್ಲಿನ ಕÀನ್ನಡ ವೆಲ್ಫೇರ್ ಸೊಸೈಟಿ ಸಭಾಗೃಹದಲ್ಲಿ ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠಾನ ಆಯೋಜಿಸಿದ್ದ 12ನೇ ವಾರ್ಷಿಕ ಸಮಾವೇಶದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು ದೀಪ ಪ್ರಜ್ವಲಿಸಿ ಸಮಾವೇಶ ಉದ್ಘಾಟಿಸಿ, ಮಯೂರ ವರ್ಮ ಪ್ರತಿಷ್ಠಾನದ ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸಂಪಾದಿತ ಪ್ರತಿಷ್ಠಾನದ 10ನೇ ಪ್ರಕಾಶಿತ `ಸನಾತನ ಧರ್ಮವೂ ಪ್ರಕೃತಿಯ ಆರಾಧನೆಯೂ' ಕೃತಿ ಬಿಡುಗಡೆ ಗೊಳಿಸಿ ಉಮೇಶ್ ಶೆಟ್ಟಿ ಮಾತನಾಡಿದರು.

ಪರೋಪಕಾರಿ ಜೀವನಕ್ಕೆ ಸನ್ಮಾನಗಳು ಸೂಕ್ತವಾದ ಗೌರವವಾಗಿರುತ್ತದೆ. ಇದು ಜೀವನದಲ್ಲಿ ಇತರರಿಗೆ ಮಾರ್ಗದರ್ಶನ ಮಾಡಲು ಪ್ರೇರಾಪಣೆಯೂ ಹೌದು. ಸದ್ಯ ಭಾರತೀಯ ಸನಾತನ ಸಂಸ್ಕೃತಿಯ ಸಿಂಚನ ಮಾಡುವ ಕಾಲ ಸನ್ನಿಹಿತವಾಗಿದ್ದು ಇದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಪ್ರತಿಯೊಬ್ಬ್ಬ ಭಾರತೀಯನೂ ದೇಶ, ಧರ್ಮ, ಕುಟುಂಬದ ರಕ್ಷಣೆಗೆ ಕಟಿಬದ್ಧರಾಗಬೇಕಾಗಿದ್ದು ಇದು ನಮ್ಮನ್ನು ರಕ್ಷಿಸುತ್ತದೆ ಎಂದೂ ಉಮೇಶ್ ಶೆಟ್ಟಿ ಮನವರಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಗಾಯತ್ರಿ ಪರಿವಾರದ ಮುಂದಾಳು ಜಯಲಕ್ಷ್ಮೀ ಶೆಟ್ಟಿ, ವೇದಿಕೆಯಲ್ಲಿ ಮುಂಬಯಿಯ ಹಿರಿಯ ಸಮಾಜ ಸೇವಕ, ಸಂಘಟಕ ಧರ್ಮಪಾಲ ಯು.ದೇವಾಡಿಗ ಇವರಿಗೆ ಪ್ರತಿಷ್ಠಾನದ 2021ನೇ ವಾರ್ಷಿಕ `ಚಕ್ರಧಾರಿ' ಪ್ರಶಸ್ತಿ ಹಾಗೂ ಮುಂಬಯಿ ಮೆಟ್ರೋ ಸಂಸ್ಥೆಯ ವಿಶೇಷಾಧಿಕಾರಿ ಕೆ.ಎಲ್ ಶಾಂತಾರಾಮ ಹಂಸಗಾರ ಇವರಿಗೆ `ಕೃಷಿ ಬಂಧು' ಪುರಸ್ಕಾರ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಜಯಲಕ್ಷ್ಮೀ ಶೆಟ್ಟಿ ಮಾತನಾಡಿ ಪ್ರಕೃತಿಯ ಸಾನಿಧ್ಯದಲ್ಲಿ ಬೆಳೆದವರು ಸಂಸ್ಕೃತಿ ಪ್ರಿಯರಾಗುತ್ತಾರೆ. ಇದು ನಿರ್ಭಯತಾ ಬಾಳಿಗೆ ಅಡಿಗಟ್ಟು. ಆದ್ದರಿಂದ ಪ್ರಕೃತಿಯ ಜೊತೆಗಿನ ನಂಟು ಬೆಳೆಸಿರಿ. ಇದು ಸಂಸ್ಕೃತಿಯ ಬಾಳಿಗೆ ಪ್ರೇರಕವಾಗಬಲ್ಲದು. ಇದು ವಿಚಾರ ಕ್ರಾಂತಿಯಿಂದ ಮಾತ್ರ ಸಾಧ್ಯವಾಗುವುದು ಎಂದರು.

ಕಷ್ಟದಾಯಕ ಸಾಧನೆಗೆ ಹಿರಿಯರ ದಯೆಯೊಂದಿಗೆ ನಮ್ಮ ಪರಿಶ್ರಮವೂ ಅವಶ್ಯವಾಗಿದೆ. ಇವೆರಡುಗಳ ಜೊತೆಗೆ ಬದ್ಧತೆಯೊಂದಿಗೆ ಮುನ್ನಡೆದರೆ ಸಾಧನೆ ಸುಲಭವಾಗುವುದು. ಇಂತಹ ಸಾಧನೆಯ ಫಲವಾಗಿ ಈ ಗೌರವವಾಗಿ ಸ್ವೀಕರಿಸುವೆ. ಈಗ ನಾನು ಚಕ್ರಧಾರಿನಾಗಿದ್ದು ಇದನ್ನು ಚಕ್ರವ್ಯೂಹಕನಾಗಿಸಿ ಪ್ರಶಸ್ತಿಯ ಮೌಲ್ಯವನ್ನು ಇನ್ನಷ್ಟು ಪಸರಿಸುವೆ ಎಂದÀು ಪ್ರಶಸ್ತಿಗೆ ಉತ್ತರಿಸಿ ಧರ್ಮಪಾಲ್ ತಿಳಿಸಿದರು.

ಕೆ.ಶಾಂತಾರಾಮ ಗೌರವಕ್ಕೆ ಉತ್ತರಿಸಿ ಮಣ್ಣು ಪರಿಸರ ಒಳ್ಳೆದಿದ್ದರೆ ಕೃಷಿ ತನ್ನದಾಗಿಯೇ ಸಮೃದ್ಧಿ ಆಗುತ್ತದೆ. ಹಾಗೆಯೇ ನಮ್ಮಲ್ಲಿನ ಕೃಷಿ ಪ್ರೇಮ ಮತ್ತು ಉತ್ಪಧನಾ ಮನೋಭಾವನೆಗಳÀು ಜೊತೆಗೂಡಿಸಿದರೆ ಕೃಷಿಕ ಆಗಬಹುದು ಅನ್ನುವುದಷ್ಟೇ ನಾನು ತೋರಿಸಿದ್ದೇನೆ. ಮಾಡಿದ ಈ ಸಾಧನೆ ಮನವರಿಸಿ ಗೌರವಿಸಿದ್ದಕ್ಕೆ ವಂದನೆಗಳು ಎಂದರು.

ನಾವು ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲ ಅವರ ಅಭಿಲಾಷೆಗಳನ್ನು ಪೂರೈಸಲು ಕಲಿಯಬೇಕು. ಅಂತೆಯೇ ಪೆÇೀಷಕರು ಮಕ್ಕಳ ಅರ್ಹತೆಗಳನ್ನು ಅರಿತು ಸಲಹಿ ಪ್ರೇರಿಪಿಸುವ ಅಗತ್ಯವಿದೆ. ಈ ಎಲ್ಲವೂಗಳ ಮಧ್ಯೆ ನಮ್ಮ ಧರ್ಮ ಸಂಸ್ಕೃತಿಯನ್ನು ಮಕ್ಕಳಲ್ಲಿ ರೂಪಿಸಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ವಿಶ್ವನಾಥ ದೊಡ್ಮನೆ ಮಾಡುತ್ತಿರುವುದು ಸುತ್ಯರ್ಹ. ಇದೂ ಸ್ವಧರ್ಮದ ಪಾಲನೆ ಜೊತೆ ಧÀರ್ಮದ ಆರಾಧನೆಯನ್ನು ರೂಢಿಸುವಲ್ಲಿ ಪ್ರೇರಕವಾಗುವುದು ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಸುರೇಶ್ ಭಂಡಾರಿ ತಿಳಿಸಿದರು.

ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಂಟರವಾಣಿ ಮಾಸಿಕದ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಪುರಸ್ಕೃತರಿಗೆ ಅಭಿನಂದನಾ ನುಡಿಗಳನ್ನಾಡಿದರು. ನಳಿನಿ ಪ್ರಸಾದ್ ಕೃತಿ ಪರಿಚಯಿಸಿದರು.

ಕÀನ್ನಡ ವೆಲ್ಫೇರ್ ಸೊಸೈಟಿ ಗೌ| ಪ್ರ| ಕಾರ್ಯದರ್ಶಿ ಸುಧಾಕರ್ ಎಲ್ಲೂರು, ಅಡ್ವಕೇಟ್ ಆರ್.ಎಂ ಭಂಡಾರಿ, ಪ್ರತಿಷ್ಠಾನದ ನಿಕಟಪೂರ್ವಾಧ್ಯಕ್ಷ ವಿ.ಆರ್ ಭಟ್, ಕೋಶಾಧಿಕಾರಿ ಪದ್ಮನಾಭ ಸಪಳಿಗ, ಡಾ| ಸತೀಶ್ ಬಂಗೇರ, ನಿತ್ಯ ಮುಂಡ್ಕೂರು, ಕು| ಅನಘ ದೊಡ್ಮನೆ, ಕು| ಸುಧುಘ ದೊಡ್ಮನೆ, ಸವಿತಾ ಸುರೇಶ್ ಶೆಟ್ಟಿ, ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಶಭಕ್ತಿಗೀತೆಯೊಂದಿಗೆ ಆದಿಗೊಂಡಿತು. ವಿಜಯಾ ಪೂಜಾರಿ ಮತ್ತು ಬಳಗ ಪ್ರಾರ್ಥನೆಯನ್ನಾಡಿದರು. ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿ ಪ್ರಸ್ತಾವನೆಗೈದರು. ಉಮಾ ಭಟ್ ಮತ್ತು ಕುಮುದಾ ಆಳ್ವ ಪ್ರಶಸ್ತಿಪತ್ರ ವಾಚಿಸಿದರು. ಉಷಾ ಕೊಡ್ಲೆಕೆರೆ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here