Saturday 25th, June 2022
canara news

ಸಂಸದ ಗೋಪಾಲ ಶೆಟ್ಟಿ ಅವರಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ

Published On : 23 Apr 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.21: ಉತ್ತರ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವರು ಇಂದಿಲ್ಲಿ ಗುರುವರ ಕರ್ನಾಟಕ ಕರಾವಳಿಯ ಉಡುಪಿಯ ಉಚ್ಚಿಲದಲ್ಲಿ 35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದವನ್ನು ಪಡಕೊಂಡರು.

ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿ ಇದರ ಬೋರಿವಿಲಿ ಶೈಕ್ಷಣಿಕ ಯೋಜನಾ ಸಮಿತಿ ಉಪಾಧ್ಯಕ್ಷ, ಉತ್ತರ ಮುಂಬಯಿ ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ, ಎರ್ಮಾಳ್ ಹರೀಶ್ ಶೆಟ್ಟಿ, ಶ್ರೀ ಮಹಾಲಕ್ಷ್ಮೀ ದೇವಾಲಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮ ಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ.ಶಂಕರ್, ಅಧ್ಯಕ್ಷ ಗುಂಡು ಬಿ.ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕ್ಷೇತ್ರದ ತಂತ್ರಿ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಹಿರಿಯ ಅರ್ಚಕ ವೆ|ಮೂ| ವೆಂಕಟನರಸಿಂಹ ಉಪಾಧ್ಯಾಯ, ವೆ|ಮೂ| ರಾಘವೇಂದ್ರ ಉಪಾಧ್ಯಾಯ, ವೆ|ಮೂ| ವಿಷ್ಣು ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದು ಸಂಸದರನ್ನು ಗೌರವಿಸಿದರು.

 
More News

ಮುಂಬಯಿಯ ಕನ್ನಡತಿ ಡಾ| ಪ್ರಭಾ ಎನ್.ಪಿ ಸುವರ್ಣ ಮುಡಿಗೇರಿದ
ಮುಂಬಯಿಯ ಕನ್ನಡತಿ ಡಾ| ಪ್ರಭಾ ಎನ್.ಪಿ ಸುವರ್ಣ ಮುಡಿಗೇರಿದ
ದೆಹಲಿ ದ್ವಾರಕ ಸೆಕ್ಟರ್‍ನಲ್ಲಿ 108ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ0ತಿ
ದೆಹಲಿ ದ್ವಾರಕ ಸೆಕ್ಟರ್‍ನಲ್ಲಿ 108ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ0ತಿ
ಕೇರಳ-ಕೊಂಡೆವೂರುನಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಂಸ್ಕೃತಿಕ ಉತ್ಸವ
ಕೇರಳ-ಕೊಂಡೆವೂರುನಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಂಸ್ಕೃತಿಕ ಉತ್ಸವ

Comment Here