Friday 19th, April 2024
canara news

ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Published On : 30 Apr 2022   |  Reported By : Rons Bantwal


ನಮ್ಮೂರ ಶಾಲೆ ಊರಿನ ಪ್ರಗತಿಯ ಮಣಿಮುಕುಟ : ಮೋಹನ್ ಮಾರ್ನಾಡ್

ಮುಂಬಯಿ (ಆರ್‍ಬಿಐ), ಎ.28: ಊರಿನ ಶಾಲೆ ಆ ಊರಿನ ಪ್ರಗತಿಯ ಮಣಿ ಮುಕುಟ. ನಮ್ಮೂರ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆದರೆ ಅದರ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ. ಶಿಥಿüಲಾವಸ್ಥೆಯಲ್ಲಿ ದೀನವಾಗಿ ಕಣ್ಣು ಬಿಟ್ಟು ನಮ್ಮೆಡೆಗೇ ಇಣುಕುತ್ತಿರುವ ನಮ್ಮ ಕರುಳ ಕುಡಿಯಂತಹ ಆ ಶಾಲೆಯನ್ನು ನೋಡುವಾಗ ಕರುಳು ಕಿತ್ತು ಬರುತ್ತದೆ. 50 ವರ್ಷದ ಹೊಸ್ತಿಲಲ್ಲಿರುವ ನಮ್ಮೂರ ಯುವಕ ಮಂಡಲದ ಯುವ ಮನಸುಗಳು ರಮೇಶ್ ಎಸ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಮ್ಮೂರ ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಪಡು ಮಾರ್ನಾಡು, ಅಮಣೊಟ್ಟು, ಬಾಕ್ಯಾರು ಶಾಲೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಮಾರ್ನಾಡ್ ತಿಳಿಸಿದರು.

ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ ನಿಮಿತ್ತ ತಮ್ಮೂರ ಮಹಾವೀರ ಶಾಲಾ ನವೀಕರಣಕ್ಕೆ ಸಜ್ಜಾಗಿದ್ದು ಆ ನಿಮಿತ್ತ ಮುಂಬಯಿನಲ್ಲಿನ ಸಭೆಯನ್ನುದ್ದೇಶಿಸಿ ಮೋಹನ್ ಮಾರ್ನಾಡ್ ತಿಳಿಸಿದರು.

ಇದೇ ಶಾಲೆಯಲ್ಲಿ ಆಡಾಡಿ ಓಡಾಡಿ ವಿದ್ಯೆ ಬುದ್ಧಿಯನ್ನುಂಡ ಅದೆಷ್ಟೋ ಶ್ರೀಮಂತ ಮನಸುಗಳು ಹಾಗೂ ಊರ ಶಾಲೆಯ ಮಹತ್ವವನ್ನರಿತ ಇತರ ಸಮಾನ ಮನಸ್ಕರು ವಿಶ್ವದೆಲ್ಲೆಡೆ ಹರಡಿರುವ ನಿಮ್ಮೆಲ್ಲರ ಸಹಕಾರ ಸಹಾಯ ಯಾಚಿಸುವ ಘನ ಕಾರ್ಯವನ್ನು ಹೊರನಾಡಿನಲ್ಲಿರುವ ನಮ್ಮ ಹೆಗಲಿಗೇರಿಸಿಕೊಂಡಿದ್ದೇವೆ ಆದ್ದರಿಂದ ಶಿಕ್ಷಣಪ್ರೇಮಿಗಳು, ಹಳೆ ವಿದ್ಯಾಥಿರ್üಗಳು ತನು ಮನ ಧನದ ಸಹಕಾರದೊಂದಿಗೆ ಅಂದಾಜು 10 ಲಕ್ಷ ವೆಚ್ಚದ ಶಾಲಾ ದುರಸ್ತಿ ಕಾರ್ಯದಲ್ಲಿ ನಮ್ಮ ಹೆಗಲಿಗೆ ಹೆಗಲಾಗಿ ನಿಲ್ಲಬೇಕೆಂದು ಮೋಹನ್ ಮಾರ್ನಾಡ್ ಈ ಮೂಲಕ ಬಿನ್ನವಿಸಿಕೊಂಡಿದ್ದಾರೆ.

ಇದೇ ಮೇ.22ರ ಭಾನುವಾರ ನಡೆಯಲಿರುವ ಸ್ವರ್ಣ ಮಹೋತ್ಸವದ ಸಮಾರಂಭದಲ್ಲೂ ಎಲ್ಲರೂ ಉಪಸ್ಥಿತರಿರಬೇಕಾಗಿ ಯುವಕ ಮಂಡಲ ಇದರ ಕೋಶಾಧಿಕಾರಿ ದೀಪಕ್ ಎಸ್.ಕುಡ್ದ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಘು ಸಿ.ಪೂಜಾರಿ, ಅಧ್ಯಕ್ಷ ಮೋಹನ್ ಮಾರ್ನಾಡ್ (98210544 26) ಈ ಮೂಲಕ ವಿನಂತಿಸಿದ್ದಾರೆ.

ಈ ಶಾಲೆಯ ಹಳೆ ವಿದ್ಯಾಥಿರ್üಗಳು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವರೆಂಬ ಭರವಸೆಯಿಂದ ವಿನಂತಿಸಲಾಗಿದೆ. ಶಿಲಾ ಫಲಕದಲ್ಲಿ ಬರೆಯಬೇಕಾದ ಹೆಸರನ್ನೂ ನಮೂದಿಸಿ. ಶಾಲಾ ಹಿತೈಷಿಗಳೂ ಸಾಧ್ಯವಾಗಿಸಿ ತಮ್ಮ ಧನ ಸಹಾಯವನ್ನು ಯುವಕ ಮಂಡಲ (ರಿ.) ಪಡುಮರ್ನಾಡ್ ಖಾತೆ ಸಂಖ್ಯೆ 520101043908191, IಈSಅ ಅoಜe: UಃIಓ0901679, Uಟಿioಟಿ ಃಚಿಟಿಞ oಜಿ Iಟಿಜiಚಿ, ಂಟಚಿಟಿgಚಿಡಿ ಒooಜbiಜಡಿi ಇದಕ್ಕೆ ಕಳುಹಿಸಿ ಸಹಕರಿಸುವಂತೆ ಮಾರ್ನಾಡು ಪಣರೊಟ್ಟು ಮಾರ್ನಾಡ್ ಬ್ರದರ್ಸ್ ಹಾಗೂ ಮುಂಬಯಿ ಸಂಚಾಲಕ ವಾಸುದೇವ ಶೆಟ್ಟಿ ಮಾರ್ನಾಡ್ (91 99205 72713) ಹಾಗೂ ಸುರೇಂದ್ರ ಶೆಟ್ಟಿ ಮಾರ್ನಾಡ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here