Thursday 18th, April 2024
canara news

ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ

Published On : 30 Apr 2022   |  Reported By : Rons Bantwal


ಮೇ.01:ವಾಶಿ ನವಿಮುಂಬಯಿಯಲ್ಲಿ ಜಾಗತಿಕ ಸಾರಸ್ವತ ಸಂಗಮ

ಮುಂ¨ಯಿ (ಆರ್‍ಬಿಐ) ಎ.23: ವಿಶ್ವ ಸರಸ್ವತ್ ಒಕ್ಕೂಟ ಹಾಗೂ ಆಲ್ ಇಂಡಿಯಾ ಸಾರಸ್ವತ್ ಕಲ್ಚರಲ್ ಆರ್ಗನೈಝೇಶನ್ ಮತ್ತು ಜಿಎಸ್‍ಬಿ ಸಭಾ ನವಿ ಮುಂಬಯಿ (ಬಾಲಾಜಿ ಮಂದಿರ ಪ್ರಸಿದ್ಧಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮಂಡಳಿ) ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಾರಸ್ವತ್ ಸಮಾಜ ಬಾಂಧವ ರ ಸಂಗಮವು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಶುಭಾಶೀರ್ವದಗಳೊಂದಿಗೆ ಬರುವ ರವಿವಾರ (ಮೇ.01) ಬೆಳಿಗ್ಗೆ 9.00 ಗಂಟೆಯಿಂದ ನವಿ ಮುಂಬಯಿಯ ವಾಶಿಯಲ್ಲಿನ ರಾಜೀವ್ ಗಾಂಧಿ ಪಾರ್ಕ್‍ನ ಸಮೀಪದÀಲ್ಲಿರುವ ಸೆಕ್ಟರ್-29, ಪ್ಲಾಟ್-59 ಗೋಲ್ಡ್ ಕ್ರೈಸ್ಟ್ ಹೈಸ್ಕೂಲ್ ಸಭಾಗೃಹದಲ್ಲಿ ಜರಗಲಿದೆ.

      

Kashi Samyamindra Thirth Swamiji       Partagali Vidyadhisha Swamiji           Kavvle Shivananda Saraswati Swamiji

     

Kavvle Shivananda Saraswati Swamiji                    

ಭವ್ಯ ಸಂಗಮದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನ ವಾರಣಾಸಿ ಇದರ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದÀ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ, ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠ ಇದರ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಚಿತ್ರಾಪುರ್ ಮಠ ಇದರ ಮಠಾಧೀಶ ಶ್ರೀಮದ್ ಸಧ್ಯೋಜಾತ್ ಶಂಕರಾಶ್ರಮ್ ಸ್ವಾಮೀಜಿ ಇವರುಗಳ ದಿವ್ಯೋಪಸ್ಥಿತಿಯಲ್ಲಿ ನೆರವೇರಲಿದೆ.

ನಿವೃತ್ತ ಭಾರತೀಯ ಸೇನಾಧಿಕಾರಿ, ಭಾರತೀಯ ಸೇನೆಯ ನಿಯೋಜಿತ ಮೇಜರ್ ಜನರಲ್ ಜಿ.ಡಿ ಭಕ್ಷಿ (ಎಸ್‍ಎಂ, ವಿಎಸ್‍ಎಂ) ಸಂಗಮದ ಪ್ರಧಾನ ಭಾಷಣಕಾರರಾಗಿದ್ದು ಸಾರಸ್ವತ ನಾಗರಿಕತೆ ವಿಷಯ ದಲ್ಲಿ ಮಾತನಾಡಲಿದ್ಡಾರೆ. ಪ್ರಶಸ್ತಿ ಪುರಸ್ಕೃತ ಲೇಖಕಿ, ಅಂಕಣಕಾರ್ತೆ ಶೆಫಾಲಿ ವೈದ್ಯ ಅವರು ಸಾರಸ್ವತ ಪರಂಪರೆ-ದೇವಾಲಯಗಳು-ಕಲೆ ಮತ್ತು ಸಂಸ್ಕೃತಿಯ ಭಂಡಾರ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಪ್ರಶಸ್ತಿ ವಿಜೇತ ಲೇಖಕ, ಅಂಕಣಕಾರ ಡಾ| ಅಗ್ನಿಶೇಖರ್ ಅವರು ಕಾಶ್ಮೀರಿ ಸಾರಸ್ವತ ಇತಿಹಾಸ ವಿಷಯದಲ್ಲಿ ಮಾಹಿತಿ ನೀಡಲಿದ್ದಾರೆ. ಈ ಮೂಲಕ ಸಂಗಮವು ಪ್ರಾಚೀನ ಸರಸ್ವತಿ ನಾಗರಿಕತಾ ವೈಭವವನ್ನು ಎತ್ತಿ ತೋರಿಸಲಿದ್ದು ಸಾರಸ್ವತರ ಇತಿಹಾಸದ ಅಗಾಧ ಜ್ಞಾನವನ್ನು ಅನಾವರಣ ಗೊಳಿಸಲಿದೆ ಮತ್ತು ಸಾರಸ್ವತರ ಭವಿಷ್ಯದ ಐಕ್ಯತೆಗೆ ಸಾಕ್ಷಿಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಸಾರ ಭಾರತಿ ದೆಹಲಿಯಲ್ಲಿ ರಾಷ್ಟ್ರೀಯ ಸಮಸ್ಯೆಗಳ ರಾಷ್ಟ್ರೀಯ ಪ್ಯಾನೆಲಿಸ್ಟ್ ಹಾಗೂ ಸಮಾಜ ಸೇವಕ ಸಂಪತ್ ಸರಸ್ವತ್ ಬಮನ್ವಳಿ ಇವರು ಸಾರಸ್ವತರ ಸಾಮಾಜಿಕ ಭದ್ರತೆ ವಿಷಯದಲ್ಲಿ, ಸಿಂಧೂ ಲಿಪಿಯನ್ನು ವಿವರಿಸುವ ಪುಸ್ತಕ ಲೇಖಕ ಸುರೇಂದ್ರನಾಥ ಭಟ್ ಮುಲ್ಕಿ ಅವರು ಸಿಂಧೂ ಲಿಪಿಯನ್ನು ಪ್ರಕಟಿಸುವ ಬಗ್ಗೆ, ಉತ್ತರ ಪ್ರದೇಶ ಸರ್ಕಾರದ ಸಾರ್ವಜನಿಕ ಕಾರ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ್ ಗೋಕರ್ಣ್ (ಐಎಎಸ್) ಅವರು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾದ ಸಾರಸ್ವತಗಳ ಶ್ರೀಮಂತ ಪರಂಪರೆ ವಿಷಯದ ಕುರಿತು, ಸರಸ್ವತ್ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಗೌತಮ್ ಇ.ಠಾಕೂರ್ ಅವರು ಕವಾಟಗಳ ಪ್ರಚಾರ ಮತ್ತು ಸಂಸ್ಕೃತಿಯ ಬ್ರ್ಯಾಂಡಿಂಗ್ ಸಾರಸ್ವತ್ ಹೆಸರು ವಿಷಯದಲ್ಲಿ, ಭೂಕಂಪದ ನಂತರ ಕಚ್ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಸೇವೆ ನೀಡೀದ ಮತ್ತು ಖಗೋಳ ಮತ್ತು ಪರಿಸರ ಸಂಶೋಧಕಿ ರೂಪಾ ಭಾಟಿ ಅವರು ವೈದಿಕ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಸರಸ್ವತಿ ನದಿಯನ್ನು ಡಿಕೋಡಿಂಗ್ ಮಾಡುವ ವಿಷಯದಲ್ಲಿ ಮಾತನಾಡುವರು.


ಜಿಎಸ್‍ಬಿ ಸಮುದಾಯದ ಏಕೀಕರಣವೇ ಸಂಗಮದ ಪ್ರಥಮ ಉದ್ದೇಶವಾಗಿಸಿ ಹಮ್ಮಿಕೊಳ್ಳಲಾಗಿದ್ದು ದೇಶ ವಿದೇಶಗಳಿಂದ ಸಾವಿರಾರು ಸಾರಸ್ವತ ಬಂಧುಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಸಾರಸ್ವತ ಒಕ್ಕೂಟದ ಸಂಚಾಲಕ ಡಿ.ವೇದವ್ಯಾಸ ಕಾಮತ್ (ಶಾಸಕ), ಅಧ್ಯಕ್ಷ ಪ್ರದೀಪ್ ಜಿ.ಪೈ ತಿಳಿಸಿದ್ದಾರೆ.

ಈ ಸಮ್ಮೇಳನವನ್ನು ಯಶಸ್ವಿ ಗೊಳಿಸುವಂತೆ ಜಿಎಸ್‍ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್.ಆರ್ ಪೈ, ಮುಖ್ಯ ಸಂಚಾಲಕ ಮೋಹನ್‍ದಾಸ್ ಮಲ್ಯ, ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ, ಜೊತೆ ಕಾರ್ಯದರ್ಶಿ ಸುರೇಂದ್ರನಾಥ್ ಕಾಮತ್, ಪದಾಧಿಕಾರಿಗಳು ಮತ್ತು ಸದಸ್ಯರು ತಿಳಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here