Tuesday 6th, June 2023
canara news

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ

Published On : 01 May 2022   |  Reported By : Rons Bantwal


ಮುಂಬಯಿ, ಎ.27: ಉಡುಪಿ ಜಿಲ್ಲೆಯ ಕೆಮ್ಮಣ್ಣು ಗುಜ್ಜರಬೆಟ್ಟು ಪಡುತೋನ್ಸೆ ಇಲ್ಲಿನ ತೋನ್ಸೆ ಕಾಂತು ಪೂಜಾರಿ ಮನೆ ಕುಟುಂಬದ ಆರಾಧ್ಯ ದೈವಗಳಾದ ಶ್ರೀ ಧರ್ಮ ಜಾರಂದಾಯ ಮತ್ತು ಮರ್ಲ್‍ಜುಮಾದಿ ಹಾಗೂ ಪರಿವಾರ ದೈವಗಳ ನೇಮೋತ್ಸವು ಇದೇ ಮೇ.06ನೇ ಶುಕ್ರವಾರ ಜರುಗಲಿದೆ.

ಶುಕ್ರವಾರ ಪೂರ್ವಾಹ್ನ 9.45 ಗಂಟೆಯಿಂದ ನೇಮೋತ್ಸವದ ಮಹಾ ಚಪ್ಪರ ಆರೋಹಣ, ದೈವಾಸ್ಥಾನದಿಂದ ದೈವದ ಮುಖಮೂರ್ತಿ ಭಂಡಾರಗಳನ್ನು ವಿಜೃಂಭಣೆಯಿಂದ ಚಪ್ಪರ ಮಂಟಪಕ್ಕೆ ತರುವುದು. ಮಧ್ಯಾಹ್ನ 12.30 ಗಂಟೆಯಿಂದ ಅನ್ನ ಸಂತರ್ಪಣೆ ಮತ್ತು ರಾತ್ರಿ 8 ಗಂಟೆಯಿಂದ ದೈವಗಳ ನೇಮೋತ್ಸವ (ಕೋಲ) ಜರಗಲಿದೆ.

ಪರಿವಾರ ದೈವಗಳ ಶಕ್ತಿಯ ಪ್ರಭಾವದಲ್ಲಿ ನಡೆಯಲಿರುವ ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಸಹಕುಟುಂಬ, ಪರಿವಾರವನ್ನೊಡಗೂಡಿ ಆಗಮಿಸಿ ಆರಾಧ್ಯ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮಪಾಲ ಕಡೆಕಾರು, ಪ್ರಭಾಕರ್ ಪಾಲನ್, ಸುರೇಶ ಪೂಜಾರಿ, ಶೇಖರ ಗುಜ್ಜರ್‍ಬೆಟ್ಟು ಹಾಗೂ ತೋನ್ಸೆ ಸಂಜೀವ ಪೂಜಾರಿ ಮುಂಬಯಿ ಈ ಮೂಲಕ ತಿಳಿಸಿದ್ದಾರೆ.

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here