Saturday 25th, June 2022
canara news

ಕಲೆಗೆ ಜಗತ್ತನ್ನೇ ಸುಧಾರಿಸುವ ಶಕ್ತಿ ಇದೆ : ಧರ್ಮಪಾಲನಾಥಶ್ರೀ

Published On : 21 May 2022   |  Reported By : Rons Bantwal


ಶ್ರೀನಿವಾಸ ಪಿ.ಸಾಫಲ್ಯ ಮುಂಬಯಿ ಅವರಿಗೆ ನಾಟ್ಯನಿಲಯ ಕಲಾಪೆÇೀಷಕ ಪ್ರಶಸ್ತಿ ಪ್ರದಾನ

ಮುಂಬಯಿ (ಆರ್‍ಬಿಐ), ಮೇ.20: ಕಲೆ ಬದುಕನ್ನು ಸೊಬಗುಗೊಳಿಸುವ ಮಾಧ್ಯಮ. ಅದು ನಾಡಿನ ಪ್ರಜ್ಞಾವಂತಿಕೆಯ ಪ್ರತೀಕ. ಭಾರತವನ್ನು ಸಮೃದ್ಧಗೊಳಿಸುವಲ್ಲಿ ಕಲಾಪ್ರಕಾರಗಳ ಕೊಡುಗೆ ಗಮನೀಯವಾದು ದು. ಕಲೆಗೆ ಸಮಸ್ತ ಜಗತ್ತನ್ನೇ ಸುಧಾರಿಸುವ ದಿವ್ಯಶಕ್ತಿಯಿದೆ. ನಾಟ್ಯದಂತಹ ಕಲೆಯಿಂದ ಭಗವಂತನ ಸಾಮಿಪ್ಯವನ್ನು ಸಾಧಿಸುವುದಕ್ಕೆ ಸಾಧ್ಯವಿದೆ. ಹಾಗಾಗಿ ಪೆÇೀಷಕರು ಮನೆಯ ಮಕ್ಕಳನ್ನು ಕಲಾತರಗತಿಗಳತ್ತ ಪ್ರೇರೇಪಿಸಬೇಕಾಗಿದೆ ಎಂದು ಆದಿಚುಂಚನಗಿರಿ ಮಠದ ಕಾವೂರು ಶಾಖಾಮಠದ ಧರ್ಮಗುರು ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ನಾಟ್ಯನಿಲಯ ಉಳ್ಳಾಲ ಸಂಸ್ಥೆಯ ಹದಿನಾರನೇ ವರ್ಷಾಚರಣೆ ಸಲುವಾಗಿ ನಗರದ ಪುರಭವನದಲ್ಲಿ ನಡೆದ ಷೋಡಶ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಭರತನಾಟ್ಯದಂತ ಶಾಸ್ತ್ರೀಯ ಕಲೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬದುಕಿನಲ್ಲಿ ದಾರಿ ತಪ್ಪುವುದಿಲ್ಲ. ಕಲೆ ತಂತಾನೇ ಜೀವನ ಸಂಸ್ಕಾರವನ್ನು ಕಲಿಸಿಕೊಡುತ್ತದೆ ಎಂದು ಅವರು ತಿಳಿಸಿದರು.

ಶ್ರೀ ಕ್ಷೇತ್ರ ಒಡಿಯೂರುರನ ಗುರುದೇವಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ ನಾಟ್ಯನಿಲಯ ನಾಟ್ಯಕ್ಕೆ ಮನೆ ಇದ್ದಹಾಗೆ. ನಮ್ಮ ಮನೆಯ ಮಕ್ಕಳು ಆ ಮನೆಯ ಸದಸ್ಯರಾಗಿ ದೇಶೀಯ ವಿದ್ಯೆಯನ್ನು ಕಲಿಯ ಬೇಕಾದುದು ಈ ಕಾಲಕ್ಕೆ ಬಹು ಅಗತ್ಯದ ಸಂಗತಿ ಎಂದು ಅಭಿಪ್ರಾಯ ಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದು, ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕ ಕೆ ಟಿ. ಸುವರ್ಣ, ಕೊಲ್ಯ ನಾಟ್ಯನಿಕೇತನದ ಗುರು ವಿದುಷಿ ರಾಜಶ್ರೀ ಉಳ್ಳಾಲ್, ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ, ಬಂಟ್ವಾಳ ಮೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ದಾಮೋದರ್ ಉಳ್ಳಾಲ್, ದಿವಾಕರ್, ನಾಟ್ಯನಿಲಯದ ಗುರು ವಿದುಷಿ ಸುನಿತಾ ಜಯಂತ್ ಉಳ್ಳಾಲ್, ಸಂಸ್ಥೆಯ ಅಧ್ಯಕ್ಷ ಜಯಂತ್ ಉಳ್ಳಾಲ್, ಷೋಡಶ ಸಂಭ್ರಮ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಅವರಿಗೆ ಗುರುವಂದನೆ ನಡೆಸಲಾಯಿತು.

ಸಮಾರಂಭದಲ್ಲಿ ಪಿಹೆಚ್‍ಡಿ ಪದವೀಧರೆ ಡಾ| ಧರ್ಮಪಾಲನಾಥಶ್ರೀಗಳಿಗೆ ಮತ್ತು ಹಿರಿಯ ನಾಟ್ಯವಿದುಷಿ ಕಮಲಾ ಭಟ್ ರವರಿಗೆ ನಾಟ್ಯನಿಲಯ ಗೌರವ ಪ್ರಶಸ್ತಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅವರಿಗೆ ನಾಟ್ಯನಿಲಯ ಕಲಾಪೆÇೀಷಕ ಪ್ರಶಸ್ತಿ, ಪಿಹೆಚ್‍ಡಿ ಪದವಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್ ಉಳ್ಳಾಲ ಅವರಿಗೆ ನಾಟ್ಯನಿಲಯ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಿ, ರಂಗ ಕಲಾಬಂಧು ಪ್ರಶಸ್ತಿ ಪಡೆದ ಕದ್ರಿ ನವನೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನೃತ್ಯ ಕಾರ್ಯಕ್ರಮ ನೀಡಿದ ವಿದ್ಯಾಥಿರ್üಗಳಿಗೆ ಸ್ಮರಣ ಫಲಕವನ್ನಿತ್ತು ಅಭಿನಂದಿಸಲಾಯಿತು.

ಇತ್ತೀಚೆಗೆ ಅಗಲಿದ ಸಂಗೀತ ಗುರು ವಿದುಷಿ ಶೀಲಾ ದಿವಾಕರ್ ಮತ್ತು ಕೊಲ್ಯ ನಾಟ್ಯನಿಕೇತನದ ಸಬಿತಾ ಮೋಹನ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಬಾಷ್ಪಾಂಜಲಿ ಅರ್ಪಿಸಲಾಗಿದ್ದು ನವನೀತ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಡಾ| ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತ್ ಉಳ್ಳಾಲ್ ವಂದಿಸಿದರು. ನಂತರ ನಾಟ್ಯನಿಲಯದ ವಿದ್ಯಾಥಿರ್üಗಳು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.

 
More News

ಮುಂಬಯಿಯ ಕನ್ನಡತಿ ಡಾ| ಪ್ರಭಾ ಎನ್.ಪಿ ಸುವರ್ಣ ಮುಡಿಗೇರಿದ
ಮುಂಬಯಿಯ ಕನ್ನಡತಿ ಡಾ| ಪ್ರಭಾ ಎನ್.ಪಿ ಸುವರ್ಣ ಮುಡಿಗೇರಿದ
ದೆಹಲಿ ದ್ವಾರಕ ಸೆಕ್ಟರ್‍ನಲ್ಲಿ 108ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ0ತಿ
ದೆಹಲಿ ದ್ವಾರಕ ಸೆಕ್ಟರ್‍ನಲ್ಲಿ 108ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ0ತಿ
ಕೇರಳ-ಕೊಂಡೆವೂರುನಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಂಸ್ಕೃತಿಕ ಉತ್ಸವ
ಕೇರಳ-ಕೊಂಡೆವೂರುನಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಂಸ್ಕೃತಿಕ ಉತ್ಸವ

Comment Here