Sunday 26th, June 2022
canara news

ಮೇ.22: ಗುರುರಾಜ್ ಸನಿಲ್ ಅವರ ಅವಳಿ ಕಾದಂಬರಿಗಳ ಲೋಕಾರ್ಪಣೆ

Published On : 21 May 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.20:ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಹಾಗು ಸಂಸ್ಕøತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ಸಹಯೋಗದಿಂದ ಖ್ಯಾತ ಉರಗತಜ್ಞ ಹಾಗೂ ಸಾಹಿತಿ ಗುರುರಾಜ್ ಸನಿಲ್ ಅವರ `ವಿವಶ' ಮತ್ತು `ಆವರ್ತನ' ಅವಳಿ ಕಾದಂಬರಿಗಳ ಲೋಕಾರ್ಪಣಾ ಕಾರ್ಯಕ್ರಮವು ಇದೇ 22,ಮೇ.2022 ಭಾನುವಾರ ಸಂಜೆ 4.00 ರಿಂದ ಎಂ.ಜಿ.ಎಂ ಕಾಲೇಜು ಆವರಣದ `ಧ್ವನ್ಯಾಲೋಕ' ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಘಟಕದ ಅಧ್ಯಕ್ಷರು, ಖ್ಯಾತ ರಂಗ ನಿರ್ದೇಶಕರೂ ಆದ ರವಿರಾಜ್ ಹೆಚ್.ಪಿ ವಹಿಸಲಿದ್ದಾರೆ. ವಿವಶ ಕೃತಿಯನ್ನು ಕ.ಸಾ ಪ ದ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಇವರು ಬಿಡುಗಡೆ ಗೊಳಿಸಲಿದ್ದಾರೆ. ನಾಡಿನ ಪ್ರಸಿದ್ಧ ಜಾನಪದ ವಿದ್ವಾಂಸರು, ಲೇಖಕರೂ ಆದ ಡಾ| ಗಣನಾಥ್ ಎಕ್ಕಾರು ವಿವಶವನ್ನು ಪರಿಚಯಿಸಲಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇದರ ಆಡಳಿತಾಧಿಕಾರಿ ಡಾ| ಜಗದೀಶ್ ಶೆಟ್ಟಿ ಆವರ್ತನವನ್ನು ಬಿಡುಗಡೆಗೊಳಿಸಲಿದ್ದಾರೆ. ಮುಂಬೈಯ ಪ್ರಸಿದ್ಧ ಕವಯತ್ರಿ, ಸಾಹಿತಿ ಶ್ರೀಮತಿ ಅನಿತಾ ಪಿ. ತಾಕೋಡೆ ಆವರ್ತನವನ್ನು ಪರಿಚಯಿಸಲಿದ್ದಾರೆ. ಉಡುಪಿ ಹಿರಿಯ ಸಮಾಜ ಸೇವಕರು, ಸಂಸ್ಕøತಿ ವಿಶ್ವ ಪ್ರತಿಷ್ಠಾನ (ರಿ.) ಇದರ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಅವರು ಅತಿಥಿüಯಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕವಿ, ಲೇಖಕಿ ಪೂರ್ಣಿಮಾ ಜನಾರ್ದನ್ ನಿರೂಪಿಸಲಿದ್ದಾರೆ. ಸಾಹಿತ್ಯಾಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಗುರುರಾಜ್ ಸನಿಲ್: ಗುರುರಾಜ್ ಸನಿಲ್ ಓರ್ವ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ಕಳೆದ ಸುಮಾರು 38 ವರುಷಗಳಲ್ಲಿ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿದ ಸುಮಾರು 26 ಸಾವಿರಕ್ಕೂ ಮಿಕ್ಕ ವಿವಿಧ ಪ್ರಭೇದದ ಹಾವುಗಳನ್ನು ಹಿಡಿದು ಸಂರಕ್ಷಿಸಿರುವ ಇವರು ಹಾವುಗಳಂಥ ಪ್ರಮುಖ ಜೀವಿಗಳ ಕುರಿತು ಜನಜಾಗ್ರತಿ ಮೂಡಿಸುವ ಉದ್ದೇಶದಿಂದ ಅಪರೂಪದ ಎಂಟು ಹೊತ್ತಗೆಗಳೊಂದಿಗೆ, `ಗುಡಿ ಮತ್ತು ಬಂಡೆ' ಕಥಾಸಂಕಲ, `ವಿವಶ' ಹಾಗೂ `ಆವರ್ತನ' ಎಂಬ ಎರಡು ಸಾಮಾಜಿಕ ಕಾದಂಬರಿಗಳನ್ನು ಬರೆದು ಕಾದಂಬರಿಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ಸನಿಲ್ ಅವರ `ಹಾವು ನಾವು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ `ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ' ಲಭಿಸಿದೆ. `ನಾಗಬೀದಿಯೋಳಗಿಂದ' ಕೃತಿಯ `ನಮ್ಮ ನಂಬಿಕೆ ನಾಗನಿಗೆ ವರವೇ' `ಶಾಪವೇ?' ಎಂಬ ಮುಖ್ಯ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ, 2017ರ ಪ್ರಥಮ ಬಿ.ಕಾಂ ವಿದಾಥಿರ್üಗಳಿಗೆ ಹತ್ತನೇ ಪಠ್ಯವಾಗಿದೆ. ಇವರ ಅಧ್ಯಯನ ಮತ್ತು ಚಿಂತನೆಗಳು ಡಾಕ್ಟರೇಟ್ ಪದವಿಗೆ ಅರ್ಹವಾಗಿರುವಷ್ಟು ಉನ್ನತವಾಗಿರುವುದರಿಂದಲೇ, `ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್' (2004), `ಕರ್ನಾಟಕ ಅರಣ್ಯ ಇಲಾಖೆಯ `ಅರಣ್ಯಮಿತ್ರ` (2013), ಕರ್ನಾಟಕ ಕಾರ್ಮಿಕ ವೇದಿಕೆಯ, `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2015)', ಸರಕಾರದ `ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2016)' ಭಾವನಾ ಫೌಂಡೇಶನ್ (ರಿ.) ಕಲಾ ಸಂಸ್ಥೆಯ `ಭಾವನಾ ಪುರಸ್ಕಾರ (2017)' `ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್' ಸಂಸ್ಥೆಯ `ಉರಗ ಮಿತ್ರ(2017)' ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನದ `ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ(03-03-2018)' ಹಾಗೂ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು, `ಸೇವಾ ರತ್ನ' (29-7-2018)ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಪರಿಸರ ಮತ್ತು ಉರಗ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು ಇವರಿಗೆ 'ಅಧಿಕೃತ ಅನುಮತಿ ಪತ್ರ' ವನ್ನೂ ನೀಡಿ ಪ್ರೋತ್ಸಾಹಿಸಿದೆ.

ಸನಿಲ್ ಅವರ ನಾಲ್ಕು ಕೃತಿಗಳಿಂದ ಆಯ್ದ 18 ಲೇಖನಗಳು ಗೋವಾದ ಲೇಖಕಿ ಡಾ| ಸುಷಮಾ ಆರೂರು ಅವರಿಂದ ಕೊಂಕಣಿ ಭಾಷೆ (ದೇವನಾಗರಿ ಲಿಪಿ)ಗೆ ಅನುವಾದಗೊಂಡು, `ಗಜಾಲಿ ಪೆÇೀಟ ಸರ್ಯಾಂಚ್ಯೊ: ಸರ್ಪ ಮೊಗಿಜೆ ಅನುಭವ!' ಎಂಬ ಕೃತಿಯ ಮೂಲಕ 2020ರಲ್ಲಿ ಬೆಳಕು ಕಂಡಿದೆ.

ಹವ್ಯಾಸಿ ಛಾಯಾಚಿತ್ರಕಾರರೂ ಆದ ಸನಿಲ್ ಅವರು ಕ್ಲಿಕ್ಕಿಸಿದ ಅನೇಕ ಚಿತ್ರಗಳು, `ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013'ರ `ಸಿರಿಗನ್ನಡ' ಮತ್ತು `ಕರಾವಳಿ ಕರ್ನಾಟಕ' ಹಾಗೂ ಇನ್ನಿತರ ಕೆಲವು ಕೃತಿಗಳಲ್ಲಿ ಬೆಳಕು ಕಂಡಿವೆ. ಹಸಿರು ಪರಿಸರದ ಕುರಿತು ಅತೀವ ಕಾಳಜಿಯಿಂದ ಹುಟ್ಟಿಕೊಂಡ, `ನಮ್ಮ ಮನೆ ನಮ್ಮ ಮರ' ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಇವರು ಈವರೆಗೆ ಸುಮಾರು 15,000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.

 
More News

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ

Comment Here