Friday 9th, May 2025
canara news

ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗ ಸಂಸ್ಥೆಯಿಂದ ನೆರವೇರಿಸಲ್ಪಟ್ಟ ವಾರ್ಷಿಕ ಗುರುನರಸಿಂಹ ಜಯಂತಿ

Published On : 21 May 2022   |  Reported By : Rons Bantwal


ಮುಂಬಯಿ  (ಆರ್‍ಬಿಐ), ಮೇ.19: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ವಾರ್ಷಿಕ ಗುರುನರಸಿಂಹ ಜಯಂತಿಯನ್ನು ವಿಲೇಪಾರ್ಲೆ ಇಲ್ಲಿನ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ನರಸಿಂಹ ಹೋಮ ಮತ್ತು ಗಣಹೋಮ ಪೂಜಾಧಿಗಳೊಂದಿಗೆ ಸಂಪ್ರದಾಯಿಕವಾಗಿ ಆಚರಿಸಿತು.

ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ನಾಗೇಶ್ ರಾವ್ ಸಾರಥ್ಯದಲ್ಲಿ ನೆರವೇರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಪುರೋಹಿತ ನರಸಿಂಹ ಮಯ್ಯ ಕಲ್ವಾ ಪೂಜಾ ಕೈಂಕರ್ಯ ನಡೆಸಿದ್ದು ಅಶೋಕ್ ಕಾರಂತ ಮತ್ತು ಇಂದಿರಾ ಕಾರಂತ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಯು.ಎನ್ ಐತಾಳ್, ಉಪಾಧ್ಯಕ್ಷ ಅಡೂರು ಹರ್ಷ ರಾವ್, ಕೋಶಾಧಿಕಾರಿ ದೀಪಕ್ ಕಾರಂತ್, ಜೊತೆ ಕಾರ್ಯದರ್ಶಿ ಅಶೋಕ್ ಕಾರಂತ್, ಜೊತೆ ಕೋಶಾಧಿಕಾರಿ ದಿನೇಶ್ ರಾವ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರವಿ ಕಾರಂತ್, ನಿತ್ಯಾನಂದ ರಾವ್, ರವಿ ಆರ್.ರಾವ್, ಪ್ರವೀಣ್ ಮಯ್ಯ, ರೋಹಿಣಿ ಬೈರಿ, ಪಿ.ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದು, ನರಸಿಂಹ ಸಹಸ್ರನಾಮ ಪಠಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು.

ಪಿ.ನಾಗೇಶ್ ರಾವ್ ಸುಖಾಗಮನ ಬಯಸಿದರು. ಕಾರ್ಯದರ್ಶಿ ರಮೇಶ್ ಎಂ.ರಾವ್ ಧನ್ಯವಾದ ಸಮರ್ಪಿಸಿದರು. ಸದಸ್ಯರನೇಕರು ಪಾಲ್ಗೊಂಡಿದ್ದು ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಕಂಡಿತು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here