Tuesday 23rd, April 2024
canara news

ಬಂಟರ ಸಾಧನೆಗೆ ಶಿಕ್ಷಣ-ಶ್ರಮ ಕಾರಣವಾಗಿದೆ: ಶ್ರೀ ಸಂತೋಷ್ ಗುರೂಜಿ

Published On : 22 May 2022   |  Reported By : Rons Bantwal


ಮುಂ¨ಯಿ (ಆರ್‍ಬಿಐ), ಮೇ.19: ಸುರತ್ಕಲ್: ಬಂಟರ ಸಾಧನೆಗೆ ಶಿಕ್ಷಣ, ಶ್ರಮ ಕಾರಣ. ಬಂಟರಿಗೆ ನಾಯಕತ್ವ ಗುಣವಿದೆ, ಬಂಟರಿಗೆ ಧಾಮಿಕ ಪ್ರವೃತ್ತಿ ಇತಿಹಾಸದಿಂದಲೇ ಬಂದಿದೆ, ತಾನು ಆರಂಭಿಸಿರುವ ಬಂಟ ಸಂಸ್ಥಾನ ಅನುವಂಶಿಕವಲ್ಲ. ಮೊದಲಿಗೆ ತಾನು ಹಿಂದೂ ಪೀಠ ಆರಂಭಿಸಿದ್ದು ಗುರು ಇಲ್ಲದ ಸಮಾಜಕ್ಕೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಬಂಟರಿಗೆ ಪೀಠ ಆರಂಭಿಸಿದ್ದೇನೆ ಎಂದು ಬಾರ್ಕೂರು ಮಹಾಸಂಸ್ಥಾನದ ಡಾ| ಶ್ರೀ ಸಂತೋಷ್ ಗುರೂಜಿ ಹೇಳಿದರು.


ಸುರತ್ಕಲ್ ಬಂಟರ ಭವನದಲ್ಲಿ ನಡೆದ ಬಾರ್ಕೂರು ಮಹಾಂಸ್ಥಾನ ಸುರತ್ಕಲ್ ಬೀಡು ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ತುಳು ನಾಡಿನ ದೈವರಾಧನೆಯ ಪೂರ್ವಕಾಲದ ಪದ್ದತಿ ಆಚರಣೆಯನ್ನು ನಾವು ಮರೆತಿರುವುದು ದುರದೃಷ್ಟಕರ ಸಂಗತಿ. ದೈವರಾಧನೆಯ ಅಚರಣೆ ಬಗ್ಗೆ ನಮ್ಮ ಹಿರಿಯರು ಕಟ್ಟುಪಾಡುಗಳನ್ನು ಹಾಕಿಕೊಟ್ಟಿರುತ್ತಾರೆ ಅದರೆ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮತ್ತು ವ್ಯಾಪಾರೀಕರಣಕ್ಕೆ ಮಾರು ಹೋಗಿ ದೈವರಾಧನೆಯಲ್ಲಿ ವೈಭವೀಕರಣ ಮಾಡುತ್ತಾ ಇದ್ದೇವೆ. ದೈವಗಳಿಗೆ ಬ್ರಹ್ಮಕಲಾಭಿಷೇಕ ಇಲ್ಲ ಕೇವಲ ದೇವರಿಗೆ ಮಾತ್ರ ಬ್ರಹ್ಮಕಲಾಭಿಷೇಕ ಅದರೆ ನಮಗೆ ಅದರ ಬಗ್ಗೆ ಅರಿವು ಇಲ್ಲದೆ ತಾವು ತಪ್ಪು ಕೆಲಸ ಮಾಡುತ್ತಾ ಇದ್ದೇವೆ ಇದು ಸರಿಯಲ್ಲ ದೈವರಾಧನೆಯಲ್ಲಿ ವೈಭವೀಕರಣಕ್ಕೆ ಖರ್ಚು ಮಾಡುವ ಹಣವನ್ನು ಬಡವರ ಆಥಿರ್üಕ ಹಿಂದುಳಿದವರ ಕಷ್ಟಗಳಿಗೆ ವಿನಿಯೋಗಿಸಿದರೆ ಅದರಿಂದ ದೈವವು ಸಂತೃಪ್ತಿ ಹೊಂದುತ್ತದೆ ದೈವಗಳಿಗೆ ಮಂತ್ರ ಹೇಳುವ ಕ್ರಮ ಇಲ್ಲ ಊರಿನ ಗಡಿ ಪ್ರಧಾನರು ಅಥವಾ ಹಿರಿಯರು ಪ್ರಾರ್ಥನೆ ಮಾಡಿದರೆ ಕೇವಲ ಗಿಡದಲ್ಲಿ ಬೆಳೆದ ಹೂಗಳನ್ನು ಇಟ್ಟು ಭಕ್ತಿಯಿಂದ ದೈವವನ್ನು ಪ್ರಾಥಿರ್üಸಿದರೆ ಖಂಡಿತ ನಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ ದೈವಗಳ ಗಡಿಪ್ರಧಾನರು ನರ್ತನ ಮಾಡುವವರು, ಪರಿಚಾರಕರು ಸತ್ಯ, ಪ್ರಾಮಾಣಿಕ ನಿಷ್ಠೆಯಿಂದ ಇರಬೇಕು. ತುಳುನಾಡಿನ ಮೂಲ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಅಳಿದು ಹೋದ ಬೀಡುಗಳನ್ನು ಪುನ: ವಿವಿಧ ಭಾಗಗಳಲ್ಲಿ ರಚನೆ ಮಾಡಲಾಗುತ್ತಿದೆ ಎಂದೂ ಸಂತೋಷ್ ಗುರೂಜಿ ತಿಳಿಸಿದರು.

ಬಂಟ ಸಮಾಜದಲ್ಲಿ ಐವರು ಶಾಸಕರು, ಒಬ್ಬ ಎಂಎಲ್‍ಸಿ, ಒಬ್ಬ ಸಂಸದ ಇದ್ದರೂ ಬಂಟರು ರಾಜಕೀಯ ನಾಯಕತ್ವ ಕೇಳಿಲ್ಲ. ಬಿಲ್ಲವ ಸಮಾಜಕ್ಕೆ ಇಬ್ಬರು ಸಚಿವರಿದ್ದು, ಬಜೆಟ್‍ನಲ್ಲಿ ಎರಡು ವಿದ್ಯಾಥಿರ್ü ನಿಲಯ ನೀಡಲಾಗಿದೆ. ಬಂಟ ಸಮಾಜಕ್ಕೆ ದೇಶದ 75 ವರ್ಷದಲ್ಲಿ ಬಜೆಟ್ ನಲ್ಲಿ ಒಂದು ಕೋಟಿ ರೂ. ಕೂಡಾ ನೀಡಿಲ್ಲ. ಬಂಟರಲ್ಲಿಯೂ ಬಡವರಿದ್ದಾರೆ. ಬಂಟರ ಘನತೆ ವಿಶ್ವಕ್ಕೆ ತಿಳಿಸುವ ಕಾರ್ಯ ಅಗತ್ಯ ಎಂದವರು ತಿಳಿಸಿದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ ಅಧ್ಯಕ್ಷತೆ ವಹಿಸಿದ್ದರು.

ಬಾರ್ಕೂರು ಮಹಾಸಂಸ್ಥಾನದ ಮಹಾಪೆÇೀಷಕ, ಮ್ಯಾಕೊೈ ಸಂಸ್ಥೆಯ ಕರುಣಾಕರ್ ಎಂ.ಶೆಟ್ಟಿ ಮಧ್ಯಗುತ್ತು, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಅಧ್ಯಕ್ಷÀ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಉದ್ಯಮಿ ಮನೋಹರ್ ಶೆಟ್ಟಿ ಉಡುಪಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಬಜಪೆ ಬಂಟರ ಸಂಘ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ, ಎಕ್ಕಾರು ಬಂಟರ ಸಂಘ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಗುರುಪುರ ಬಂಟರ ಮಾತೃ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಸುರೇಶ್ ಶೆಟ್ಟಿ ಕಕ್ಕೆಮಜಲು, ಕಾವೂರು ಬಂಟರ ಸಂಘ ಅಧ್ಯಕ್ಷ ಆನಂದ ಶೆಟ್ಟಿ, ಜೆಪ್ಪು ಬಂಟರ ಸಂಘ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘ ಅಧ್ಯಕ್ಷ ಸತ್ಯ ಪ್ರಸಾದ್ ಶೆಟ್ಟಿ. ಕಂಕನಾಡಿ ಬಂಟರ ಸಂಘ ಅಧ್ಯಕ್ಷ ನಾಗೇಶ್ ಶೆಟ್ಟಿ, ಕೋಡಿಕಲ್ ಬಂಟರ ಸಂಘ ಅಧ್ಯಕ್ಷ ಮಹಾಬಲ ಚೌಟ, ಆಶೋಕ ನಗರ ಬಂಟರ ಸಂಘ ಅಧ್ಯಕ್ಷ ಸದಾಶಿವ ಶೆಟ್ಟಿ, ನೀರುಮಾರ್ಗ ಬಂಟರ ಸಂಘ ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ, ಬಿಜೈ ಬಂಟರ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ರೈ, ಬಜಾಲ್ ಬಂಟರ ಸಂಘ ಅಧ್ಯಕ್ಷ ಯಶೋಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸುರತ್ಕಲ್ ಬೀಡು ಸಮಿತಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕಿರಣ್ ಪ್ರಸಾದ್ ರೈ ಸ್ವಾಗತಿಸಿದರು. ರಾಜೇಶ್ವರಿ ಡಿ. ಶೆಟ್ಟಿ ನಿರೂಪಿಸಿದರು.ಉಪಾಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here