Friday 26th, April 2024
canara news

ಜ್ಯೇಷ್ಠಶುದ್ಧ ಪಂಚಮಿ ; ಮೂಡಬಿದರೆ ಶ್ರೀ ಜೈನ ಮಠದಲ್ಲಿ ಶ್ರುತಸ್ಕಂದ-ಶಾಸ್ತ್ರ ಗ್ರಂಥಗಳ ಪೂಜೆ

Published On : 05 Jun 2022   |  Reported By : Rons Bantwal


ಶ್ರುತ ಪಂಚಮಿ ಆರಾಧನೆ ಅಂದರೆ ಜ್ಞಾನದ ಆರಾಧನೆ : ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿಶ್ರೀ

ಮುಂಬಯಿ (ಆರ್‍ಬಿಐ), ಜೂ.04: ಪಂಚಮಿ ಜೈನರಿಗೆ ಅತ್ಯಂತ ಮಹತ್ವದ ಹಬ್ಬವಾಗಿದ್ದು ಇದನ್ನು ಜ್ಯೇಷ್ಠಶುದ್ಧ ಪಂಚಮಿ ದಿನವಾದ ಇಂದು ಮೂಡಬಿದರೆ ಇಲ್ಲಿನ ಶ್ರೀ ಜೈನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ್ಯೇಷ್ಠಶುದ್ಧ ಪಂಚಮಿ ಆಚರಿಸಲಾಯಿತು.

ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅಧ್ಯಕ್ಷ ತೆ ವಹಿಸಿ ಆಶೀರ್ವಾದ ಮಾಡಿ ಇಂದ್ರನಂದಿಯ ಶ್ರುತವಾರ ಗ್ರಂಥದಲ್ಲಿ ಜಿನವಾಣಿ ಸರಸ್ವತಿ ಸಮ್ಯಕ್ಜ್ಞಾನದ ಸಂಗ್ರಹವೇ ಶಾಸ್ತ್ರವೆಂದು ಹೇಳುತ್ತಾರೆ. ಶ್ರುತ ಪಂಚಮಿಯ ಆರಾಧನೆ ಎಂದರೆ ಜ್ಞಾನದ ಆರಾಧನೆ. ಶ್ರುತ ಪಂಚಮಿ ಬಗ್ಗೆ ಜೈನ ಪುರಾಣಗಳು ಹೀಗೆ ವಿವರಿಸುತ್ತವೆ. ಆದಿ ಭಗವಾನ್ ವೃಷಭ ದೇವರಿಂದ ಮೊದಲ್ಗೊಂಡು ಅಂತಿಮ ತೀರ್ಥಂಕರ ವರ್ಧಮಾನರ ವರೆಗಿನ ಆಗಮವು ಹನ್ನೆರಡು ಅಂಗಗಳಲ್ಲಿ ಸಂಗ್ರಹವಾಗಿದ್ದವು. ಮಹಾವೀರನ ತರುವಾಯ ಈ ಜ್ಞಾನವನ್ನು ಮೂವರು ಕೇವಲಿಗಳು, ಐವರು ಶ್ರುತ ಕೇವಲಿಗಳು, ಹನ್ನೊಂದು ಜನ ದಶಪೂರ್ವಧಾರಿಗಳು, ಐವರು ಏಕಾದಶಾಂಗಾಧರಿಗಳು, ನಾಲ್ವರು ಆಚರಾಂಗಧಾರಿಗಳು, ತಮ್ಮ ಶಿಷ್ಯರಿಗೆ ಬೋಧಿಸುತ್ತ ಬಂದರು. ಕಾಲಕ್ರಮೇಣ ನೆನಪಿನ ಶಕ್ತಿಯು ಕ್ಷಿಣಿಸುತ್ತ ಬಂದು, ದ್ವಾದಶಾಂಗಗಳ ಲ್ಲಿ ಹೆಚ್ಚಿನ ಅಂಗಗಳು ನಷ್ಟವಾದವು. ಅನಂತರ ಪುಷ್ಪದಂತ ಮತ್ತು ಭೂತಬಲಿ ಆಚಾರ್ಯರು ತಮ್ಮ ಗುರುಗಳಾದ ಗುಜರಾತ್ ಬಳಿಯ ಜೈನ ಸಿದ್ದ ಕ್ಷೇತ್ರ ಗಿರಿನಾರ್‍ನ ಮಹಾನ್ ಆಚಾರ್ಯ ಧರಸೇನಾಚಾರ್ಯರ ಆದೇಶದಂತೆ ಲಿಪಿಬದ್ಧ ಗೊಳಿಸಲು ನಿರ್ಧಾರಿಸಿ, ಈ ಕಾರ್ಯವನ್ನು ಜ್ಯೇಷ್ಠ ಶುದ್ಧ ಪಂಚಮಿಯಂದು ಅತ್ಯಂತ ವೈಭವ ದಿಂದ ಅಂಕಲೇ ಶ್ವರ ದಲ್ಲಿ ಪೂರ್ಣ ಗೊಳಿಸಿದರು. ಅಂದಿನಿಂದ ಆ ಪುಣ್ಯ ದಿನದ ಸ್ಮರಣೆಗಾಗಿ ಶ್ರುತ ಪಂಚಮಿಯನ್ನು ಜ್ಞಾನ ಪಂಚಮಿ ಆಗಿ ಆಚರಿಸುತ್ತ ಬಂದಿದ್ದಾರೆ ಎಂದರು.

ಆ ಏಕೈಕ ಪ್ರತಿಲಿಪಿ ತಾಡ ವೋಲೆ ಯಲ್ಲಿ ಮೂಡುಬಿದಿರೆ ಯಲ್ಲಿ ಸಂರಕ್ಷಿಸಲ್ಪಟ್ಟಿದೆ ಎಂದು ಪೆÇ್ರ ಜೀವಂದರ ಕುಮಾರ್ ಹೋತಪೇಟೆ ತಿಳಿಸಿ ಜಿನವಾಣಿಯ ಸಹಸ್ರಾರು ಗ್ರಂಥ ಇಲ್ಲಿಯ ಶ್ರೀ ಮಠದಲ್ಲಿ ಇರುದು ನಮ್ಮೆಲ್ಲರ ಭಾಗ್ಯ ಎಂದೂ ಸ್ವಸ್ತಿಶ್ರೀ ಚಾರುಕೀರ್ತಿ ತಿಳಿಸಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ವತಿಯಿಂದ ಸ್ವಸ್ತಿಶ್ರೀ ಭಟ್ಟಾರಕ ಪ್ರಶಸ್ತಿ ನೀಡಿ ಹರಸಿ ಆಶೀರ್ವಾದ ಮಾಡಿದರು ಹಾಗೂ ಆಚಾರ್ಯ ಸುನೀಲ ಸಾಗರ ಮುನಿ ರಾಜರ ಸಮಗ್ರ ಪ್ರಾಕೃತ ಸಾಹಿತ್ಯ ಕೃತಿ ಪೆÇ್ರೀ ಜೀವಂದರ ಕುಮಾರ್ ಹೋತಪೇಟೆ ಅನುವಾದಿತ ಪುಸ್ತಕ ಬಿಡುಗಡೆ ಮಾಡಿದರು ಹಾಗೂ ಭಕ್ತಿಗೀತೆ ಹಾಡುಗಾರ ಅಳಿಯೂರು ಅದಿರಾಜ್ ಅವರಿಗೆ ಜೀವಾಣಿ ಪುರಸ್ಕಾರ ಪ್ರದಾನಿಸಿ ಹರಸಿದರು.

ಸಂಪತ್ ಕುಮಾರ್ ಹಳೆಕನ್ನಡದಲ್ಲಿ ಜೈನ ಸರಸ್ವತಿ ಶ್ರೀ ವಿಜಯ ಬರೆದ ಕವಿ ರಾಜಮಾರ್ಗ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದರು. ಮುನಿರಾಜ್ ರೆಂಜಾಳ ಬಸದಿ ವಾಸ್ತು ಬಸದಿ ಯ ವಿಶಿಷ್ಟ ತೆ ಬಗ್ಗೆ ತಿಳಿಸಿದರು.

ಮೂಡುಬಿದಿರೆ ಸ್ವಾಮೀಜಿ ಸಮವಸರಣದಲ್ಲಿ ಭಗವಂತನ ದಿವ್ಯ ಧ್ವನಿಸಂಸಾರದ ದುಃಖದಿಂದ ಜೀವಿಗಳು ಬಿಡುಗಡೆ ಮುಕ್ತಿ ಪಡೆವ ಜೇವನದ ಸಮ್ಯಕ್ ರತ್ನತ್ರಯ ರಹಸ್ಯ ಪಡೆವ ಜ್ಞಾನ ಕೇಂದ್ರ ಸರ್ವರಿಗೂ ಧರ್ಮ ಹಿತ ತಿಳಿಸುವ ಸವೋ9ದಯ ತೀರ್ಥ ಎಂದÀು ಶಾಸ್ತ್ರ ಸಂರಕ್ಷಣೆ ಪ್ರಸಾರ ಶ್ರೀ ಮಠ ದಿಂದ ನಿರಂತರ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್, ಕೆ.ಅಭಯಚಂದ್ರ ಜೈನ್, ಶಂಭವ ಕುಮಾರ್ ಕುಮಾರ್, ಅನಂತ ವೀರ, ಬಾಹುಬಲಿ ಪ್ರಸಾದ್ ಭಾಗವಹಿಸಿದ್ದು, ಶ್ರುತ ಸ್ಕಂದ ಆರಾಧನೆ ಪೂಜಾ ಸೇವಾ ದಾತಾರ ಯುವರಾಜ್ ಜೈನ್ ಎಕ್ಷಲೆಂಟ್ ವಿದ್ಯಾ ಸಂಸ್ಥೆ ಶ್ರೀಮತಿ ರಶ್ಮಿ, ವಕೀಲೆ ಶ್ವೇತಾ ಅವರಿಗೆ ಶ್ರೀ ಗಳು ಶ್ರೀಫಲ ಮಂತ್ರಾಕ್ಷತೆ ನೀಡಿ ಆಶೀರ್ವಾದ ಮಾಡಿದರು

ಡಾ| ಎಸ್.ಪಿ ವಿದ್ಯಾ ಕುಮಾರ್, ಪೆÇ್ರ| ಅಜಿತ್ ಪ್ರಸಾದ್, ಉಮಾನಾಥ ಶೆಣೈ, ಮಾತನಾಡಿದರು. ಪ್ರಾಂಶುಪಾಲೆ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರಭಾತ್ ಬಲ್ನಾಡ್ ವಂದನಾರ್ಪಣೆ ಮಾಡಿದರು. ಪ್ರತಿಷ್ಠಾ ಪುರೋಹಿತ ನಾಗೇಂದ್ರ ಇಂದ್ರರು, ಪಾರ್ಶ್ವನಾಥ್ ಪ್ರಸಾದ್ ಭಟ್ಟಾರಕರ ಉಪಸ್ಥಿತಿಯಲ್ಲಿ ಆರಾಧನೆ ಅಭಿಷೇಕ ನೆರವೇರಿಸಿದರು. ಸರ್ವರೊ ಶ್ರುತ ದರ್ಶನ ಮಾಡಿ ಪುಣ್ಯ ಲಾಭ, ಶ್ರುತ ಸ್ಕಂದ, ಶಾಸ್ತ್ರ ಗ್ರಂಥಗಳ ಪೂಜೆಯನ್ನು ಮಾಡಿ ಸರ್ವರೊ ಧರ್ಮ ಲಾಭ ಗಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here