Sunday 26th, June 2022
canara news

ವಾಸಂತಿ ಎ.ಸಾಲ್ಯಾನ್‍ಕರ್ ನಿಧನ

Published On : 11 Jun 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.11: ಬಿಲ್ಲವರ ಚಿಸೋಸಿಯೇಶನ್ ಮುಂಬಯಿ ಇದರ ಬಾಲ ವಿಕಸನ ಉಪ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ, ಸಕ್ರೀಯ ಕಾರ್ಯಕರ್ತೆ, ಸಮಾಜ ಸೇವಕಿ ವಾಸಂತಿ ಸಾಲ್ಯಾನ್‍ಕರ್ (97.) ಅವರು ಕಳೆದ ಶುಕ್ರವಾರ (ಜೂ.10) ನಿಧನರಾದರು. ಮುಂಬಯಿಯ ಸಾಂತಾಕ್ರೂಜ್ ಪಶ್ಚಿಮ ನಿವಾಸಿಯಾಗಿದ್ದು ಮಂಗಳೂರು ಅತ್ತಾವರ ಮೂಲತಃ ಇವರು ದಿ| ಅಚ್ಯುತ ಸಾಲ್ಯಾನ್‍ಕರ್ ಅವರ ಧರ್ಮಪತ್ನಿ.

ವಾಸಂತಿ ಸಾಲ್ಯಾನ್‍ಕರ್ ಬಿಲ್ಲವರ ಅಸೋಸಿಯೇಶನ್‍ನ ಮಹಿಳಾ ವಿಭಾಗದಲ್ಲಿ ಸಕ್ರೀಯವಾಗಿ ತೊಡಗಿಸಿದ್ದರು. ಸಾಲ್ಯಾನ್‍ಕರ್ ಪುಟ್ಟರ್ತಿ ಸಾಯಿ ಭಕ್ತೆಯಾಗಿದ್ದು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ವಾಸಂತಿ ಸಾಲ್ಯಾನ್‍ಕರ್ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.

 
More News

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ

Comment Here