Tuesday 15th, July 2025
canara news

ಮುಂಬಯಿಯ ಕನ್ನಡತಿ ಡಾ| ಪ್ರಭಾ ಎನ್.ಪಿ ಸುವರ್ಣ ಮುಡಿಗೇರಿದ

Published On : 18 Jun 2022   |  Reported By : Rons Bantwal


`ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು'ಕಿರೀಟ

ಮುಂಬಯಿ (ಆರ್‍ಬಿಐ),ಜೂ.15: ಪಾತ್‍ವೇ (ರೋಡ್ ಟು ಸಕ್ಸಸ್) ಎಂಟರ್‍ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಆ್ಯಂಡ್ ಸಲೂನ್ ಸಂಯುಕ್ತ ಆಶ್ರಯದಲ್ಲಿ ಕಳೆದ ಭಾನುವಾರ (ಜೂ.12) ಮಂಗಳೂರು ಅಲ್ಲಿನ ನೆಕ್ಸಸ್ ಮಾಲ್‍ನಲ್ಲಿ (ಫಿಜ್ಹಾ ಮಾಲ್) `ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು' ಸ್ಪರ್ಧೆ ಆಯೋಜಿಸಿದ್ದು ಸಿಸನ್ 3 ಗ್ರ್ಯಾಂಡ್ ಫಿನಾಲೆಯಲ್ಲಿ ಮುಂಬಯಿಯಲ್ಲಿನ ಹೆಸರಾಂತ ತುಳು ಕನ್ನಡತಿ ಪ್ರಭಾ ಎನ್.ಪಿ ಸುವರ್ಣ ಅವರು ಅಂತಿಮ ಸುತ್ತಿನಲ್ಲಿ ವಿಜೇತೆಯಾಗಿ ಕಿರೀಟ ಮುಡಿಗೇರಿಸಿ ಕೊಂಡರು.

ಗೀತಾಂಜಲಿ ಸಿಲ್ಕ್ಸ್ ಉಡುಪಿ, ಲಯನ್ಸ್ ಇಂಟರ್‍ನ್ಯಾಶನಲ್ ಮಂಗಳೂರು ಕಾವೇರಿ, ಕರ್ನಾಟಕ ಬ್ಯಾಂಕ್, ಸರ್ವಲೋದ, ಜೇಸಿಐ ಮಂಗಳೂರು ಇಂಪಕ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕಿ, ಮಿಸ್ ಇಂಡಿಯಾ ಏಷಿಯಾ ಪೆಸಿಫಿಕ್ ಇಂಟರ್‍ನ್ಯಾಶನಲ್ (ಸೌತ್) ನಿರ್ದೇಶಕಿ ಪ್ರತಿಭಾ ಸಂಶಿಮತ್ ಮತ್ತು ಗಣ್ಯರು ಪ್ರಭಾ ಸುವರ್ಣ ಅವರಿಗೆ ಕಿರೀಟ ತೊಡಿಸಿ `ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು' ಪ್ರಶಸ್ತಿ ಶೀರ್ಷಿಕೆ ಪ್ರದಾನಿಸಿ ಅಭಿನಂದಿಸಲಾಯಿತು.

ಪ್ರಭಾ ಸುವರ್ಣ ಅವರÀು ಕಳೆದ ಸುಮಾರು ನಾಲ್ಕುವರೆ ದÀಶಕಗಳಿಂದ ಮುಂಬಯಿಯಲ್ಲಿ ಲೇಖಕಿ, ಕವಯತ್ರಿ ಆಗಿದ್ದು ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಮಹಿಳಾ ಪ್ರಧಾನ ಸಂಸ್ಥೆಗಳ ಮುಖೇನ ಸೇವಾ ನಿರತರಾಗಿದ್ದು ಬಹುಮುಖ ಪ್ರತಿಭಾ ಸಂಪನ್ನಾ ಹಸನ್ಮುಖಿ ನಾರಿ ಎಂದೆಣಿಸಿದ್ದಾರೆ. ಮಂಗಳೂರಲ್ಲಿ ಹುಟ್ಟಿ, ಮುಂಬಯಿಯಲ್ಲಿ ಬೆಳೆದು, ಕಲಿತು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತಾಧಿಕಾರಿ ಆಗಿ ಸದ್ಯ ನಿವೃತ್ತರಾಗಿದ್ದಾರೆ. ಮುಂಬಯಿಯಲ್ಲಿನ ಪ್ರತಿಷ್ಠಿತ ಸಂಸ್ಥೆಗಳಾಗಿರುವ ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ ಹಾಗೂ ಬಿಲ್ಲವ ಜಾಗೃತಿ ಬಳಗದ ಮಹಿಳಾ ವಿಭಾಗೀಯ ಕಾರ್ಯಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಅಸೋಸಿಯೇಶನ್ ಫಾರ್ ಮಸೋಮಿ ಲೇಡಿಸ್ ಸಂಸ್ಥೆಯಲ್ಲಿ ಕೆಲವು ವರ್ಷಗಳಿಂದ ಯೋಗದಾನ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಕಾರ್ಯಾಧ್ಯಕ್ಷೆಯಾಗಿಯೂ ದಕ್ಷತೆ ತೋರಿಸಿದ್ದಾರೆ. ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್ ಆಫ್ ಭಾರತ ಸರ್ಕಾರದ (ಓIಖಿI ಆಯೋಗ) ಇವರÉ ಸಾಮಾಜಿಕ ಕಾರ್ಯ ಮತ್ತು ಬಹು ಪ್ರತಿಭೆಗಳಿಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 202ರ ಆ.27 ರಂದು ಹೊಸೂರು ಚೆನ್ನೈನ ಕ್ಲೆರೆಸ್ಟಾ ಹೋಟೆಲ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಯುಡಿಸಿ ಅಧ್ಯಕ್ಷ ಡಾ ಸಿ ಪಾಲ್ ಇಬ್ನೇಜರ್, ಉಪಾಧ್ಯಕ್ಷ ಡಾ ಕೆ ಪ್ರಭಾಕರ್, ಡಾ| ಕೆ.ಎ ಮನೋಹರನ್, ಡಾ| ಅರುಲ್ ದಾಸ್ ಮತ್ತು ಡಾ| ಇಳಂಗೋವನ್ ಅವರು ಡಾಕ್ಟರೇಟ್ ಪ್ರದಾನ ಮಾಡಿದ್ದರು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here