Sunday 26th, June 2022
canara news

ದೆಹಲಿ ದ್ವಾರಕ ಸೆಕ್ಟರ್‍ನಲ್ಲಿ 108ಪ್ರಾಗ್ಯ ಸಾಗರ ಮುನಿ ಮಹಾರಾಜರ ದೀಕ್ಷಾ ವರ್ಧ0ತಿ

Published On : 17 Jun 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.14: ಪರಮ ಪೂಜ್ಯ ಆಚಾರ್ಯ 108ಪ್ರಾಗ್ಯ ಸಾಗರ ಮುನಿ ಮಹಾ ರಾಜರ 20ನೇ ದೀಕ್ಷಾ ವರ್ಧ0ತಿ ಉತ್ಸವ ದೆಹಲಿ ದ್ವಾರಕ ಸೆಕ್ಟರ್ 10ರಲ್ಲಿ ಜರುಗಿತು ಇಂದಿಲ್ಲಿ ಸಾಂಪ್ರದಾಯಿಕವಾಗಿ ನಡೆಸಲ್ಪಟ್ಟಿತು.

ಈ ಸಂಧರ್ಭ ಆಶೀರ್ವಾದ ನೀಡಿದ ಆಚಾರ್ಯ ಪ್ರಾಗ್ಯಸಾಗರ ಮುನಿವರ್ಯರು ಪ್ರಾಕೃತ ಸಂಶೋಧನೆ ಕೇಂದ್ರ ಕುಂದ ಭಾರತಿಯ ಆಚಾರ್ಯ ವಿದ್ಯಾನಂದರ ಶಿಷ್ಯರಾಗಿ ನಿರಂತರ ಸ್ವಾಧ್ಯಯ ಸನ್ಯಾಸದ ಸಂಯಮ ಧರ್ಮದ ಪಾಠ ನಿರಂತರ ಸಿಕ್ಕಿದ್ದು ಅವರು ಚಲಿಸುವ ವಿಶ್ವಕೋಶವಾಗಿದ್ದರು. ಅವರ ಜೀವನ ಶೈಲಿ ನಮಗೆ ಪ್ರೇರಣೆದಾಯಕವಾಗಿತ್ತು ಅವರೊಡನೆ ಕಳೆದ ಸಸ್ಸಂಗ ಮರೆಯಲಾರದ ದಿನ. ಅವರು ನಮಗೆ ಗುರುವಾಗಿ ಸಿಕ್ಕಿರುದು ನಮ್ಮ ಪರಮ ಸೌಭಾಗ್ಯ ಆಚಾರ ಹಾಗೂ ಧರ್ಮದ ಪ್ರಚಾರದಿಂದ ಅಜ್ಞಾನದ ಕೊಳೆ ಅಳಿದು ಲೋಕದಲ್ಲಿ ಶಾಂತಿ ನೆಮ್ಮದಿಯಾಗಿ ಮುಕ್ತಿಸಾಧ್ಯ ಎಂದು ಶುಭನುಡಿ ಗೈದರು.

ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಪಾವನ ಉಪಸ್ಥಿತಿ ನೀಡಿದ್ದು, ತಮ್ಮ ಮಂಗಲ ಪ್ರವಚನದಲ್ಲಿ ಸುಮಾರು 16ವರ್ಷ ದಿಂದ ಮುನಿವರ್ಯರ ಸಂಪರ್ಕದಲ್ಲಿದ್ದು ಅನೇಕ ಗ್ರಂಥಗಳ ಅಧ್ಯಯನ ಪಾಠ ಪ್ರವಚನ ಜತೆಜತೆಗೆ ಆಚಾರ್ಯ ವಿದ್ಯಾನಂದ ಮುನಿರಾಜರ ಮಾರ್ಗದರ್ಶನದಲ್ಲಿ ಸಿಕ್ಕಿದೆ ನಿರಂತರ ತಪ ಸ್ವಾಧ್ಯಯ ವ್ರತಗಳ ಪಾಲನೆ ಸಾಧುಸಂತರಿಗೆ ಭೂಷಣ ಎಂದು ನುಡಿದು ಸದಾ ಗುರುವರ್ಯರ ಆಶೀರ್ವಾದ ಸರ್ವರಿಗೂ ಸಿಗುತ್ತಿರಲಿ ಎಂದು ಶುಭಹಾರೈಸಿ ಮುನಿವರ್ಯರಿಗೆ ವಿನಾಯಾಂಜಲಿ ಪೂರ್ವಕ ಭಕ್ತಿಕಾಣಿಕೆ ಸಮರ್ಪಿಸಿದರು.

ದೆಹಲಿ, ಮುಂಬಯಿ, ರಾಜಸ್ಥಾನ, ಗುಜರಾತ್ ಮಧ್ಯಪ್ರದೇಶ ಮೊದಲಾದ ಕಡೆಗಳಿಂದ ಬಂದ ಮುನಿ ವರ್ಯರ ಭಕ್ತಾದಿಗಳು ಗುರುಗಳ ಪಾದಪೂಜೆ ನೆರವೇರಿಸಿ ಆರತಿ ಬೆಳಗಿ ಪಿಂಚಿ, ಕಮಂಡಲ, ಶಾಸ್ತ್ರ ದಾನ ಮಾಡಿ ಭಕ್ತಿ ಕಾಣಿಕೆ ಸಮಾರ್ಪಿಸಿದರು.

ಕಾರ್ಯಕ್ರಮದಲ್ಲಿ 108 ವಿಹಷ್9 ಸಾಗರ ಮುನಿ ಸಂಘ ಸೌರಭ ಸಾಗರ ಭಟ್ಟಾರಕ, ಪಂಜಾಬ್ ಕೇಸರಿ ಪತ್ರಿಕಾ ಸಂಪಾದಕ ಸ್ವದೇಶ್ ಭೂಷಣ ಚಕ್ರೆಶ್ ಜೈನ್, ತ್ರಿಲೋಕ್ ಜೈನ್, ಸುಧೀರ್ ಜೈನ್ ಮೊದಲದವರು ಉಪಸ್ಥಿತರಿದ್ದರು

 
More News

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ

Comment Here