Monday 8th, August 2022
canara news

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು

Published On : 26 Jun 2022   |  Reported By : Rons Bantwal


ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ : ವಿದ್ಯಾಪ್ರಸನ್ನ ಸ್ವಾಮೀಜಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.26: ಭಾರತೀಯವಾದ ಮತ್ತು ಸನಾತನದ ಧರ್ಮ ಸಂಸ್ಕೃತಿಯಲ್ಲಿ ಸಿಗುವ ನೆಮ್ಮದಿ ಬೇರೆ ಯಾವ ವಿದೇಶಿಯ ಸಂಸ್ಕೃತಿಯಲ್ಲೂ ಸಿಗುವುದಿಲ್ಲ. ಹಾಗಾಗಿ ನಮ್ಮ ಯುವಜನತೆ ಇದನ್ನು ಅರ್ಥೈಸಿ ತಾತ್ಕಾಲಿಕ ಸುಖಕ್ಕೆ ಮಾರು ಹೋಗದೆ ಜೀವನದ ಕೊನೆಯ ತನಕ ಇರುವ ಸುಖಶಾಂತಿಯನ್ನು ಅನುಭವಿಸುವಂತಾಗಬೇಕು.ಅದಕ್ಕೆ ಭಾರತೀಯ ಪರಂಪರೆ ಅನುಸರಿಸಿ ಬಾಳಿದರೆ ಮಾತ್ರ ಪರಂಪರಾಗತವಾದ ಸಂಸ್ಕೃತಿಯ ಮೂಲ ನೆಮ್ಮದಿ ಸಿಗುತ್ತದೆ. ನಿರಂತರವಾದ ನೆಮ್ಮದಿ ಕಳಕೊಳ್ಳುವುದಕ್ಕಾಗಿ ತಾತ್ಕಾಲಿಕ ನೆಮ್ಮದಿಯ ಆಕರ್ಷಣೆಗೆ ಒಳಗಾಗಿ ತಮ್ಮ ಭವಿಷ್ಯ ಹಾಳುಮಾಡಿ ಕೊಳ್ಳಬಾರದು. ಪ್ರಸ್ತುತ ಯುವಜನತೆಯಲ್ಲಿನ ದಾಂಪತ್ಯ ವಿಚ್ಛೇದನೆಗಳಿಗೂ ಸಂಸ್ಕಾರದ ಕೊರತೆಯೇ ಕಾರಣ. ಸಂಸ್ಕೃತಿಯ ಹಾಗೂ ಧರ್ಮದ ಮೇಲಿನÀ ಗೌರವದ ಕೊರತೆ ದುರಂತವಾಗುತ್ತಿದೆ. ಹಾಗಾಗಿ ವಿದೇಶಿಯ ಸಂಸ್ಕೃತಿಯಲ್ಲಿ ತಾತ್ಕಲಿಕವಾಗಿರತಕ್ಕಂತ ಆಕರ್ಷಣೆಗೆ ಒಳಗಾಗದೆ ಮೂಲ ಸಂಸ್ಕೃತಿಯನ್ನು ರೂಢಿಸಿ ಬದುಕು ಬಂಗಾರವಾಗಿಸಿ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಮೂರು ದಿನಗಳ ಪ್ರವಾಸದಲ್ಲಿ ಇಂದಿಲ್ಲಿ ಭಾನುವಾರ ಮುಂಬಯಿ ಚೆಂಬೂರು ಪಶ್ಚಿಮದಲ್ಲಿನ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಆಗಮಿಸಿದ ಶ್ರೀಪಾದರು ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿ ಹಾಗೂ ಶ್ರೀದೇವರ ಮಂಟಪದಲ್ಲಿ ಪಟ್ಟದ ಶ್ರೀ ಸಂಪುಟ ನರಸಿಂಹ ದೇವರಿಗೆ ಪೂಜೆಗಳನ್ನು ನೆರವೇರಿಸಿ ನೆರೆದ ಭಕ್ತರಿಗೆ ಪ್ರಸಾದ, ಮಂತ್ರಾಕ್ಷೆತೆಯನ್ನಿತ್ತು ಹರಸಿದರು.

ಧರ್ಮ ಸಂಸ್ಕೃತಿಯಿಂದಾಗಿ ನೆಮ್ಮದಿಯಿಲ್ಲ ಎಂದು ಕಂಡುಕೊಡ ಯುವಜನತೆ ಸದ್ಯ ಧರ್ಮದಿಂದ ದೂರ ಸರಿಯುವಂತಹದ್ದು ಕಾಣುತ್ತಿದ್ದರೆ ಮತ್ತೊಂದೆಡೆ ಒಂದು ಹಂತದ ನಂತರÀ ನೆಮ್ಮದಿಯ ಜೀವನಕ್ಕಾಗಿ ಹೊಸ ಸಂಸ್ಕೃತಿಗಾಗಿ ಧರ್ಮಬಲವನ್ನು ಕಾಣುವಂತಹದ್ದು ಕಾಣಬಹುದು. ಹಾಗಾಗಿ ಧರ್ಮದಿಂದ ದೂರ ಸರಿಯುವಂತಹದ್ದು ಮತ್ತು ಪಕ್ವತೆ ಬಂದಾಗ ಧರ್ಮದೊಂದಿಗೆ ಸಾಗುತ್ತಿರುವುದು ಕಾಣಬಹುದು. ಇಂತಹ ಪರಿವರ್ತನೆಗೆ ಮಠಾಧಿಪತಿಗಳು, ಗುರುಹಿರಿಯರು, ಧಾರ್ಮಿಕ ಧುರೀಣರಿಗೆ ದೊಡ್ಡ ಹೊಣೆಗಾಗಿಕೆಯಿದೆ. ವಿದೇಶಕ್ಕೂ ಭಾರತೀಯವಾದ ಸಂಸ್ಕೃತಿಗಳು ಬೇಕೆಂದು ಜನತೆಗೆ ತಿಳಿಸುವ ಜವಾಬ್ದಾರಿ ಎಲ್ಲರ ಹೊಣೆಗಾರಿಕೆ. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು ಮತ್ತು ಯುವಜನತೆ ಕೂಡಾ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಯುವಜನತೆ ಹಿರಿಯರು, ಅನುಭವಿಗಳು ಹೇಳಿ ಕೊಟ್ಟಂತಹ ಮಾತುಗಳನ್ನು ಕೇಳಿಕೊಂಡು ಅನುಭವಿಗಳು ಏನು ಪರಂಪರೆಯಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದಾರೆ ಅನ್ನುವುದನ್ನು ರೂಢಿಸಿ ಮುಂದಿನ ಪೀಳಿಗೆಗೂ ಕೂಡಾ ಅದನ್ನು ಆಚರಿಸಲು ಪ್ರೇರಕರಾಗುವ ಹೊಣೆಗಾರಿಕೆ ಯುವಜನತೆ ಒಪ್ಪಿಕೊಂಡು ಬಾಳಿದರೆ ಮಾತ್ರ ಅವರ ಜೀವನದಲ್ಲಿ ನಿರಂತರ ಸುಖಶಾಂತಿ, ನೆಮ್ಮದಿ ಸಿಗುತ್ತದೆ. ಬರೇ ದುಡ್ಡಿನ ಹಿಂದೆ ಹೋದರೆ ತಾತ್ಕಲಿಕವಾದ ನೆಮ್ಮದಿ ಸಿಕ್ಕಿ ಕೊನೇಗಳಿಗೆಯಲ್ಲಿ ವೃದ್ಧಾಶ್ರಮ ಅಥವಾ ನೆಮ್ಮದಿಯಿಲ್ಲದ ತಾಣಗಳಲ್ಲಿ ಸೇರಬೇಕಾಗುತ್ತದೆ. ಆದ್ದರಿಂದ ಪರಕೀಯ ಸಂಸ್ಕೃತಿ ಮೋಹ ಭಾರತದ ಭವಿಷ್ಯತ್ತಿಗೂ ಒಳ್ಳೆಯದ್ದಲ್ಲ ಎಂದೂ ಶ್ರೀಪಾದರು ಉಪಸ್ಥಿತ ಭಕ್ತರಿಗೆ ಕಿವಿಮಾತುಗಳನ್ನಾಡಿದರು.

ಕೊರೋನಾ ಕಾಲದ ನಂತರ ಒಂದಿಷ್ಟು ಜನರÀಲ್ಲಿ ಜೀವನದ ಸತ್ಯಾಸತ್ಯತೆ ಅರಿವುವಾಗಿದೆ. ಕೊನೆಗಳಿಗೆಯಲ್ಲಿ ಯಾರೂ ನಮ್ಮ ಹತ್ತಿರ ಇರುವುದಿಲ್ಲ ಬದಲಾಗಿ ದೇವರು ಮಾತ್ರ ನಮ್ಮೊಂದಿಗೆ ಇರುತ್ತಾರೆ ಅನ್ನುವ ಸತ್ಯಾನುಭವ ಆಗಿದೆ. ನಮ್ಮ ಸಂಘಜೀವನ ಅನ್ನುವುದೂ ಅನಿವಾರ್ಯವೂ ಹೌದು. ಅದು ಅಶಾಸ್ವತ ಅಂತಹೇಳುವುದು ಕೂಡಾ ಸತ್ಯದ ಸಾಕ್ಷಾತ್ಕಾರ. ಆದ್ದರಿಂದ ಬದುಕು ಇದ್ದಷ್ಟು ದಿವಸ ಜೊತೆಗೆ ಬಾಳಬೇಕೆಂಬ ಆಶಯ ಒಂದಿಷ್ಟು ಜನರಲ್ಲಿ ಮೂಡಿದೆ. ಮನುಕುಲಕ್ಕೆ ಕೊರೋನಾ ಬದಲಾವಣೆಯ ದೊಡ್ಡ ಪಾತ್ರವನ್ನು ಕಲಿಸಿದೆ. ಮತ್ತೆ ಅತ್ಯಂತ ಕ್ಲಿಷ್ಟಕರವಾದಂತಹ ಜೀವನ ಹೇಗೆ ಕಳೆಯಬೇಕು ಅನ್ನುವುದನ್ನೂ ತಿಳಿಸಿದೆ. ಹಾಗಾಗಿ ಜೀವನ ಕೇವಲ ವೈಭವದ ಜೀವನ ಅಥವಾ ಐಷಾರಾಮಿ ಜೀವನದಿಂದಲೇ ಬದುಕು ಸಾಗುವುದಿಲ್ಲ ಬದಲಾಗಿ ಎಂತಹ ವ್ಯವಸ್ಥೆಗೂ ನಾವು ಹೊಂದಿಕೊಂಡು ಬಾಳುವÀ ಅನಿವಾರ್ಯತೆ ಕೊರೋನಾ ಬೋಧಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಂದಿ ಕೂಡಾ ತುಂಬಾ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಮುಂಬಯಿಯಂತಹ ಮಹಾನಗರಕ್ಕೆ ಬಂದಿದ್ದಾರೆ. ಆದರೆ ಮುಂಬಾದೇವಿ, ಮಹಾಲಕ್ಷಿ ್ಮಯ ಅನುಗ್ರಹದಿಂದ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಲು ಕರ್ಮಭೂಮಿ ಮಾಡಿಕೊಟ್ಟಿದೆ. ಹಾಗಾಗಿ ಈ ಭೂಮಿಯ ಮೇಲೆ ಅಪಾರ ಅಭಿಮಾನ ಅದರ ಜೊತೆಗೆ ಮಾತೃಭೂಮಿಯ ಮೇಲೆ ಕೂಡಾ ಅನನ್ಯ ಅಭಿಮಾನ, ಪ್ರಾದೇಶಿಕ ಭಾಷೆಯಲ್ಲಿ ಕೂಡಾ ಗೌರವ ಇವೆರಡನ್ನೂ ಇಟ್ಟುಕೊಂಡು ನಾವು ಕಳೆದು ಕೊಳ್ಳಬೇಕಾದುದನ್ನು ಕಳೆದು ಕೊಳ್ಳದೆ ತಮ್ಮ ತೌಳವ ಸಂಸ್ಕೃತಿಯನ್ನೂ ಸಾಧ್ಯವಾದಷ್ಟು ಮಟ್ಟಿಗೆ ರೂಢಿಸಿ ಕೊಂಡು ಬದುಕುತ್ತಿರುವುದು ಅಭಿನಂದನೀಯ. ಭಾವೀ ಜನಾಂಗಕ್ಕೆ ತೌಳವ ಭಾಷೆ, ಸಂಸ್ಕೃತಿಯ ಮೇಲೆ ಹಿಡಿತ ತಪ್ಪಿಹೋಗದಂತೆ ಬಾಳುವುದರ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಸಂಸ್ಕೃತಿ ಎಲ್ಲವನ್ನೂ ಮೇಳೈಸಿಕೊಂಡು ಅಪ್ಪಟ ಭಾರತೀಯರಾಗಿ ಬಾಳಬೇಕು.

ಇಂದಿಲ್ಲಿ ಕುಂಜರಾಹು ಸಂಧಿ ಪೂಜೆ, ನವಗ್ರಹ ಹೋಮ, ಮಾರ್ಕಂಡೇಯ ಹೋಮ, ಪವಮಾನ ಹೋಮ, ಮೃತ್ಯುಂಜಯ ಹೋಮ ಇತ್ಯಾದಿಗಳು ನೆರವೇರಿಸಲ್ಪಟ್ಟವು. ಪುರೋಹಿತರಾದ ವೇ| ಮೂ| ಕೃಷ್ಣರಾಜ ತಂತ್ರಿ, ಅಶೋಕ ಭಟ್, ರಾಮ ಪುರೋಹಿತ, ವಾಸುದೇವ ವೈಲಾಯ, ಶ್ರೀಧರ್ ಭಟ್, ನವೀನ್ ಭಟ್, ಮಠದ ವ್ಯವಸ್ಥಾಪಕ ರವಿರಾಜ್ ಭಟ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಉದ್ಯಮಿ ರಾಜೇಶ್ ರಾವ್ ವಿದ್ಯಾವಿಹಾರ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದರು.

ಸುಬ್ರಹ್ಮಣ್ಯಶ್ರೀಗಳವರು ಮಹಾನಗರದ ಸುಬ್ರಹ್ಮಣ್ಯ ಮಠ, ಪ್ಲಾಟ್ ಸಂಖ್ಯೆ 104, ಛೆಡ್ಡನಗರ, ಚೆಂಬೂರು, ಮುಂಬಯಿ ಇಲ್ಲಿ ಜೂ.26ರ ಭಾನುವಾರ ದಿಂದ ಜೂ.29ರ ಬುಧವಾರ ತನಕ ಇಲ್ಲಿ ವಾಸ್ತವ್ಯ ಹೂಡುವರು. ನಾಳೆ (ಜೂ.28) ಮಂಗಳವಾರ ಮುಲುಂಡ್‍ನ ಖಾಸಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸಂಜೆ 5.00 ಗಂಟೆಯ ಬಳಿಕ ಹಾಗೂ ಬುಧವಾರ ದಿನವಿಡೀ ಚೆಂಬೂರು ಮಠದಲ್ಲೇ ಇದ್ದು ಮಠಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮತ್ತು ನಾಗದೇವರ ದರ್ಶನ ಪಡೆಯುವ ಅವಕಾಶವಿದ್ದು ಶ್ರೀಗಳವರೇ ಮಂತ್ರಾಕ್ಷತೆ, ಆಶೀರ್ವಚನ ನೀಡಲಿರುವರು. ಶ್ರೀಗಳ ಸಂದರ್ಶನಕ್ಕಾಗಿ ಭಕ್ತರು ಮೊಬಾಯ್ಲ್ ಸಂಖ್ಯೆ 9616961674 ಮತ್ತು 9892989257 ಇವುಗಳನ್ನು ಸÀಂಪರ್ಕಿಸಲು ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ವಿಷ್ಣು ಕಾರಂತ್ ತಿಳಿಸಿದ್ದಾರೆ.

 
More News

ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ
ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ
ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ
ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ
ಜೈನಕಾಶಿ ಮೂಡುಬಿದಿರೆಯಲ್ಲಿ ನಾಗರ ಪಂಚಮಿ ಆಚರಣೆ
ಜೈನಕಾಶಿ ಮೂಡುಬಿದಿರೆಯಲ್ಲಿ ನಾಗರ ಪಂಚಮಿ ಆಚರಣೆ

Comment Here