Friday 9th, May 2025
canara news

ಜು.03: ಕುಡಲಾ ಕುಡಲಾ ಕುಡ್ಲಾ ಐಲೇಸಾ - ರೇಡಿಯೋ ನೆನಪಾಧಾರಿತ ಕಾರ್ಯಕ್ರಮ

Published On : 03 Jul 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.02: ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಇದೇ ಜು.03ನೇ ಆದಿತ್ಯವಾರ ಸಂಜೆ 7.30 ಗಂಟೆಗೆ ಜೂಮ್ ಡಿಜಿಟಲ್ ವೇದಿಕೆಯಲ್ಲಿ (ವರ್ಚ್ಯುವಲ್ ಕಾರ್ಯಕ್ರಮ) ಕುಡಲಾ ಕುಡಲಾ ಕುಡ್ಲಾ ತಾರೀಖು ಐಲೇಸಾ ಇದರ ವಿಶೇಷ ರೇಡಿಯೋ ನೆನಪಾಧಾರಿತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದೆ.

ಮನರಂಜನೆಗೆ ಬರೀ ರೇಡಿಯೋ ಮಾತ್ರ ಇದ್ದ ಕಾಲದಲ್ಲಿ ರೇಡಿಯೋ ನೆನಪುಗಳು ಅನೀರ್ವಚನೀಯ ಆನಂದ ಕೊಡುತ್ತಿದ್ದುದು ಇಂದಿಗೂ ಮರೆಯಲಾರದ ನೆನಪು . ಈ ನೆನಪುಗಳನ್ನು ಆಧರಿಸಿ ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಬಾರಿ ಕುಡಲಾ ಕುಡಲಾ ಕುಡ್ಲಾ (ಮತ್ತೆ ಮತ್ತೆ ಮಂಗಳೂರು) ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ದುಡಿದ ಹಾಲಿ ಉದ್ಯೋಗಿಗಳಾದ ಕಾನ್ಸೆಪ್ಟಾ ಫೆರ್ನಾಂಡಿಸ್, ಪ್ರವೀಣ್ ಅಮ್ಮೆ0ಬಳ ಮತ್ತು ನಿವೃತ್ತ ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರು ಅತಿಥಿüಗಳಾಗಿ ಭಾಗವಹಿಸಿ ತಮ್ಮ ನೆನಪುಗಳನ್ನು ಹಂಚಲಿದ್ದಾರೆ .

ಕಾರ್ಯಕ್ರಮ ಪೂರ್ತಿ ರೇಡಿಯೋ ಕೇಳುವಿಕೆಯ ರೀತಿಯಲ್ಲಿ ವಿಶೇಷವಾಗಿ ಸಂಯೋಜಿಸಿದ್ದು ಮುಂಬಯಿ ರಂಗಭೂಮಿಯ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ಕಲಾವಿದ ಮೋಹನ್ ಮಾರ್ನಾಡ್ ವಿಶೇಷವಾಗಿ ಭಾಗವಹಿಸಿದ್ದು, ಸೂರಿ ಮಾರ್ನಾಡು ಮತ್ತು ಆಶಾ ಮಾರ್ನಾಡು ಕೂಡಾ ಪಾತ್ರ ಹಂಚಿ ಕೊಂಡಿದ್ದಾರೆ .

ಮಂಗಳೂರು ಆಕಾಶವಾಣಿಯ ಲತೀಶ್ ಪಾಲ್ದನೆ ಕಾರ್ಯಕ್ರಮ ನಿರೂಪಿಸುವುದರ ಜೊತೆಗೆ ರೇಡಿಯೋ ಬಗ್ಗೆ ವಿಶೇಷ ಮಾಹಿತಿ ಹಂಚಿ ಕೊಳ್ಳಲಿದ್ದಾರೆ. ಮತ್ತೊಬ್ಬ ಉದ್ಘೋಷಕಿ ಅಕ್ಷತಾ ಪೆರ್ಲ ಕಾರ್ಯಕ್ರಮದ ನಿರೂಪಣೆಗೆ ಸಹಕರಿಸಿದ್ದಾರೆ. ಸಂಗ್ರಹ ಯೋಗ್ಯ ಈ ಅನನ್ಯ ಕಾರ್ಯಕ್ರಮದಲ್ಲಿ Zoom Iಆ: 83092043842 Pಚಿss ಅoಜe: iಟesಚಿ ಬಳಸಿ ಭಾಗವಹಿಸಲು ಐಲೇಸಾ ತಂಡದ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡು ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here