Friday 9th, May 2025
canara news

ಚೆಂಬೂರು ಕರ್ನಾಟಕ ಶಾಲೆಗೆ "ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ" ಪುರಸ್ಕಾರ

Published On : 03 Jul 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.30: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯು, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಸಮಿತಿ, ಶಿಕ್ಷಣ ಸಚಿವಾಲಯವು ಭಾರತ ರಾಷ್ಟ್ರದ ಅಮೃತಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಪ್ರದಾನಿಸಿದ 2021- 22ರ ಸಾಲಿನ "ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ" ಪುರಸ್ಕಾರವನ್ನು ಪಡೆದು ಕೊಂಡಿದೆ .

ಈ ಪ್ರಶಸ್ತಿ ಸ್ಪರ್ಧೆಯಲ್ಲಿ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ಮೊದಲನೆಯದಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 300 ಶಾಲೆಗಳ ಪೈಕಿ ಚೆಂಬೂರು ಕರ್ನಾಟಕ ಶಾಲೆಯು ಒಳಗೊಂಡಿದ್ದು ಜೊತೆಗೆ ಜಿಲ್ಲಾ ಮಟ್ಟದ ಉಪ ವರ್ಗದ ಅಡಿಯಲ್ಲಿ, ಫೈವ್ ಸ್ಟಾರ್ ರೇಟಿಂಗ್ ನೊಂದಿಗೆ ಆಯ್ಕೆಯಾದ ಏಳು ಶಾಲೆಗಳ ಪೈಕಿಯಲ್ಲಿಯೂ ಕೂಡಾ ಚೆಂಬೂರು ಕರ್ನಾಟಕ ಶಾಲೆಯು ಸ್ಥಾನವನ್ನು ಪಡೆದಿದ್ದು, ಎರಡು "ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ" ಪುರಸ್ಕಾರಗಳನ್ನು ತನ್ನ ಮುಡಿಗೆರಿಸಿ ಸ್ವಚ್ಛ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಗುರುವಾರ ಚರ್ಚ್‍ಗೇಟ್ ನ್ಯೂಮರಿನ್‍ಲೈನ್ಸ್ ಇಲ್ಲಿನ ಬ್ಲೋಸಮ್ ಇಂಗ್ಲೀಷ್ ಹೈಸೂಲ್‍ನಲ್ಲಿ ಆಯೋಜಿಸಲಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಕೆಎಸ್ ಶಾಲೆಯ ಮುಖ್ಯೋಪಾದ್ಯಯಿನಿ ಡಾ| ಗೀತಾಂಜಲಿ ಸಾಲಿಯಾನ್ ಭಾಗವಹಿಸಿ ಮಹಾರಾಷ್ಟ್ರ ರಾಜ್ಯದ ಪ್ರಾಥಮಿಕ ವಿಭಾಗದ ಉಪನಿರ್ದೇಶಕಿ ಎಸ್.ಜಗತಾಪ್ ಅವರಿಂದ ಪ್ರಮಾಣಪತ್ರ ಹಾಗೂ ಫಲಕಗಳನ್ನು ಸ್ವೀಕರಿಸಿದರು.

ಚೆಂಬೂರು ಕರ್ನಾಟಕ ಸಂಘವು ಸ್ವಚ್ಛತೆ ಹಾಗೂ ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಡ್ವೊಕೇಟ್ ಹೆಚ್.ಕೆ ಸುಧಾಕರ ಅವರು ವಿದ್ಯಾಥಿರ್üಗಳಿಗೆ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಅಭಿನಂದನೆ ಕೋರಿದರು

ಸಂಘದ ಸದಸ್ಯರ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ, ವಿದ್ಯಾಥಿರ್üಗಳ, ಬೋಧನ ಹಾಗೂ ಬೋಧನೇತರ ಸಿಬ್ಬಂದಿಗಳ ಸಂಪೂರ್ಣ ಸಹಕಾರದಿಂದ ಈ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ಡಾ| ಗೀತಾಂಜಲಿ ಸಾಲಿಯಾನ್ ಅಭಿಪ್ರಾಯ ಪಟ್ಟರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here