Friday 9th, May 2025
canara news

ಗುಜರಾತ್ ; ತುಳು ಸಂಘ ಬರೋಡಾ ಮಹಿಳಾ `ಟೀಮ್ ಸಮರ್ಪಣ್' ಅಸ್ತಿತ್ವಕ್ಕೆ

Published On : 03 Jul 2022   |  Reported By : Rons Bantwal


ಬರೋಡಾ, ಜೂ.29: ಗುಜರಾತ್ ರಾಜ್ಯದಲ್ಲಿ ಸೇವಾ ನಿರತ ತುಳು ಸಂಘ ಬರೋಡಾ ಸಂಸ್ಥೆಯು ತನ್ನ ಮಹಿಳಾ ವಿಭಾಗವನ್ನು ಅಸ್ತಿತ್ವಕ್ಕೆ ತಂದಿದ್ದು ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಧರ್ಮಪತ್ನಿ, ಹೆಸರಾಂತ ಸಮಾಜ ಸೇವಕಿ ಪ್ರಮೀಳಾ ಶಶಿಧರ್ ಶೆಟ್ಟಿ ಮತ್ತು ಡಾ| ಶರ್ಮಿಳಾ ಮಹಾವೀರ ಜೈನ್ ಸಾರಥ್ಯದಲ್ಲಿ `ಟಿಎಸ್‍ಬಿ ಟೀಮ್ ಸಮರ್ಪಣ್' ರೂಪಿಸಲಾದ ಸಂಘಟನೆಯನ್ನು ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರ ಧರ್ಮಪತ್ನಿ, ಹಿರಿಯ ಸಮಾಜ ಸೇವಕಿ ಶೋಭಾ ಡಿ. ಬೋಂಟ್ರಾ ದೀಪ ಬೆಳಗಿಸಿ ಚಾಲನೆಯನ್ನೀಡಿದರು.

ಮೊದಲ ಹಂತವಾಗಿ ಬರೋಡಾದಲ್ಲಿನ ಗೋತ್ರಿ ಸರ್ಕಾರಿ ಆಸ್ಪತ್ರೆ ಭೇಟಿ ಅಲ್ಲಿನ ಹೆರಿಗೆ ಸಂಬಂಧಿ ಹಾಗೂ ವೃದ್ಧಾಪ್ಯದಿಂದ ದಾಖಲಾದ ಮಹಿಳೆಯರು ಸೇರಿದಂತೆ ಆಥಿರ್üಕ ಆಶಕ್ತ ನಾರಿಯರಿಗೆ ಅವಶ್ಯಕ ಪೆÇ್ರೀಟಿನ್ ಆಹಾರ, ಹಣ್ಣುಹಂಪಲು, ತುಪ್ಪ, ಡ್ರೈ ಫ್ರುಟ್ಸ್ ಸೇರಿದಂತೆ ಔಷಧಿ ಇತ್ಯಾದಿ ಅತ್ಯವಶ್ಯ ವಸ್ತುಗಳನ್ನು ನೀಡಿ ಸಂತೈಸಿದರು.

ಈ ಸಂದರ್ಭದಲ್ಲಿ ಮನೋಹರಿ ಕೃಷ್ಣ ಶೆಟ್ಟಿ, ಸ್ವಾತಿ ವಿಶಾಲ್ ಶಾಂತಾ, ಜಯಶ್ರೀ ಜಿನರಾಜ್ ದಿನರಾಜ್, ವಿನೋದ ಸುಧಾಕರ್ ಶೆಟ್ಟಿ, ಶಿಲ್ಪಾ ದಿನೇಶ್ ಶೆಟ್ಟಿ, ಸುಜಾತಾ ಕೃಷ್ಣ ಶೆಟ್ಟಿ, ಶಕುಂತಲಾ ಬಾಲಕೃಷ್ಣ ಶೆಟ್ಟಿ, ಸುಪ್ರಿಯಾ ಪ್ರಶಾಂತ್ ಹೆಗ್ಡೆ, ಸಪ್ನಾ ಯಶವಂತ್ ಶೆಟ್ಟಿ ಮತ್ತಿತರರು ಹಾಜರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here