Friday 9th, May 2025
canara news

ಮುಂಬಯಿ ಪೇಜಾವರ ಮಠದಲ್ಲಿ ಪೇಜಾವರ ಶ್ರೀಗಳಿಂದ ತಪ್ತ ಮುದ್ರಾ ಧಾರಣೆ

Published On : 03 Jul 2022   |  Reported By : Rons Bantwal


ಗೋವುಗಳು ವಿಶ್ವಕ್ಕೆನೇ ತಾಯಿಯ ಸಮಾನ : ಪೇಜಾವರ ವಿಶ್ವಪ್ರಸನ್ನಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.29: ನಾವು ಯಾರನ್ನು ದೇವರೂ ಅಂತ ಪೂಜಿಸುತ್ತಿದ್ದೆವೆಯೋ ಅಂತಹ ಶ್ರೀಕೃಷ್ಣ ಹೇಳಿಕೊಟ್ಟು ಮಾಡಿಸಿದ ವರಗಳೇ ಗೋವುಗಳು. ಎಲ್ಲಾ ಗೋಪಾಲಕರು. ಕೃಷ್ಣ ಹೇಳಿದ ಮಾತುಗಳು ವೇದವಾಕ್ಯಕ್ಕಿಂತಲೂ ಮಿಗಿಲು ಎಂದು ತೀರ್ಮಾಣ ಮಾಡಿಕೊಂಡು ಎಲ್ಲಾ ಗೋಪಾಲಕರು ಕೂಡಾ ಗೂವುಗಳ ಉತ್ಸವ ಮಾಡಿದಂತೆ ನಾವು ಕೂಡಾ ಗೋಪಾಲಕರಕ್ಕಿಂತಲೂ ಹೆಚ್ಚು ಕೃಷ್ಣಭಕ್ತರಾಗಿದ್ದೇವೆ. ಅಮ್ಮನ ಎದೆಯಾಲನ್ನು ನಾವು ಪರಮಾಧಿ ಉಂಡಂತೆ ಮುಂದೆ ಸಾಯೋ ಸಮಯದಿ ಆಕಳ ಹಾಲನ್ನೇ ನಾವು ಉಪಯೋಗಿಸುವುದು. ಹುಟ್ಟಿನಿಂದ ಸಾವಿನ ತನಕ ಬೆಳೆಸುವ ಆಕಳೇ ತಾಯಿಯಾಗಿದ್ದಾಳೆ. ನಮ್ಮ ಮಾತ್ರವಲ್ಲ ಊರಿನ ಗೋವುಗಳ ರಕ್ಷಣೆಯೂ ನಮ್ಮದಾಗಬೇಕು. ಅವುಗಳೆಲ್ಲವೂ ನಮಗೆ ತಾಯಿಯ ಸಮಾನವಾಗಿದ್ದು ಗೋವುಗಳು ವಿಶ್ವಕ್ಕೆನೇ ತಾಯಿ ಸಮಾನ. ಆದ್ದರಿಂದ್ದ ಬರೇ ಹಾಲು ನೀಡುವ ಮಾತ್ರವಲ್ಲ ನೀಡದ ಗೋವುಗಳನ್ನೂ ಮೂಲೆಗುಂಪು ಮಾಡದೆಗೋವು ರಕ್ಷಣೆ ಮಾಡಿ ಅವುಗಳನ್ನು ಕೊನೆ ತನಕ ಕಾಪಾಡಿರಿ. ಆವಾಗಲೇ ಜೀವನ ಪಾವನವಾಗುವುದು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಅಧೋಕ್ಷಜ ಮಠಧೀಶ ವಿಶ್ವಪ್ರಸನ್ನ ಶ್ರೀಪಾದಂಗಳವರು ತಿಳಿಸಿದರು.

ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಬುಧವಾರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವಪ್ರಸನ್ನ ಸ್ವಾಮೀಜಿ ಪ್ರವಚನಗೈದು ತಿಳಿಸಿದರು.

ಪಟ್ಟದ ದೇವರು ಶ್ರೀ ಕೃಷ್ಣ ವಿಠ್ಠಲ ರಾಮದೇವರಿಗೆ ಪೂಜೆ, ಮಹಾರತಿ ನಡೆಸಿ ನೆರೆದ ಸದ್ಭಕ್ತರಿಗೆ ಪಾವಿತ್ರ್ಯತಾ ತಪ್ತ ಮುದ್ರಾ ಧಾರಣೆಗೈದು ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಅನುಗ್ರಹ ನುಡಿಗಳನ್ನಾಡಿ ದೇಹ ಶುದ್ಧಿಗಾಗಿ ವಿಷ್ಣು ಚಿಹ್ನೆಯನ್ನು ಶರೀರದಲ್ಲಿ ಧರಿಸಿ ತಪ್ತ ಮುದ್ರಾಧಾರಣೆ ಮಾಡಿಸಿದಾಗ ಶಾರೀರಿಕವಾದ ಸಮಸ್ತ ಪಾಪಗಳೂ ಭಸ್ಮವಾಗಿ ದೇಹವು ಶುದ್ಧಿಗೊಳ್ಳುವುದು. ಯಾರು ನಮಗೆ ಏನು ನೀಡಿದ್ದಾರೋ ನಾವು ಅದನ್ನು ಉಪಯೋಗಿಸ ಬೇಕಾದರೆ ಮೊದಲು ಕೊಟ್ಟವರಿಗೆ ಸಮರ್ಪಣೆ ಮಾಡಿ ಆ ಬಳಿಕ ಉಪಯೋಗಿಸಬೇಕು. ಗೋವುಗಳು ನಮಗೆ ಬದುಕನ್ನೇ ಕೊಟ್ಟಿದ್ದಾವೆ. ಅಂತಹ ಗೋವುಗಳಿಗೆ ನಾವು ಪ್ರತಿಯಾಗಿ ಬದುಕನ್ನು ಕೊಡಬೇಕು. ಗೋವುಗಳೆಲ್ಲವೂ ನಮಗೆ ಮಾತೃಪಿತೃರಿಗೆ ಸಮಾನ. ಅಂತಹ ಗೋವಂಶಕ್ಕೆ ನಾವು ಕನಿಷ್ಠ ಒಂದು ಮುಷ್ಠಿ ಆಹಾರ ನೀಡಿದಾಗ ಮಹಾವಿಷ್ಣು ಸಂತೃಪ್ತಿಯಾಗುವನು. ಎಲ್ಲಾ ಗೋವುಗಳು ತಂದೆತಾಯಿಗೆ ಸಮಾನವಾಗಿವೆ ಎಂದರು.

ಶ್ರೀ ಪೇಜಾವರ ಮಠದ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಪಾದರು ಸಾರ್ವಜನಿಕ ಗೋಪೂಜೆ ನಡೆಸಿ ತಮ್ಮ ಮುಂದಾಳುತ್ವದಲ್ಲಿ ನಡೆಯುತ್ತಿರುವ ನೀಲಾವರ, ಕೊಡವೂರು, ಹೆಬ್ರಿ ಇಲ್ಲಿಯ ಗೋಶಾಲೆಗಳಿಗೆ ಧನ ಸಹಾಯ ಮಾಡಿದ ಗಣ್ಯರನ್ನು ಗೌರವಿಸಿದರು. ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಹಾಗೂ ಇತರ ಭಜನಾ ಮಂಡಳಿಗಳು ಭಜನೆಗೈದವು. ಶ್ರೀ ಪೇಜಾವರ ಮಠದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಶ್ರೀ ಕೃಷ್ಣೈಕ್ಯರಾದ ಜಗದ್ಗುರು ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿರು. ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ ಪೂಜಾಧಿಗಳನ್ನು ನೆರವೇರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಎ.ಎಸ್ ರಾವ್, ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಪೇಜಾವರ ಮಠ ಮುಂಬಯಿ ಶಾಖಾ ಪ್ರಬಂಧಕರುಗಳಾದ ಹರಿ ಭಟ್ ಪುತ್ತಿಗೆ. ನಿರಂಜನ್ ಗೋಗ್ಟೆ, ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಸಿಎ| ಹರಿದಾಸ ಭಟ್, ಮಹಿಳಾ ವಿಭಾಗಧ್ಯಕ್ಷೆ ಪ್ರೇಮಾ ಎಸ್.ರಾವ್, ಎಸ್.ರಾಮ ವಿಠಲ ಕಲ್ಲೂರಾಯ, ಪರೇಲ್ ಶ್ರೀನಿವಾಸ ಭಟ್, ವಿದ್ವಾನ್ ಅರವಿಂದ ಬನ್ನಿಂತ್ತಾಯ, ವೆ| ಮೂ| ಕೃಷ್ಣರಾಜ ತಂತ್ರಿ, ವೇ| ಮೂ| ಸೂರ್ಯನಾರಾಯಣ ಆಚಾರ್ಯ, ರಾಘವೇಂದ್ರ ಭಟ್ ಕೇರಳ, ಭಾರ್ಗವ ಆಚಾರ್ಯ ಸೇರಿದಂತೆ ಅನೇಕ ಪುರೋಹಿತರು ದಾನಿಗಳಾದ ಡಾ| ಎಂ.ಎಸ್ ಆಳ್ವ, ಬಿ.ಆರ್ ಶೆಟ್ಟಿ ವಳಕಾಡು, ಬಿ.ವಿವೇಕ್ ಶೆಟ್ಟಿ, ನರೇಂದ್ರ ಎಂ.ಶೆಟ್ಟಿ (ಹಲ್ದಿನ್‍ಗ್ಲಾಸ್), ಪ್ರವೀರ್ ಆನಂದ್ ಶೆಟ್ಟಿ, ಆಧೀಶ್ ಆನಂದ್ ಶೆಟ್ಟಿ, ವಿಕ್ರಾಂತ್ ಉರ್ವಾಳ್ (ಐಐಟಿಸಿ), ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಎಂಎಂಆರ್‍ಡಿ ಉನ್ನತಾಧಿಕಾರಿ ಬಸವರಾಜ್ ಬಿಜಾಪುರ, ಸದಾನಂದ ಆಚಾರ್ಯ ಕಲ್ಯಾಣ್ಪುರ, ಶೇಖರ್ ಜೆ.ಸಾಲ್ಯಾನ್ ಪ್ರಭಾತ್ ಕಾಲೋನಿ, ನ್ಯಾ| ಆರ್.ಜಿ ಶೆಟ್ಟಿ, ಅನೂಪ್ ಶೆಟ್ಟಿ, ಅಶೋಕ್ ಎಂ.ಕೋಟ್ಯಾನ್, ಎನ್.ಸಿ ಶೆಟ್ಟಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ತಪ್ತ ಮುದ್ರಾಧಾರಣೆ ಮಾಡಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here