Friday 9th, May 2025
canara news

ಜು.17; ಶ್ರೀ ಪೇಜಾವರ ಮಠದಲ್ಲಿ ಶ್ರೀ ರಜಕ ಸಂಘ ಮುಂಬಯಿ ಇದರ 83ನೇ ಮಹಾಸಭೆ-ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Published On : 16 Jul 2022   |  Reported By : Rons Bantwal


ಮುಂಬಯಿ, ಜು.12: ಶ್ರೀ ರಜಕ ಸಂಘ ಮುಂಬಯಿ (ರಿ.) ಇದರ 83ನೇ ಮಹಾಸಭೆಯನ್ನು ಇದೇ ಬರುವ ಜುಲೈ.17ನೇ ಆದಿತ್ಯವಾರ ಪೂರ್ವಾಹ್ನ 9.30 ಗಂಟೆಗೆ ಸರಿಯಾಗಿ ಶ್ರೀ ಪೇಜಾವರ ಮಠ (ಮದ್ವ ಭವನ), ಪ್ರಭಾತ್ ಕಾಲೊನಿ, ಸಾಂತಕ್ರೂಜ್ (ಪೂರ್ವ) ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ದಾಸು ಸಿ.ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಲಿರುವುದು.

   

     Dasu C Salian (President)             VIJAY KUNDER (Vice President)

    

Sumithra Palimar (Hon.Gen.Secretary)  KIRAN KUNDER(Jt. Sectary)

   

Jaya Kunder (Jt. Treasuer)                   SUBHASH SALIAN (Jt. Treasurer)

ಸಭೆಯಲ್ಲಿ 82ನೇ ವಾರ್ಷಿಕ ಮಹಾಸಭೆಯ ವರದಿ ವಾಚನ ಮತ್ತು ಮಂಜೂರತಿ, ವಾರ್ಷಿಕ ಚಟುವಟಿಕಾ ವರದಿ, ಲೆಕ್ಕಪತ್ರ ಮಂಡಿಸಿ ಮಂಜೂರತಿ, ವೈವಾಹಿಕ ಜೀವನದ ಸ್ವರ್ಣ ದಂಪತಿಗಳ ಮತ್ತು ಹೊಸ ನವವಿವಾಹಿತ ದಂಪತಿಗಳ ಸನ್ಮಾನ, ಅಧ್ಯಕ್ಷರ ಅನುಮತಿಯ ಮೇರೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಸದಸ್ಯರಿಗೆ ಅವಕಾಶ ಒದಗಿಲಾಗುವುದು.

ಅಪರಾಹ್ನ ಭಜನೆ, ಹಳದಿ ಕುಂಕುಮ, ಸಾಮೂಹಿಕ ಶ್ರೀ ಸತ್ಯನಾರಯಣ ಮಹಾಪೂಜೆ, ಮಹಾ ಆರತಿ ಮತ್ತು ಮಹಾಪ್ರಸಾದ ವಿತರಣೆ ನಡೆಯಲಿದೆ. ಆ ಪ್ರಯುಕ್ತ ಸಂಘದ ರಜಕ ಬಾಂಧವರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಭೆ, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಬೇಕಾಗಿ ರಜಕ ಸಂಘದ ಗೌರವ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಆಡಳಿತ ಸಮಿತಿ ಪರವಾಗಿ ಈ ಮೂಲಕ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here