Monday 8th, August 2022
canara news

ನೆರೂಳ್ ಶ್ರೀ ಶನೀಶ್ವರ ಮಂದಿರದಲ್ಲಿ ವಿಚಾರ ಮಂಥನ ಹಮ್ಮಿಕೊಂಡ ಮಯೂರ ವರ್ಮ ಪ್ರತಿಷ್ಠ್ಠಾನ

Published On : 16 Jul 2022   |  Reported By : Rons Bantwal


ಸ್ವಾತಂತ್ರ್ಯದ ಇತಿಮಿತಿ ಲಕ್ಷ್ಮಣರೇಖೆ ಮೀರಿ ನಡೆಯುತ್ತಿದ್ದೇವೆ-ಅಶೋಕ ಪಕ್ಕಳ

ಮುಂಬಯಿ, ಜು.13: ನಮ್ಮ ದೇಶ ನಮಗೆ ಬಹಳಷ್ಟು ಕೊಟ್ಟಿದೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಿಂದೆ ಅರಿವೆ ಕಡಿಮೆ ಇದ್ದರೂ ಅರಿವು ಸಾಕಷ್ಟಿತ್ತು. ಹಾಗಾಗಿ ಹರಿದ ಬಟ್ಟೆಯನ್ನಾದರೂ ಹೊಲಿದು ಧರಿಸುತ್ತಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ ಹರಿದ ಬಟ್ಟೆಯನ್ನೇ ಇಷ್ಟಪಡುತ್ತೇವೆ. ಅದಕ್ಕೆ ನಮ್ಮ ಚಿಂತನಾ ಲಹರಿ ಬದಲಾದದ್ದೇ ಕಾರಣ. ಅರಿವು ಇಲ್ಲದಿದ್ದರೆ ಅರಿವೆ ಎಷ್ಟಿದ್ದರೂ ಪ್ರಯೋಜನವಿಲ್ಲ. ಇಂತಹ ಕಾಲಘಟ್ಟದಲಿ ಸ್ವಾತಂತ್ರ್ಯದಇತಿಮಿತಿ ಲಕ್ಷ್ಮಣ ರೇಖೆ ಮೀರಿ ನಡೆಯುತ್ತಿದ್ದೇವೆ ಎಂದು ಬಂಟರವಾಣಿ ಮಾಸಿಕದ ಗೌರವ ಪ್ರಧಾನ ಸಂಪಾದಕ ಅಶೋಕ ಪಕ್ಕಳ ತಿಳಿಸಿದರು.

ಕಳೆದ ರವಿವಾರ ಸಂಜೆ ನವಿಮುಂಬಯಿ ನೆರೂಳ್ ಅಲ್ಲಿನ ಶ್ರೀ ಶನೀಶ್ವರ ಮಂದಿರದ ಸಭಾಗೃಹದಲ್ಲಿ ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನವು ನೆರೂಲ್ ಶನೀಶ್ವರ ದೇವಾಲಯದ ಸಹಕಾರದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ `ಸ್ವಾತಂತ್ರ್ಯ ಹಾಗೂ ಜವಾಬ್ದಾರಿ' ವಿಚಾರ ಮಂಥನ ಕಾರ್ಯಕ್ರಮ ಆಯೋಜಿಸಿದ್ದು ವಿಚಾರ ಮಂಥನದ ಸಂವಹನಕಾರರಾಗಿದ್ದು ಅಶೋಕ ಪಕ್ಕಳ ಮಾತನಾಡಿದರು.

ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ ಎಂ.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಕನ್ನಡ ಕಲಾಕೇಂದ್ರದ ಅಧ್ಯಕ್ಷ ಟಿ.ಆರ್ ಮಧುಸೂಧನ, ಲಕ್ಷ್ಮೀಶ ಗಬ್ಲಡ್ಕ ಸುಳ್ಯ, ಮೈಸೂರು ಎಸೋಸಿಯೇಶನ್‍ನ ನೇಸರ ಮಾಸಿಕದ ಸಂಪಾದಕಿ ಡಾ| ಜ್ಯೋತಿ ಸತೀಶ್ ಭಾಗವಹಿಸಿದ್ದು ಅಭ್ಯಾಗತರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಶೋಕ ಪಕ್ಕಳ ಮಾತನಾಡಿ ಭಾಷಾವಾರು ಪ್ರಾಂತ್ಯ ರಚನೆ ಸುಗಮ ಆಡಳಿತ ವ್ಯವಸ್ಥೆಗೋಸ್ಕರ ಮಾಡಲಾಗಿದೆಯೇ ವಿನಹ ದ್ವೇಷಾಸೂಯೆಗೆ ಅಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ನಮ್ಮ ನಮ್ಮೊಳಗಿನ ಗಡಿ ವಿಚಾರದಲ್ಲೇ ಏಕತೆ ಸಾಧಿಸಲು ಸಾಧ್ಯವಾಗಿಲ್ಲ. ಇದು ದೇಶದ ಏಕತೆಗೆ, ಬಾಂಧವ್ಯ ವೃದ್ಧಿಗೆ ತೊಡಕಾಗುತ್ತದೆ ಎಂಬ ಅಭಿಪ್ರಾಯ ಮಂಡಿಸಿದರು. ನನ್ನ ದೇಹದ ಬೂದಿ ಹೋಗಿ ಬೀಳಲಿ ಭತ್ತ ಬೆಳೆಯುವ ಹೊಲಕ್ಕೆ ಎಂಬ ದಿನಕರ ದೇಸಾಯಿಯವರ ಕವಿವಾಣಿ ಸ್ವಾತಂತ್ರ್ಯ ಅಮೃತಮಹೋತ್ಸವದ ಈ ಸಂದರ್ಭ ಮೆಲುಕು ಹಾಕುವಂತಹ ಕವಿವಾಣಿ. ಕವಿಯ ಆಶಯ ಮತ್ತೊಮ್ಮೆ ಮೊಳಗಲಿ ಸ್ವಾತಂತ್ರ್ಯದ ಜವಾಬ್ದಾರಿ ಎಲ್ಲರೂ ಅರಿಯುವಂತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಕ್ಷ್ಮೀಶ ಗಬ್ಲಡ್ಕ ಅವರು ವಿವೇಚನಾ ರಹಿತ ಕೃಷಿಕ ಸಹ ಅಪಾಯಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿ 1960ರ ದಶಕದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾದಾಗ ಹಸಿರು ಕ್ರಾಂತಿಯಿಂದ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಗೆ ಪೆÇ್ರ್ರೀತ್ಸಾಹಿಸಲಾಯಿತು. ಮುಂದೆ ಅದೇ ರೂಢಿಯಾಗಿ ಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರ ಬಳಕೆಯಾಗುತ್ತ ಈಗ ಪೂರ್ಣ ವಿಷಯುಕ್ತವಾಗಿದೆ. ಹಾಲು, ನೀರು, ಗಾಳಿ ಸಹ ವಿಷಯುಕ್ತವಾಗುತ್ತದೆ ಎಂದರೆ ಯಾರಿಗೆ ಹೇಳುವುದು. ವಿವೇಚನಾ ರಹಿತ ರೈತ ಸಹ ಅಪಾಯಕಾರಿ. ನಮ್ಮ ಆಹಾರದಲ್ಲಿ ವಿಪರೀತ ಎನ್ನುವಂತೆ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಹಾಗೆ ಕೃಷಿಯಲ್ಲಿ ವಿಷಯುಕ್ತ ರಾಸಾಯನಿಕ ಸೇರಿಸುವುದರಿಂದ ನಮ್ಮ ಆಹಾರ ಧಾನ್ಯಗಳು ವಿಷಯುಕ್ತವಾಗಿವೆ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದ ಎಂದರು.

ಸ್ವತಂತ್ರ ಭಾರತದಲ್ಲಿ ಸಾಂಸ್ಕøತಿಕ ಸಂಸ್ಥೆಗಳ ಜವಾಬ್ದಾರಿ ಕುರಿತ ಪ್ರಶ್ನೆಗೆ ಅಭ್ಯಾಗತರಾದ ಕನ್ನಡ ಕಲಾಕೇಂದ್ರದ ಅಧ್ಯಕ್ಷ ಟಿ.ಆರ್ ಮಧುಸೂದನ `ಸಾಂಸ್ಕøತಿಕ ಸಂಘ ಸಂಸ್ಥೆ ಕಟ್ಟಿ ಬೆಳೆಸುವುದು ನಮ್ಮ ಜವಾಬ್ದಾರಿ. ನಮ್ಮ ದೇಶ ದ ಸಾಂಸ್ಕøತಿಕ, ಜಾನಪದ ಸಂಪತ್ತು ಸಾಕಷ್ಟಿದೆ. ಅದನ್ನು ತಲೆಮಾರಿನಿಂದ ತಲೆಮಾರಿ (ಹೊಸ ಪೀಳಿಗೆಗೆ) ಹಸ್ತಾಂತರ ಆಗಬೇಕಾದರೆ ಸಾಂಸ್ಕøತಿಕ ಸಂಘ ಸಂಸ್ಥೆಗಳ ಪಾತ್ರ ಸಾಕಷ್ಟಿದೆ ಎಂದರು. ಸಾಂಸ್ಕøತಿಕ ಸಂಸ್ಥೆಗಳು ಸಹಬಾಳ್ವೆಗೆ ಪೂರಕವಾಗುತ್ತದೆ. ಕಾಲಕಾಲಕ್ಕೆ ಇಂತಹ ಚರ್ಚೆ, ವಿಚಾರ ಮಂಥನಗಳು, ಪ್ರಜಾಪ್ರಭುತ್ವದ ಭದ್ರ

ಬುನಾದಿಗೆ ಅವಶ್ಯ ಹಾಗೂ ಸಹಕಾರಿ. ಇಂಗ್ಲಿಷ್ ಮಾಧ್ಯಮದ ಮಕ್ಕಳು ಸಹ ಕನ್ನಡದಲ್ಲಿ ದೇಶಭಕ್ತಿಗೀತೆ ಹಾಡಿದ ರೀತಿಗೆ ಹಾಗೂ ಪುಟಾಣಿಗಳು ಮಾಡಿದ ಭಾಷಣಗಳು ಮುಂದಿನ ಸಾಂಸ್ಕøತಿಕ ಬೆಳವಣಿಗೆಗಳ ಶುಭ ಲಕ್ಷಣಗಳು. ನಮ್ಮ ಪರಂಪರೆಯನ್ನು ಈ ಕಿಶೋರರು ಮುಂದುವರಿಸಿಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ರಮೇಶ್ ಪೂಜಾರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದವು. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭವಸರದಲ್ಲಿದ್ದೇವೆ. ಈ ಸಂದರ್ಭ ಶನೀಶ್ವರ ದೇವಾಲಯದ ಸನ್ನಿಧಿಯಲ್ಲಿ ಸ್ವಾತಂತ್ರ್ಯ ಕುರಿತಾದ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಇದರಲ್ಲಿ ಭಾಗಿಯಾಗುವ ಸದವಕಾಶ ಮಾಡಿಕೊಟ್ಟ ಪ್ರತಿಷ್ಠಾನದ ಕಾರ್ಯಕರ್ತರಿಗೆ ಆಭಾರಿ. ದೇಶದ ಪ್ರತಿಯೋರ್ವ ನಾಗರಿಕನು ಸಂವಿಧಾನ ಅರಿಯುವುದು ಮುಖ್ಯ. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ, ಅದು ಜವಾಬ್ದಾರಿ. ಆ ಅರಿವು ಮೂಡಿದಾಗ ದೇಶದ ಐಕ್ಯತೆಗೆ ಇನ್ನಷ್ಟು ಬಲ ಬರುತ್ತದೆ. ಆ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಬಹು ಚಿಂತನಾರ್ಹವಾಗಿದೆ ಎಂದರು.

ಸುಪ್ರಿಯಾ ಅನಿಲ್ ಹೆಗ್ಡೆ ಪ್ರಾರ್ಥನೆ ಹಾಡಿದರು. ತಾರಾ ಬಂಗೇರ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಪ್ರತಿಷಾನದ ಕುರಿತು ಹಾಗೂ ವಿಚಾರ ಮಂಥನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಸಿಂಧೂರ ರಾಜೇಶ್ ಗೌಡ ಅಭ್ಯಾಗತರಿಗೆ ಸ್ಮರಣಿಕೆ ಗೌರವಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕು| ಅನಘಾ ದೊಡ್ಮನೆ, ಕು| ಸುಧುಘಾ ದೊಡ್ಮನೆ, ಕುಮಾರ ಪೃಥಿü ್ವೀಶ್, ಕುಮಾರ ಸನಾತನ, ಕುಮಾರ ಆದಿತ್ಯ ದೇಶಭಕ್ತಿಗೀತೆ ಹಾಡಿದರು. ಕು| ದಿಶಾ ಪ್ರಭು, ಕುಮಾರ ಸನಾತನ, ಸೂರಜ್ ದಾಮಣ್ಕರ್ ಅವರಿಂದ ಭಾಷಣ ನಡೆಯಿತು. ಶ್ರಾವ್ಯ ಶೆಟ್ಟಿ, ಭವಿತ್ ಕೋಟ್ಯಾನ್, ಭೂಮಿಕಾ ಗೌಡ ಬಳಗ ಜಾನಪದ ನೃತ್ಯ, ಶಾಂತಲಕ್ಷ್ಮಿ ಉಡುಪ ಬಳಗವು ಅಂಗುಲಿಮಾಲ ಕಿರುನಾಟಕ ಪ್ರದರ್ಶಿಸಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 
More News

ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ
ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ
ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ
ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ
ಜೈನಕಾಶಿ ಮೂಡುಬಿದಿರೆಯಲ್ಲಿ ನಾಗರ ಪಂಚಮಿ ಆಚರಣೆ
ಜೈನಕಾಶಿ ಮೂಡುಬಿದಿರೆಯಲ್ಲಿ ನಾಗರ ಪಂಚಮಿ ಆಚರಣೆ

Comment Here