Friday 9th, May 2025
canara news

ಮೂಡುಬಿದಿರೆ ಜೈನ ಕಾಶಿಯ ಕೆರೆ ಬಸದಿಯಲ್ಲಿ

Published On : 23 Jul 2022   |  Reported By : Rons Bantwal


12ನೇ ತೀರ್ಥಂಕರ ಭಗವಾನ್ ವಾಸುಪೂಜ್ಯಸ್ವಾಮಿ ಗರ್ಭವಾ ತರಣ ಕಲ್ಯಾಣ ಪೂಜೆ

ಮುಂಬಯಿ, ಜು.19: ಜೈನ ಕಾಶಿಯ ಇತಿಹಾಸ ಪ್ರಸಿದ್ಧ್ದ ಮೂಡುಬಿದಿರೆ ಕೆರೆ ಬಸದಿಯಲ್ಲಿ ಇಂದಿಲ್ಲಿ ಮಂಗಳವಾರ 12ನೇ ತೀರ್ಥಂಕರ ಭಗವಾನ್ ವಾಸುಪೂಜ್ಯ ಸ್ವಾಮಿ ಗರ್ಭವಾ ತರಣ ಕಲ್ಯಾಣ ಪೂಜೆ ಹಾಗೂ ಭಗವಾನ್ ಮಲ್ಲಿನಾಥ ಸ್ವಾಮಿ ಕ್ಷೀರ ಅಭಿಷೇಕ, ವಾಸ್ತು, ತಿಥಿüಗ್ರಹ, ಕ್ಷೇತ್ರಪಾಲ, ನಾಗ ದೇವರ ಪೂಜೆ ನೆರವೇರಿಸಲಾಯಿತು.

ಜಿನ ಪೂಜಾ ಪದ್ಧತಿಯಂತೆ ಗಂಗಾದಿ ಹದಿನಾಲ್ಕು ಪವಿತ್ರ ನದಿಗಳ ಮಂತ್ರ ಪಠಿಸಿ ಕಲಶದಲ್ಲಿ ಪುಣ್ಯಾಹ ವಾಚನ ಮಾಡಿ ಸ್ಥಾಪಿಸಿದ ಕಲಶ ದಿಂದ ಶಾಂತಿ ಮಂತ್ರ ಪಠಿಸಿ ಬಸದಿ ಕೆರೆಗೆ ಪವಿತ್ರ ಜಲ ಸೇಚನ ಮಾಡಿ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅನುಗ್ರಹಿಸಿ ನಾಡಿನಲ್ಲಿ ಎಲ್ಲೊ ಕೂಡ ಅತೀ ವೃಷ್ಟಿ ಅಥವಾ ಅನಾವೃಷ್ಟಿ ಆಗದಿರಲಿ ಲೋಕದಲ್ಲಿ ಶಾಂತಿ ನೆಲೆಯಾಗಲಿ ಎಂದು ಪ್ರಾಥಿರ್üಸಿದರು.

ಕೆರೆ ಬಸದಿ ಹೋರಾಂಗಣದಲ್ಲಿ ಭಗವಾನ್ ಶ್ರೀ ವಾಸುಪೂಜ್ಯಸ್ವಾಮಿಗೆ ಸ್ವಾಮೀಜಿ ಮಹಾ ಅರ್ಗ್ಯ ನೀಡಿ ಬಸದಿ ಕೆರೆಗೆ ಬಾಗಿನ ಅರ್ಪಿಸಲಾಯಿತು. ಅರ್ಚಕ ಶ್ರೀ ಸುವಿದಿ ಇಂದ್ರ ಇವರು ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪೂಜೆ ನೆರವೇರಿಸಿದರು.

ಈ ಸಂಧರ್ಭ ಪಟ್ಟಣ ಶೆಟ್ಟಿ ಸುಧೀಶ್ ಕುಮಾರ್, ದಿನೇಶ್ ಬೆಟ್‍ಕೇರಿ, ಆದರ್ಶ್ ಅರಮನೆ, ಅಭಯ ಕುಮಾರ್, ಸಂಜಯಂಥ ಕುಮಾರ್ ಸುಧಾಕರ್, ಸರ್ವ ಮಂಗಳ ಮಹಿಳಾ ಸಂಘದ ನೂತನ ಅಧ್ಯಕ್ಷೆ ಸುಧಾ ಪಾರ್ಶ್ವನಾಥ್, ಶ್ವೇತಾ ಜೈನ್, ನೇರಂಕಿ ಪಾರ್ಶ್ವನಾಥ್ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here