Friday 9th, May 2025
canara news

ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆ ಏರ್ಪಾಡಿಸಿದ ಪ್ರತಿಭಾ ಸ್ಪರ್ಧೆ

Published On : 30 Jul 2022   |  Reported By : Rons Bantwal


ಪ್ರತಿಯೊಂದು ಮಕ್ಕಳೂ ಪ್ರತಿಭಾ ಸಂಪನ್ನರು : ಫಾ| ಅವಿನ್ ಫ್ರಾಂಕ್ಲಿನ್

ಮುಂಬಯಿ (ಆರ್‍ಬಿಐ), ಜು.24: ಮಕ್ಕಳೆಂದರೆ ಪ್ರತಿಭೆಯ ಕಣಜರಾಗಿದ್ದು ಪ್ರತಿಯೊಂದು ಮಕ್ಕಳೂ ಪ್ರತಿಭಾ ಸಂಪನ್ನರಾಗಿದ್ದಾರೆ. ಮುಂಬಯಿಯಂತಹ ಮಹಾನಗರಗಳಲ್ಲಿ ಯಾಂತ್ರಿಕ ಜೀವನದ ಮಧ್ಯೆಯೂ ತಮ್ಮ ಮಕ್ಕಳಲ್ಲಿನ ಪ್ರತಿಭೆಗಳನ್ನು ಪ್ರೇರೆಪಿಸಲು ಇಂತಹ ಸಂಸ್ಥೆಗಳು ಅವಕಾಶ ಕಲ್ಪಿಸುವುದೇ ಮಕ್ಕಳ ಭಾಗ್ಯವಾಗಿದೆ. ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ ಆ ಮೂಲಕ ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು ಮಾತಾಪಿತರೂ ಪಡುವ ಪ್ರಯತ್ನವೂ ಶ್ಲಾಘನೀಯ. ಸ್ಪರ್ಧೆಗಳಿಲ್ಲದಿದ್ದರೆ ಪ್ರತಿಭಾನ್ವೇಷಣೆಗೆ ಅವಕಾಶ ಇರುತ್ತಿರಲ್ಲ. ಜಾಗತಿಕ ಸಾಂಕ್ರಮಿಕದಿಂದಾಗಿ ಕಳೆದೆರಡು ವರ್ಷಗಳಲ್ಲಿ ಎಲ್ಲರೂ ತಮ್ಮೊಳಗಿನ ಪ್ರತಿಭಾ ಪ್ರದರ್ಶನ ನಡೆಸಲು ವಂಚಿತರಾಗಿದ್ದಾರೆ. ಇನ್ನು ಹಾಗಾಗದೆ ಎಲ್ಲರಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳು ಲಭಿಸಲಿವೆ ಎಂದು ಸಂತ ಜೂಡ್ ಇಗರ್ಜಿ ಜೆರಿಮೆರಿ ಇದರ ಪ್ರಧಾನ ಧರ್ಮಗುರು ರೆ| ಫಾ| ಅವಿನ್ ಫ್ರಾಂಕ್ಲಿನ್ ತಿಳಿಸಿದರು.

ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯು ಇಂದಿಲ್ಲಿ ಭಾನುವಾರ ಕುರ್ಲಾ ಪಶ್ಚಿಮದ ಜೆರಿಮೆರಿಯಲ್ಲಿನ ಸಂತ ಜೂಡ್ ಇಗರ್ಜಿಯ ಸಭಾಗೃಹದಲ್ಲಿ ಭಾಷಾ ಮಂಡಳ್‍ನ ಅಧ್ಯಕ್ಷ ಜೋನ್ ಡಿಸಿಲ್ವಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೊಂಕಣಿ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಫಾ| ಅವಿನ್ ಫ್ರಾಂಕ್ಲಿನ್ ಮಾತನಾಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಡೀಕನ್ ಸಿಲ್ವೆಸ್ಟರ್ ಲೋಬೊ ಅತಿಥಿü ಅಭ್ಯಾಗತರಾಗಿ ವೇದಿಕೆಯಲ್ಲಿದ್ದು ಎಲ್ಲಾ ಸ್ಪರ್ಧಿಗಳಿಗೆ ಶುಭಕೋರಿದರು.

ಜೋನ್ ಡಿಸಿಲ್ವಾ ಮಾತನಾಡಿ ಪ್ರತಿಭಾಸ್ಪರ್ಧೆಗಳು ಪ್ರತಿಭಾನ್ವೇಷನೆಗೆ ಪೂರಕವಾಗಿದ್ದು ಪ್ರತಿಭಾವಂತರಲ್ಲಿನ ಪ್ರತಿಭೆಗಳನ್ನು ಸಾರ್ವತ್ರಿಕವಾಗಿ ಪ್ರದರ್ಶಿಸುವ ಅವಕಾಶಗಲಾಗಿವೆ. ಇದು ಸ್ಪರ್ಧೆಯಲ್ಲ ಪಾಲ್ಗೊಳ್ಳುವ ಪ್ರತೀಯೊಬ್ಬರ ಒಳಗಿರುವ ಪ್ರತಿಭೆಗಳನ್ನು ಗುರುತಿಸುವ ವೇದಿಕೆಯಾಗಿದೆ. ಆದ್ದರಿಂದ ಮಕ್ಕಳೆಲ್ಲರೂ ಭಾಗವಹಿ ಸುವಂತೆ ಪಾಲಕರು ಪ್ರೇರೆಪಿಸಬೇಕು. ಸಂಘಸಂಸ್ಥೆಗಳು ಪೆÇ್ರೀತ್ಸಾಹಿಸಿದಾಗ ಪ್ರತಿಭೆಗಳು ಹೊರಜಗತ್ತಿಗೆ ಪರಿಚಯವಾಗುತ್ತವೆ ಎಂದರು .

ಫ್ರಾನ್ಸಿಸ್ ಒಲಿವೆರಾ, ಆ್ಯಂಟನಿ ಎಂ.ಫೆರ್ನಾಂಡಿಸ್, ಹಿರಿಯ ರಂಗ ನಿರ್ದೇಶಕ ಜೋಯ್ ಪಾಲಡ್ಕ, ಡೋಲ್ಫಿ ಮಿನೇಜಸ್ ಕಲ್ಯಾಣ್ಫುರ್, ಹಿಲರಿ ಡಿಸಿಲ್ವಾ, ಕು| ಜೂಡಿ ಡಿಸೋಜಾ, ಶೋನ್ ಆರೆಲ್, ಜೊೈಸ್ ಡಿಸೋಜಾ, ಫೆÇ್ಲೀರಾ ಡಿಸೋಜಾ ಕಲ್ಮಾಡಿ ಪ್ರಮುಖರಾಗಿದ್ದು ಅವರನ್ನು ಪುಷ್ಫಗುಪ್ಚಗಳನ್ನಿತ್ತು ಗೌರವಿಸಲಾಯಿತು.

ಗೌರವ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಡಿಸೋಜಾ ಸ್ವಾಗತಿಸಿದರು. ಭಾಷಾ ಮಂಡಳ್‍ನ ಸಕ್ರೀಯ ಸದಸ್ಯ ಕಾರ್ಯಕ್ರಮದ ಪ್ರಧಾನ ಸಂಯೋಜಕ ಲಿಯೋ ಫೆರ್ನಾಂಡಿಸ್ ಜೆರಿಮೆರಿ, ಕೋಶಾಧಿಕಾರಿ ವಾಲ್ಟರ್ ಡಿಸೋಜಾ ಕಲ್ಮಾಡಿ, ಜೊತೆ ಕೋಶಾಧಿಕಾರಿ, ಸಿರಿಲ್ ಕಾಸ್ತೇಲಿನೋ ಅತಿಥಿüಗಳಿಗೆ ಪುಷ್ಫಗುಪ್ಚವನ್ನು ನೀಡಿ ಗೌರವಿಸಿದರು. ಕು| ಗ್ಲಾನ್ಸಿಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜೋನ್ ಆರ್.ಪಿರೇರಾ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here