Friday 19th, April 2024
canara news

ಜು.29: `ರಾವೊ ಪಕ್ಕಿ' ಮತ್ತು `ಇರೆನ ಮೋಕೆದ ನೆಂಪು...'

Published On : 26 Jul 2022   |  Reported By : Rons Bantwal


ಎರಡು ಹಾಡುಗಳು ಏಕಕಾಲದಲ್ಲಿ ಐಲೇಸಾದಲ್ಲಿ ಬಿಡುಗಡೆ

ಮುಂಬಯಿ (ಆರ್‍ಬಿಐ), ಜು.26: ಮುಂಬಯಿ ಅಲ್ಲಿನ ಪ್ರಸಿದ್ಧÀ ಸಾಹಿತಿ, ರಂಗ ಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅವರು ರಚಿಸಿರುವ `ರಾವೊ ಪಕ್ಕಿ..!' ಎನ್ನುವ ತುಳುನಾಡಿನ ಹಿಂದಿನ ಮತ್ತು ಇಂದಿನ ಸಾಮಾಜಿಕ ಜೀವನದ ಸ್ಥಿತ್ಯಂತರದ ಬಗೆಗಿನ ಸತ್ವಯುತ ಗೀತೆ ಮತ್ತು ಪುಣೆಯ ಸಾಹಿತಿ ಮಮತಾ ಅಂಚನ್ ಅವರ `ಇರೆನ ಮೋಕೆದ ನೆಂಪು' ಎನ್ನುವ ವಿಶಿಷ್ಟ ದಾಂಪತ್ಯ ಗೀತೆರಾಗ ಸಂಯೋಜನೆಗೊಂಡು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆಯಿಂದ ಬರುವ ಶುಕ್ರವಾರ (ಜು.29) ಭಾರತದ ಸಮಯ ಸಂಜೆ 7:30 ಗಂಟೆಗೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

     

Pravin Shetty                           Santosh Shetty Pune                   Narayana Nandalike

       

Mamatha Anchan                   Raghu C.Poojary                                 Nishit K.Shetty

`ರಾವೊ ಪಕ್ಕಿ' ಹಾಡನ್ನು ತುಳು ಭಾಷಾ ಪೆÇೀಷಕ ಮತ್ತು ಐಲೇಸಾದ ಪ್ರಮುಖ ಪೆÇ್ರೀತ್ಸಾಹಕರಾದ ಕುವೈಟ್‍ನ ರಘು ಸಿ.ಪೂಜಾರಿ ಪ್ರಾಯೋಜಿಸಿದ್ದಾರೆ ಮತ್ತು `ಇರೆನ ಮೋಕೆದ ನೆಂಪು' ಹಾಡನ್ನು ಬೆಂಗಳೂರಿನ ಪ್ರಸಿದ್ಧ ನ್ಯಾಯವಾದಿ ನಿಶಿತ್ ಕುಮಾರ್ ಶೆಟ್ಟಿ ಅವರು ತುಳುವ ಭಾಷಾಭಿಮಾನಿಗಳಿಗೆ ಕಾಣಿಕೆಯಾಗಿ ನೀಡಿದ್ದಾರೆ .

ಹಾಡುಗಳನ್ನು ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಪುಣೆಯ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಬೆಟ್ಟು ಇವರು ಲೋಕಾರ್ಪಣೆ ಗೊಳಿಸಲಿದ್ದಾರೆ .

ರಾವೊಪಕ್ಕಿ ಹಾಡು ತುಳುನಾಡಿನ ತನ್ನ ಹಿಂದಿನ ಗತವೈಭವಗಳು ಹೇಗೆ ನೆಲೆ ಕಳೆದು ಕೊಳ್ಳುತ್ತಿದೆ ಅನ್ನೋದನ್ನು ಮಾರ್ಮಿಕವಾಗಿ ಬಿಂಬಿಸುತ್ತದೆ. ಹಕ್ಕಿಯಯನ್ನು ರೂಪಕವಾಗಿ ಇಟ್ಟುಕೊಂಡು ಇದು ನೀನು ಹಿಂದೆ ತಿಂದುಂಡು ಬೆಳೆದ ಮನೆಯಾಗಿ ಉಳಿದಿಲ್ಲ ಎನ್ನುವ ನೋವನ್ನು ಕವಿ ನಂದಳಿಕೆ ನಾರಾಯಣ ಶೆಟ್ಟಿಯವರು ತುಂಬು ಕಳಕಳಿಯಿಂದ ಚಿತ್ರಿಸಿದ್ದಾರೆ . ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ಸಂಯೋಜನೆ ಮಾಡಿದ್ದು ಕ್ಯಾಲಿಕಟ್ಟಿನ ನಿಶಾಂತ್ ಮಧುರ ಸಂಗೀತ ಒದಗಿಸಿದ್ದಾರೆ . ಹಾಡನ್ನು ಖ್ಯಾತ ಗಾಯಕ ಐಲೇಸಾದ ರೂವಾರಿ ಡಾ. ರಮೇಶ್ಚಂದ್ರ ಸುಶ್ರಾವ್ಯವಾಗಿ ಹಾಡಿದ್ದಾರೆ .

`ಇರೆನ ಮೋಕೆದ ನೆಂಪು' ತುಳುವಿನ ವಿಶಿಷ್ಟ ದಾಂಪತ್ಯ ಗೀತೆಯಾಗಿದ್ದು ತುಳುನಾಡಿನ ಹೆಣ್ಣು ಮಗಳೊಬ್ಬಳು ದೂರದ ಊರಿನಲ್ಲಿ ದುಡಿಯುತ್ತಿರುವ ತನ್ನ ಗಂಡನ ನೆನಪಲ್ಲಿ ಆತನ ಬರುವಿಕೆಯ ದಾರಿಕಾಯುತ್ತಾ ತಮ್ಮಿಬ್ಬರ ಮಧುರ ಪ್ರೇಮದ ಭಾವದೊಸರಲ್ಲಿ ಕಾಲ ಕಳೆಯುವ ಕಥನವಾಗಿದ್ದು ಪುಣೆಯ ಸಾಹಿತಿ ಮಮತಾ ಅಂಚನ್ ಪದಗಳಲ್ಲಿ ಪ್ರೇಮ ತುಂಬಿ ಚಿತ್ರಿಸಿದ್ದಾರೆ. ಬೆಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ನಾಗ ಭೂಷಣ್ ಉಡುಪ ಎನ್.ಇವರು ಸಂಗೀತ ಸಂಯೋಜಿಸಿದ್ದು ಹೊಸ ಗಾಯಕಿ ಶೈಲಜಾ ವಿ. ಭಾವಪೂರ್ಣವಾಗಿ ಹಾಡಿದ್ದಾರೆ.

ಐಲೆಸಾ ಒಂದು ವರ್ಷದಲ್ಲಿ ಬಿಡುಗಡೆ ಗೊಳಿಸಿದ ಒಂಬತ್ತು ಮತ್ತು ಹತ್ತನೆಯ ಹಾಡು ಇವಾಗಿದ್ದು ಕಾರ್ಯಕ್ರಮವನ್ನು ಪುಣೆಯ ಖ್ಯಾತ ನಿರೂಪಕ ಶ್ಯಾಮ್ ಸುವರ್ಣ ಅವರು ನಡೆಸಿಕೊಡಲಿದ್ದಾರೆ. ದೇಶ ವಿದೇಶದ ಎಲ್ಲ ತುಳು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಎರಡೂ ಹಾಡುಗಳನ್ನು ಝೂಮ್ ವೇದಿಕೆಯಲ್ಲಿ Iಆ ಓo: 81707689319 Pಚಿssಛಿoಜe: iಟesಚಿ ಬಳಸಿಕೊಂಡು 29.7.2022 ಶುಕ್ರವಾರ ಭಾರತದ ಸಮಯ ಸಂಜೆ 7:30ಕ್ಕೆ ಸೇರಿಕೊಂಡು ತುಳುವಿನ ಹಾಡುಗಳನ್ನು ಪೆÇ್ರೀತ್ಸಾಹಿಸಬೇಕಾಗಿ ಐಲೇಸಾದ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡ್ ತುಳು ಕನ್ನಡ ಭಾಷಾಭಿಮಾನಿಗಳಲ್ಲಿ ವಿನಂತಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here