Friday 9th, May 2025
canara news

ಸಯಾನ್ ; ನವೀಕೃತ ಗೋಕುಲ ಮಂದಿರಕ್ಕೆ ಒಡಿಯೂರುಶ್ರೀ ಚರಣಸ್ಪರ್ಶ

Published On : 31 Jul 2022   |  Reported By : Rons Bantwal


(ಆರ್‍ಬಿಐ), ಜೂ.30: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಪುನರಾಭಿವೃದ್ಧಿಯೊಂದಿಗೆ ಹೊಚ್ಚೊಸತಾಗಿ ನಿರ್ಮಾಣಗೊಂಡ ಗೋಕುಲ ಮಂದಿರಕ್ಕೆ ಇಂದಿಲ್ಲಿ ತೆಂಕಣದ ಗಾಣಗಾಪುರ ಎಂದೇ ಜನಜನಿತ ದಕ್ಷಿಣ ಕನ್ನಡ ಜಿಲ್ಲೆಯ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಇಂದಿಲ್ಲಿ ಶನಿವಾರ ಭೇಟಿ ನೀಡಿದರು. ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಶ್ರೀಗಳವರನ್ನು ಪುಷ್ಫಗುಪ್ಚವನ್ನಿತ್ತು ಸ್ವಾಗತಿಸಿ ಭಕ್ತಿಪೂರ್ವಕವಾಗಿ ಮಂದಿರಕ್ಕೆ ಬರಮಾಡಿಕೊಂಡು ದೇವಸ್ಥಾನದ ವೈಶಿಷ್ಟ್ಯತೆ ಮತ್ತು ಸಂಕೀರ್ಣದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.

ದೇವಸ್ಥಾನದ ಸಂಕೀರ್ಣ ವೀಕ್ಷಿಸಿದ ಶ್ರೀಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀಕೃಷ್ಣನು ಸರ್ವರಿಗೂ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು. ಗೋಕುಲದ ಪ್ರಧಾನ ಆರ್ಚಕ ಗೋಪಾಲ ಭಟ್ ಕಿದಿಯೂರು ಪೂಜೆ ನೆರವೇರಿಸಿ ತೀರ್ಥ ಪ್ರಸಾದ ನೀಡಿದರು. ಒಡಿಯೂರು ಸಾಧ್ವಿ ಮಾತನಂದಮಯಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಬಿಎಸ್‍ಕೆಬಿಎ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಎಸ್.ಆರ್.ವಿ ಕಲ್ಲೂರಾಯ, ಚಂದ್ರಶೇಖರ್ ರಾವ್, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೆÇೀತಿ ಮತ್ತಿತರ ಪದಾಧಿಕಾರಿಗಳು, ಗುರುದೇವಾ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತರನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here