Wednesday 17th, August 2022
canara news

ಜೈನಕಾಶಿ ಮೂಡುಬಿದಿರೆಯಲ್ಲಿ ನಾಗರ ಪಂಚಮಿ ಆಚರಣೆ

Published On : 06 Aug 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.02: ಜೈನ ಕಾಶಿ ಮೂಡುಬಿದಿರೆಯಲ್ಲಿ ಇಂದಿಲ್ಲಿ ನಾಗರ ಪಂಚಮಿ ನಿಮಿತ್ತ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಮಾರ್ಗದರ್ಶನ ದಲ್ಲಿ 16 ಬಸದಿಗಳಲ್ಲಿ ವಿಶೇಷ ಪೂಜೆ ನಾಗಬನಗಳಲ್ಲಿ ಶೋ ಡಷೋಪಚಾರ ಪೂಜೆ, ಜಲ ಎಳನೀರು, ಅಕ್ಕಿ ಹಿಟ್ಟು ಹಾಲು, ಅರಶಿನ, ಶ್ರೀಗಂಧ, ಅರಳು, ಬೆಲ್ಲ, ತೆಂಗಿನ ಕಾಯಿ, ಬಾಳೆಕಾಯಿ ಹೂವಿನಿಂದ ಶೃಂಗಾರ ಮಾಡಿ ತನು ಹೊಯ್ಯಲಾಯಿತು.

ಈ ಸಂಧರ್ಭ ಗುರು ಬಸದಿಯಲ್ಲಿ ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಆಶೀರ್ವಾದ ನೀಡಿ ಗುರು ಬಸದಿ, ಕೆರೆ ಬಸದಿ, ಸಾವಿರ ಕಂಬ ಬಸದಿಯ ಪೂಜೆಯಲ್ಲಿ ಶ್ರೀ ಗಳು ಪಾಲ್ಗೊಂಡು ಆದಿ ಪುರಾಣ, ಪಾರ್ಶ್ವ ಪುರಾಣದಲ್ಲಿ ಧರಣೇಂದ್ರ ಯಕ್ಷ ನಾಗಬನ ವರ್ಣನೆ ಇದ್ದು ಜೈನ ಪೂಜಾ ವಿಧಿಯಲ್ಲಿ ಪಂಚ ಕುಮಾರ ಪೂಜೆ ಅಷ್ಟಕುಲ ನಾಗ ದೇವರ ಪೂಜೆ ಶ್ರೇಯಸ್ಸು, ಇಷ್ಟಾರ್ಥ ಸಿದ್ದಿ ಅರೋಗ್ಯ ಕುಟುಂಬ ಸೌಖ್ಯ ಧರ್ಮ ಲಾಭ ಕ್ಕಾಗಿ ಉಪಚಾರ 3 ಮತ್ತು 4ನೇ ಗುಣಸ್ಥಾನ ವರ್ತಿ ಶ್ರಾವಕರು ವಿನಯ ಪೂಜೆ ಭಕ್ತಿ ಸಲ್ಲಿಸುವ ಸಂಪ್ರದಾಯ ಮೊದಲಿನಿಂದಲೂ ಆಚರಣೆಯಲ್ಲಿದೆ ಲೋಕಶಾಂತಿಗಾಗಿ ಶಾಂತಿ ಧಾರೆಯಲ್ಲಿ ಉಲ್ಲೇಕಿಸಿ ಪೂಜಿಸುವ ಕ್ರಮವಿದೆ ಎಂದು ನೆರೆದ ಭಕ್ತಾದಿಗಳಿಗೆ ಆಶೀರ್ವಾದ ನೀಡಿದರು.

ಗುರು ಬಸದಿಯಲ್ಲಿ ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಸಂಜಯಂಥ ಕುಮಾರ್, ವೀರೇಂದ್ರ, ವೃಷಭ ಸಂಪತ್, ನಾಗೇಂದ್ರ ನೇರಂಕಿ,

ಪಾರ್ಶ್ವನಾಥ ಜೈನ್, ಮೂಡಬಿದಿರೆ ಮಠದ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ, ಆದಿತ್ಯ ಜೈನ್ ಮೊದಲದವರು ಉಪಸ್ಥಿತರಿದ್ದರು. ಅರ್ಚಕ ವೀರಾಜ್ ಇಂದ್ರ ಪೂಜೆ ನೆರವೇರಿಸಿ ಹರಸಿದರು.

 
More News

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರಾದ ನವಜೀವನ ಸದಸ್ಯರ  ಶತದಿನೋತ್ಸವ ಆಚರಣೆ
ಧರ್ಮಸ್ಥಳದಲ್ಲಿ ವ್ಯಸನ ಮುಕ್ತರಾದ ನವಜೀವನ ಸದಸ್ಯರ ಶತದಿನೋತ್ಸವ ಆಚರಣೆ
ವಿಶ್ವವಿದ್ಯಾಪೀಠ ವಿಶ್ವ ಬೆಳಗುವ ಕಾರ್ಯ: ರಾಘವೇಶ್ವರ ಶ್ರೀ
ವಿಶ್ವವಿದ್ಯಾಪೀಠ ವಿಶ್ವ ಬೆಳಗುವ ಕಾರ್ಯ: ರಾಘವೇಶ್ವರ ಶ್ರೀ
ಕನ್ನಡ ಭವನ ಮುಂಬಯಿ ಪ್ರಾಂಶುಪಾಲರಾಗಿ ಅಮೃತಾ ಅಜಯ್ ಶೆಟ್ಟಿ ಭಡ್ತಿ
ಕನ್ನಡ ಭವನ ಮುಂಬಯಿ ಪ್ರಾಂಶುಪಾಲರಾಗಿ ಅಮೃತಾ ಅಜಯ್ ಶೆಟ್ಟಿ ಭಡ್ತಿ

Comment Here