Thursday 6th, October 2022
canara news

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

Published On : 06 Aug 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.03: ಮುಂ¨ಯಿ ಜೋಗೇಶ್ವರಿ ಪೂರ್ವದ ಕೃಷ್ಣಾ ನಗರದಲ್ಲಿನ ಗುಂಫಾ ಟೆಕಡಿ ಇಲ್ಲಿನ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಕಳೆದ ಮಂಗಳವಾರ ಶ್ರದ್ಧಾಪೂರ್ವಕವಾಗಿ ನಾಗರ ಪಂಚಮಿ ಆಚರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಪಾದೂರ್ ನರಹರಿತಂತ್ರಿ ಅವರು ತನ್ನ ಪೌರೋಹಿತ್ಯದಲ್ಲಿ ಬೆಳಿಗ್ಗೆ ನಾಗರ ಪಂಚಮಿ ವಿಶೇಷ ಆಶ್ಲೇಷ ಬಲಿ ನಾಗ ತನು ತುಂಬಿಲ ಹಾಗೂ ಪಂಚಾಮೃತ, ಕ್ಷೀರ ಅಭಿಷೇಕ ತದನಂತರ ಮಹಾಪೂಜೆ ನಡೆಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಬಳಿಕ ಮಧ್ಯಾಹ್ನ ಸಾರ್ವಜಕ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು.

ಈ ಸದರ್ಭದಲ್ಲಿ ಎನ್‍ಸಿಪಿ ಮುಂಬಯಿ ಉಪಾಧ್ಯಕ್ಷ ಲಕ್ಷ ್ಮಣ ಸಿ.ಪೂಜಾರಿ, ಮುಂಬಯಿ ಬಿಜೆಪಿ ದಕ್ಷಿಣ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಶೆಟ್ಟಿ, ಉದ್ಯಮಿ ಸುರೇಂದ್ರ ಎ.ಪೂಜಾರಿ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಗಂಗಾಧರ ಜೆ.ಪೂಜಾರಿ, ಸೂರ್ಯಕಾಂತ್ ಜಯ ಸುವರ್ಣ, ಸಮಾಜ ಸೇವಕರಾದ ರಾಜೇಶ್ ಹೆಗಡೆ, ಅಶೋಕ್ ಸಸಿಹಿತ್ಲು, ಮತ್ತು ದೇವಸ್ಥಾನದ ವಿಶ್ವಸ್ಥ ಮಂಡಳಿ ಸದಸ್ಯರು, ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಸೇರಿದಂತೆ ಮಹಾನಗರದ ಅಪಾರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾದರು.

 
More News

ಬರೋಡದ ತುಳು ಚಾವಡಿಯಲ್ಲಿ ಮೇಳೈಸಿದ ತುಳುನಾಡ ಸಾಂಸ್ಕೃತಿಕ ವೈಭವ
ಬರೋಡದ ತುಳು ಚಾವಡಿಯಲ್ಲಿ ಮೇಳೈಸಿದ ತುಳುನಾಡ ಸಾಂಸ್ಕೃತಿಕ ವೈಭವ
ನಮ್ಮ ಆಧುನಿಕ ಶಿಕ್ಷಣದಲ್ಲಿ ವಸ್ತು ಸಂಗ್ರಹಾಲಯದ ಪಾತ್ರ- ಸಿಂಚನ ಎನ್ ಆರ್
ನಮ್ಮ ಆಧುನಿಕ ಶಿಕ್ಷಣದಲ್ಲಿ ವಸ್ತು ಸಂಗ್ರಹಾಲಯದ ಪಾತ್ರ- ಸಿಂಚನ ಎನ್ ಆರ್
ಚಾರ್ಕೋಪ್ ಕನ್ನಡಿಗರ ಬಳಗದ ಎಂ.ಎಸ್ ರಾವ್ ನಿಧನ
ಚಾರ್ಕೋಪ್ ಕನ್ನಡಿಗರ ಬಳಗದ ಎಂ.ಎಸ್ ರಾವ್ ನಿಧನ

Comment Here