Friday 19th, April 2024
canara news

ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ

Published On : 09 Aug 2022   |  Reported By : Rons Bantwal


ಸಮಾರಂಭ ಅಂದೋಲನ ನಿವಾರಣೆ ಕೃಷಿ ಆಯ್ಕೆ ಮದ್ದುವಾಗಿದೆ: ಸಂಸದ ಗೋಪಾಲ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.07: ದೊಡ್ಡಮಟ್ಟದ ಕೃಷಿ ಕ್ರಾಂತಿ ಯೋಜನೆಯೊಂದಿಗೆ ಶಾಸಕ ರಘುಪತಿ ಭಟ್ ರಾಜ್ಯದಲ್ಲಿ ಸಮೂಹ ಕೃಷಿ ಮಾಡಿದ ಪರಿಕಲ್ಪನೆ ರಾಷ್ಟ್ರಕ್ಕೇ ಮಾದರಿಯಾಗಿದೆ. ಇವರ ಪರಿಕಲ್ಪನೆ ದೇಶದ ಎಲ್ಲಾ ರೈತರು ಸ್ವೀಕರಿಸಿ ಭಾರತವನ್ನು ಕೃಷಿಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು. ಎಂದೆರಡು ದಶಕಗಳ ಬಳಿಕ ನಮ್ಮ ರಾಷ್ಟ್ರದ ಕೃಷಿ ಕ್ರಾಂತಿ ಬಗ್ಗೆ ಅಧ್ಯಾಯನ ಮಾಡಿದಾಗ ನಿಜವಾಗಿಯೂ ರಘುಪತಿ ಭಟ್ ಅವರ ಹೆಸರು ಮೇಲ್ತುದಿಯಲ್ಲಿರಲಿದೆ. ರಾಷ್ಟ್ರದ 75 ವರ್ಷಗಳ ಇತಿಹಾಸ ಕಂಡಾಗ ಹಿಂದೆ ನಾವು ಕೃಷಿ ಪ್ರಧಾನ ಆಹಾರಗಳನ್ನು ಆಮದು ಮಾಡುತ್ತಿದ್ದು ಇತ್ತೀಚಿನ ವರ್ಷಗಳಿಂದ ರಫ್ತು ಮಾಡುತ್ತಿದ್ದೇವೆ ಇದೇ ರಾಷ್ಟ್ರದ ಕೃಷಿಕ್ಷೇತ್ರದ ಹಸಿರು ಕ್ರಾಂತಿಯಾಗಿದೆ. ಜಾಗತಿಕ ಸಮಸ್ಯೆಗಳೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದ್ದರೂ ಇಂದು ಭಾರತೀಯ ಕೃಷಿಕರು ಲಾಭದಲ್ಲಿದ್ದಾರೆ. ಅಂದೋಲನದಿಂದ ದೇಶವು ವಿನಾಶದತ್ತ ಸಾಗುತ್ತಿದ್ದು ಇದರ ನಿವಾರಣೆ ಕೃಷಿ ಪ್ರಧಾನವೇ ಮದ್ದು ಆಗಿದೆ. ಜಾಗ ಒದಗಿಸಿದ ಜನರ ವಿಶ್ವಾಸಕ್ಕೆ ವಂದಿಸುವೆ. ಇದು ವಿಶ್ವಾಸದ ಭರವಸೆ ಆಗಿದೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ದೀಪ ತಿಳಿಸಿದರು.

 

ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಸಂಸ್ಥೆ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ `ಹಡಿಲು ಭೂಮಿ ಕೃಷಿ' ಆಂದೋಲನದಡಿ ಬೆಳೆದ `ಉಡುಪಿ ಕೇದಾರ ಕಜೆ' ಸಾವಯವ ಕುಚ್ಚಲಕ್ಕಿ ಮುಂಬಯಿ ಮಹಾನಗರದ ಮಾರುಕಟ್ಟೆ ಬಿಡುಗಡೆ ಗೊಳಿಸಿ ಸಂಸದ ಗೋಪಾಲ್ ಶೆಟ್ಟಿ ಮಾತನಾಡಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಕುರ್ಲಾದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಅಡಿಟೊರಿಯಂನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೇದಾರೋತ್ಥಾನ ಟ್ರಸ್ಟ್‍ನ ಅಧ್ಯಕ್ಷ ಕೆ.ರಘುಪತಿ ಭಟ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಕುಚ್ಚಲಕ್ಕಿ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಭಾ ಅಧ್ಯಕ್ಷತೆ ವಹಿಸಿ ಗೋಪಾಲ್ ಶೆಟ್ಟಿ ವಹಿಸಿದ್ದು ಮಹಾರಾಷ್ಟ್ರ ವಿಧಾನ ಪರಿಷತ್ತ್ ಶಾಸಕ ರಾಜ್‍ಹಂಸ್ ಸಿಂಗ್ ಅತಿಥಿü ಅಭ್ಯಾಗತರಾಗಿದ್ದರು.

ರಘುಪತಿ ಭಟ್ ಅವರ ಈ ಹಸಿರು ಕ್ರಾಂತಿ ಮುಂಬರುವ ದಿನಗಳಲ್ಲಿ ರಾಷ್ಟ್ರವ್ಯಾಪಿಯಾಗಲಿದೆ. ಈ ಮೂಲಕ ರಾಷ್ಟ್ರದಲ್ಲಿನ ಬಂಜರುಭೂಮಿ ಇನ್ಮುಂದೆ ಕೃಷಿಪ್ರಧಾನವಾಗಲಿವೆ. ಕೊರೋನಾ ಕಾಲದಲ್ಲಿ ಎಲ್ಲರೂ ಚಿಂತೆಯಿಂದ ಕಾಲಕಳೆದರೆ ಭಟ್ ಅವರು ಹಸಿರುಕ್ರಾಂತಿಯ ಮೂಲಾ ರಾಷ್ಟ್ರದ ಸಮೃದ್ಧಿಗೆ ಶ್ರಮಿಸಿದ ಫಲವೇ ಇದಾಗಿದೆ ಎಂದು ರಾಜ್‍ಹಂಸ್ ಸಿಂಗ್ ತಿಳಿಸಿದರು.

ಇಷ್ಟೊಂದು ಕಿಕ್ಕಿರಿದು ತುಂಬಿದ ಸಭಾಗೃಹವು ಕೃಷಿಗೆ ಸಂದ ಪ್ರಶಂಸೆ, ಗೌರವವಾಗಿದೆ. ತುಳುನಾಡ ಕೃಷಿ ಪ್ರಧಾನತೆಗೆ ಛಾಪು ಮೂಡಿಸಿದ ಸಡಗರವೂ ಹೌದು. ಪಾಡ್ದಾನ, ರೈತ ಗೀತೆಯೊಂದಿಗೆ ಸಂಸ್ಕೃತಿಯನ್ನು ಬಿಂಬಿಸಿ ರೈತರಲ್ಲಿ ಪ್ರೇರಣೆಯ ಹುಮ್ಮಸ್ಸು ನೀಡಿದ ಕಾರ್ಯಕ್ರಮ ಅಂದುಕೊಂಡಿದ್ದೇನೆ. ಊರಲ್ಲಿ ಕೇಳಸಿಗದ ಪಾಡ್ವನ ಮುಂಬಯಿಯಲ್ಲಿ ಕೇಳಿ ಅಭಿಮಾನವಾಗುತ್ತಿದೆ. ಸಾವಿರಾರು ಸಂಖ್ಯೆಯ ಸಂಘಟಕರ ಶ್ರಮದ ಫಲ ಉಡುಪಿ ಕೇದಾರ ಕಜೆ ಅಕ್ಕಿಯಾಗಿದೆ. ತುಳುನಾಡ ಸಂಸ್ಕೃತಿ ಉಳಿಸಿದ ಬೆಳೆಸಿದ ಕೀರ್ತಿ ಮುಂಬಯಿ ತುಳುವರಿದ್ದಾಗಿದೆ. ಕೃಷಿ ಅಗತ್ಯತೆ ಅರಿತು ಬದಲಾವಣೆಯೊಂದಿಗೆ ಈ ಯೋಜನೆಯನ್ನು ಅಭಿಮಾನವಾಗಿ ಆರಂಭಿಸಿ ಇಂದು ವಿಷಮುಕ್ತ ಆಹಾರವಾಗಿಸಿ ಸಂಪೂರ್ಣ ಸಾವಯವ ಕೃಷಿಯನ್ನಾಗಿಸಿ ವಿಶ್ವಮಾನ್ಯತೆಯ ಬ್ರ್ಯಾಂಡ್‍ಗೆ ಪಾತ್ರವಾಗಿರುವುದು ಕೃಷಿಗೆ ಸಂದ ಗೌರವವೇ ಸರಿ. ಈ ಬ್ರ್ಯಾಂಡ್‍ನ ಕುಚ್ಚಲಕ್ಕಿ ಇಂದು ಅಮೇಝೋನ್‍ನಲ್ಲೂ ಲಭ್ಯವಾಗಿರುವುದು ಸುದೈವ. ಇನ್ನು ಹಡಿಲು ಭೂಮಿ ಖಾಲಿ ಬಿಡಲು ಬಿಡೆವು. ಈ ಮೂಲಕ ಕೃಷಿ ಲಾಭದಾಯಕ ಆಗುವಂತೆ ನಿರಂತರ ಪ್ರಯತ್ನ ಮುನ್ನಡೆಸಲಿದ್ದೇವೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಕೇದಾರೋತ್ಥಾನ ಉತ್ಪಾದನೆ ತುಳುನಾಡ ಸಾಭೌಗ್ಯ. ಭೂಮಿ ವರ ಕೊಡುತ್ತಿದೆ ಅನ್ನುವಂತೆ ಈ ಕಜೆಅಕ್ಕಿ ವರವಾಗಿ ಫಲಿಸಿದೆ. ಅಂದು ಭೂಮಿ ಕಳಕೊಂಡು ಮುಂಬಯಿ ಸೇರಿ ಉದ್ಯಮಿಗಳಾದವರು ಇಂದು ಮತ್ತೆ ತವರೂರುರಲ್ಲಿ ಕೃಷಿ ಮಾಡುತ್ತಿರುವುದು ಅಭಿನಂದನೀಯ ಎಂದು ಕೃಷಿಯ ಪ್ರತ್ಯಕ್ಷದರ್ಶಿರತ್ನಾಕರ ಹೆಗ್ಡೆ ಮಟ್ಟಾರು ಮಾಹಿತಿಯನ್ನಿತ್ತರು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಕರಾವಳಿ ಪ್ರಾಧೀಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರು, ಮುಂಬಯಿಯಲ್ಲಿನ ವಿವಿಧ ಸಮುದಾಯಗಳ, ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಹರೀಶ್ ಜಿ.ಅವಿೂನ್, ಡಾ| ಸುರೇಶ್ ಎಸ್.ರಾವ್ ಕಟೀಲು, ಪದ್ಮನಾಭ ಎಸ್.ಪಯ್ಯಡೆ, ಸುಧಾಕರ್ ಎಸ್.ಹೆಗ್ಡೆ, ಡಾ| ಆರ್.ಕೆ ಶೆಟ್ಟಿ, ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಶಿವಾನಂದ ಡಿ.ಶೆಟ್ಟಿ (ಆಹಾರ್), ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಧರ್ಮಪಾಲ್ ಯು.ದೇವಾಡಿಗ, ಗುಣಪಾಲ್ ಆರ್.ಶೆಟ್ಟಿ ಐಕಳ, ಬಿಜೆಪಿ ಧುರೀಣರಾದ ಸಂತೋಷ್ ಶೆಟ್ಟಿ ಭಿವಂಡಿ, ಮಾಜಿ ನಗರ ಸೇವಕ ಶಿವಾನಾಂದ ಶೆಟ್ಟಿ, ಮುಂಡಪ್ಪ ಎಸ್.ಪಯ್ಯಡೆÀ, ಶಾಂತಾರಾಮ ಬಿ.ಶೆಟ್ಟಿ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ರಮೇಶ್ ಎನ್.ಶೆಟ್ಟಿ, ಎನ್.ಬಿ ಶೆಟ್ಟಿ, ಕೆ.ಸಿ ಶೆಟ್ಟಿ (ಐಬಿಸಿಸಿ), ಕೇದಾರೋತ್ಥಾನ ಟ್ರಸ್ಟ್‍ನ ಕೋಶಾಧಿಕಾರಿ ಕೆ.ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಬಿರ್ತಿ ರಾಜೇಶ್ ಶೆಟ್ಟಿ, ಸದಸ್ಯರುಗಳಾದ ಚೇರ್ಕಾಡಿ ಉಮೇಶ್ ನಾೈಕ್, ಚೇರ್ಕಾಡಿ ಹರೀಶ್ ಶೆಟ್ಟಿ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಸಂಘಟಕ, ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೇದಾರೋತ್ಥಾನದ ರೈತರ ಸೇವೆ, ನಿರಂತರ ಶ್ರಮದ ಕೃಷಿಕಾಯಕದ ¨ಗ್ಗೆ ಸಾಕ್ಷಾಚಿತ್ರ ಪ್ರದರ್ಶಿಸಿ ಉಡುಪಿ ಕೇದಾರ ಕಜೆ ಉತ್ಪಾದನೆ ಬಗ್ಗೆ ಮಾಹಿತಿಯನ್ನೀಡಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯದ ಮಾಜಿ ಸಚಿವ, ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಸಂದೇಶವನ್ನು ಭಿತ್ತರಿಸಲಾಯಿತು. ಅಂತೆಯೇ ಚಂದ್ರಹಾಸ ಕೆ.ಶೆಟ್ಟಿ ಅವರು ಕ್ಯಾಶ್ ಆನ್ ಡೆಲಿವೆರಿ ಮೂಲಕ ಮೊದಲ ಗ್ರಾಹಕರಾಗಿ ಅಮೇಝೋನ್‍ನಲ್ಲಿ ಉಡುಪಿ ಕೇದಾರ ಕಜೆಅಕ್ಕಿ ಕಾಯ್ದಿಸುವುದಕ್ಕೆ ಚಾಲನೆಯನ್ನಿತ್ತರು.

ಸಂಸದ ಗೋಪಾಲ್ ಶೆಟ್ಟಿ ಅವರು ಮುಂಬಯಿಯ ಹಿರಿಯಕ್ಕ ಡಾ| ಸುನೀತಾ ಎಂ.ಶೆಟ್ಟಿ ಅವರಿಗೆ ಕುಚ್ಚಲಕ್ಕಿ ನೀಡಿ ಮುಂಬಯಿ ಮಹಾನಗರದ ಮಾರುಕಟ್ಟೆ ಬಿಡುಗಡೆಗೊಳಿಸಿದರು. ಬಳಿಕ ಹೊಟೇಲು ಪ್ರಧಾನವಾಗಿಸಿ ಆಹಾರ್‍ನ ಅಧ್ಯಕ್ಷ ಶಿವಾನಂದ ಡಿ.ಶೆಟ್ಟಿ ಹಾಗೂ ತುಳುವರ ಅಚ್ಚುಮೆಚ್ಚಿನ ಆಹಾರ ಕಜೆಅಕ್ಕಿಯಾಗಿಸಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಇವರಿಗೆ ಅಕ್ಕಿಚೀಲಗಳನ್ನು ವಿತರಿಸಿ ಉಡುಪಿ ಕುಚ್ಚಲಕ್ಕಿಗೆ ಶುಭಹಾರೈಸಿದರು.
ಜಯ ಶೆಟ್ಟಿ ಮೂಡುಬೆಳ್ಳೆ ಇವರ ರೈತಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ಶೈಲಜಾ ಶೆಟ್ಟಿ ಪ್ರಾರ್ಥ£ಗೈದು ಪಾಡ್ದಾನವನ್ನಾಡಿದರು. ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ಶಾಸಕ ರಘುಪತಿ ಭಟ್ ಪ್ರಸ್ತಾವನೆಗೈದÀು ಅತಿಥಿüಗಳಿಗೆ ಶಾಲು ಹೊದಿಸಿ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು.. ಅಶೋಕ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೆ.ರಾಘವೇಂದ್ರ ಕಿಣಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಜತ್ತು ಮುಂಬಯಿ ಇದರ ಕಲಾವಿದರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರ್ದೇಶನದಲ್ಲಿ `ಕೊರೊನಾ' ತುಳು ನಾಟಕ ಪ್ರದರ್ಶಿಸಿತು. ಉಡುಪಿ ಇಲ್ಲಿನ ಹಡೀಲು ಭೂಮಿಯಲ್ಲಿ ಬೆಳೆಸಿದ ಕಜೆ ಅಕ್ಕಿಯ ಸ್ವಾಧಿಷ್ಟ ರುಚಿಯ ಭೋಜನದೊಂದಿಗೆ ಸಮಾರಂಭ ಸಮಾಪನ ಕಂಡಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here