Wednesday 4th, October 2023
canara news

ಕನ್ನಡ ಭವನ ಮುಂಬಯಿ ಪ್ರಾಂಶುಪಾಲರಾಗಿ ಅಮೃತಾ ಅಜಯ್ ಶೆಟ್ಟಿ ಭಡ್ತಿ

Published On : 15 Aug 2022   |  Reported By : Rons Bantwal


ಮುಂಬಯಿ, ಆ.11: ಬೃಹನ್ಮುಂಬಯಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ (ಭಾಷಿಕ ಅಲ್ಪ ಸಂಖ್ಯಾ)ಯ ಶಿಕ್ಷಕಿ ಅಮೃತಾ ಅಜಯ್ ಶೆಟ್ಟಿ ಅವರು ಕೆಬಿಇ ಸಂಸ್ಥೆಯ ಸಂಚಾಲಕತ್ವದ ಕೆಬಿಇಎಸ್ ಪ್ರೌಢಶಾಲೆ ಮತ್ತು ಕಿರಿಯ ಮಹಾವಿದ್ಯಾಲಯದ ಪ್ರಾಂಶುಪಾಲೆರಾಗಿ ಭಡ್ತಿ ಹೊಂದಿದ್ದಾರೆ. ಪ್ರಸ್ತುತ ಪ್ರಾಂಶುಪಾಲ ಎಲ್.ರಾಧಾಕೃಷ್ಣನ್ ಸ್ವಯಂ ನಿವೃತ್ತಿ ಪಡೆದಿರುವ ಕಾರಣ ಅವರ ಸ್ಥಾನಕ್ಕೆ ಅಮೃತಾ ಇವರನ್ನು ನೇಮಕ ಗೊಳಿಸಲಾಗಿದ್ದು 2022ರ ಆ.01ರಿಂದ ಪ್ರಾಂಶುಪಾಲೆಯಾಗಿ ಸೇವಾ ನಿರತರಾಗಿದ್ದಾರೆ.

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಶಿಕ್ಷಣ ಪದವೀಧರೆ ಆಗಿದ್ದು ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಎಂಎ ಸ್ನಾತಕೋತ್ತರ ಪದವಿ ಹಾಗೂ ಸ್ಕೂಲ್ ಮ್ಯಾನೇಜ್‍ಮೇಂಟ್‍ನಲ್ಲಿ ಡಿಪೆÇ್ಲೀಮಾ ಪದವೀಧರೆ ಅಮೃತಾ ಶೆಟ್ಟಿ 2005ರಿಂದ ಕನ್ನಡ ಭವನ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಇತಿಹಾಸ ಇಂಗ್ಲೀಷ್, ಕನ್ನಡ, ಭಾಷೆಯ ಪಠ್ಯಗಳನ್ನು ಬೋಧಿಸುತ್ತಿದ್ದರು. ವಿದ್ಯಾಥಿರ್sಗಳ ಮೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಅವರು ಶೈಕ್ಷಣಿಕ ಸಂಬಂಧಿತ ವಿವಿಧ ವಿಚಾರ ಸಂಕಿರಣಗಳಲ್ಲೂ ಭಾಗವಹಿಸಿದ ಹೆಗ್ಗಳಿಕೆ ಹೊಂದಿ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿ ಓರ್ವ ಪ್ರತಿಭಾನ್ವಿತ ಶಿಕ್ಷಕಿ ಎಂದು ಗುರುತಿಸಿ ಕೊಂಡಿದ್ದಾರೆ.

ಅಮೃತಾ ಶೆಟ್ಟಿ ಅವರು ಹವ್ಯಾಸಿ ಯಕ್ಷಗಾನ, ರಂಗಭೂಮಿ ಕಲಾವಿದೆ. ಕಾರ್ಯಕ್ರಮ ನಿರೂಪಕಿ ಆಗಿಯೂ ಪ್ರಸಿದ್ಧಿ ಹೊಂದಿದ್ದು ವಿವಿಧ ಸಂಘಟನೆಗಳಲ್ಲಿ ಸದಸ್ಯೆಯಾಗಿ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದು, ಬಂಟರ ಸಂಘ ಮುಂಬಯಿ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ ನಗರದ ಹಲವಾರು ಸಂಘ-ಸಂಸ್ಥೆಗಳು ಸಮ್ಮಾನಿಸಿವೆ.

ಉಡುಪಿ ನಿಂಜೂರು ಪಡುಮನೆ ಜಯರಾಮ್ ಶೆಟ್ಟಿ ಮತ್ತು ನಂದಳಿಕೆ ಗುಂಡ್ಯಡ್ಕಗುತ್ತು ಶಾಂಭವಿ ಶೆಟ್ಟಿ ದಂಪತಿ (ಸದ್ಯ ಸ್ವರ್ಗೀಯರು) ಸುಪುತ್ರಿಯಾಗಿರುವ ಅಮೃತಾ ಶೆಟ್ಟಿ ಏರಾಡಿ ಮಾರ್ನಾಡು ಅಜಯ್ ಶೆಟ್ಟಿ ಅವರ ಪತ್ನಿಯಾಗಿದ್ದು ಸದ್ಯ ಮುಂಬಯಿ ವಿಕ್ರೋಲಿ ಪಶ್ಚಿಮದಲ್ಲಿ ನೆಲೆಯಾಗಿದ್ದಾರೆ

 




More News

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Comment Here