Friday 19th, April 2024
canara news

ಗೋಕುಲದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಮೊಳಗಿದ

Published On : 21 Aug 2022   |  Reported By : Rons Bantwal


`ಶ್ರೀ ವಿದ್ಯಾಭೂಷಣ' ಬಳಗದ ಹರಿದಾಸ ಸಾಹಿತ್ಯ ಭಕ್ತಿಸಂಗೀತ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‍ಬಿಐ), ಆ.20: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಹಯೋಗ ಹಾಗೂ ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ (ಐಐಟಿಸಿ) ಮತ್ತು ಬಿ.ಆರ್ ಶೆಟ್ಟಿ (ಬಿ.ಆರ್ ರೆಸ್ಟೋರೆಂಟ್ ಸಮೂಹ ಮುಂಬಯಿ) ಪರಿವಾರದ ಪ್ರಾಯೋಜಕತ್ವದಲ್ಲಿ ಇಂದಿಲ್ಲಿ ಭಾನುವಾರ ಸಂಜೆ ಸಯಾನ್‍ನ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ ಇವರು `ಹರಿದಾಸ ಸಾಹಿತ್ಯ' ಮತ್ತು `ಭಕ್ತಿ ಸಂಗೀತ' ಕಾರ್ಯಕ್ರಮ ನಡೆಸಿದರು.

ಶ್ರೀ ವಿದ್ಯಾಭೂಷಣರ ನೀನಾದ ಸಂಗೀತಕ್ಕೆ ಎಸ್.ಪ್ರದೇಶ್ ಆಚಾರ್ಯ (ವಾಯೋಲಿನ್), ಅನಿರುದ್ಧ್ ಭಟ್ (ಮೃದಂಗ), ಪದ್ಮರಾಜ್ ಕೆ.ಉಪಾಧ್ಯಾಯ ಮೀರಾರೋಡ್ (ತಬಲಾ) ಸಂಗೀತ ವಾದನ ಸಾಧÀನಗಳಲ್ಲಿ ಸಹಕರಿಸಿದರು. ಬಿಎಸ್‍ಕೆಬಿಎ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರು ಪ್ರಾಯೋಜಕರನ್ನೊಳಗೊಂಡು ಶ್ರೀ ವಿದ್ಯಾಭೂಷಣರು ಮತ್ತು ಸಹಕಲಾವಿದರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ವಿಕ್ರಾಂತ್ ಎಸ್.ಉರ್ವಾಳ್, (ಐಐಟಿಸಿ) ಮತ್ತು ಬಿಎಸ್‍ಕೆಬಿಎ ಉಪಾಧ್ಯಕ್ಷÀರುಗಳಾದ ವಾಮನ್ ಹೊಳ್ಳಾ , ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ಪ್ರಶಾಂತ್ ಹೆರ್ಲೆ, ಜೊತೆ ಖಜಾಂಚಿ ಗಣೇಶ್ ಭಟ್, ಗೋಪಾಲಕೃಷ್ಣ ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದÀ ಶೈಲಿನಿ ರಾವ್, ರಾಮವಿಠಲ ಕಲ್ಲೂರಾಯ, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಸಂಗೀತಪ್ರಿಯರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here