Friday 9th, May 2025
canara news

ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯಿಂದ ಶೈಕ್ಷಣಿಕ ಸರಣಿ ಸ್ಪರ್ಧೆ ಆ

Published On : 27 Aug 2022   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.26: ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ರಜತ ಮಹೋತ್ಸವದ ವರ್ಷಪೂರ್ತಿ ಕಾರ್ಯಕ್ರಮಗಳ ಅಂಗವಾಗಿ ಇಂಟರ್‍ನ್ಯಾಶನಲ್ ಸ್ಕೂಲ್ ಇಂದಿಲ್ಲಿ ಶುಕ್ರವಾರ ಪೆÇವಾಯಿಯಲ್ಲಿನ ಎಸ್.ಎಂ ಶೆಟ್ಟಿ ಹೈಸ್ಕೂಲ್‍ನ ಆರ್.ಎನ್ ಶೆಟ್ಟಿ ಒಳಾಂಗಣ ಸಭಾಗೃಹದಲ್ಲಿ ಸರಣಿ ಸ್ಪರ್ಧೆಗಳನ್ನು ಆಯೋಜಿಸಿತ್ತು.

ರಾಜ್ಯ ಮಂಡಳಿ ಮತ್ತು ಅಂತರರಾಷ್ಟ್ರೀಯ ಶಾಲೆಗಳ ನಡುವೆ ಹವಾಮಾನ ಬದಲಾವಣೆ ಪ್ರಜ್ಞೆಯ ಆಧಾರಿತ ಅಮಲ್ಗಮ್ ಧ್ಯೇಯದೊಂದಿಗೆ ಸರಣಿ ಸ್ಪರ್ಧೆಗಳನ್ನಾಗಿಸಿ ಕಾರ್ಯಕ್ರಮ ನಡೆಸಲ್ಪಟ್ಟಿದ್ದು ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಪೆÇವಾಯಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಕೋಶಾಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ, ಸದಸ್ಯರಾದ ಅಪ್ಪಣ್ಣ ಎಂ.ಶೆಟ್ಟಿ ಮತ್ತು ನಿಶಿತ್ ಶೆಟ್ಟಿ ಪ್ರಧಾನವಾಗಿ ಹಾಗೂ ಎಸ್.ಎಂ ಶೆಟ್ಟಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ, ರಾಜ್ಯ ಮಂಡಳಿ ಶಾಲಾ ಪ್ರಾಂಶುಪಾಲೆ ಸೀಮಾ ಸಬ್‍ಲೋಕ್, ಇಂಟರ್‍ನೇಶನಲ್ ಸ್ಕೂಲ್ ಪ್ರಾಂಶುಪಾಲೆ ಮಿಲ್ಡ್ರೇಡ್ ಲೋಬೊ, ಪ್ರಧಾನ ಪ್ರಬಂಧಕ ಡಾ| ಸಂದೀಪ್ ಸಿಂಗ್, ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಬೋಧಕರು, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.

ನರ್ಸರಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾಥಿರ್üಗಳಿಗೆ 8 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಎರಡೂ ಶಾಲೆಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು. ಪೆÇವಾಯಿ ಶಿಕ್ಷಣ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರ ಹಸ್ತಗಳಿಂದ ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here