Tuesday 6th, June 2023
canara news

ಮೂಡುಬಿದಿರೆ ; ವಿದ್ಯಾಥಿರ್üಕ್ಷೇಮಪಾಲನಾ ದಿನಾಚರಣೆ ಸಂಭ್ರಮಿಸಿದ ಮಹಾವೀರ ಕಾಲೇಜು

Published On : 27 Aug 2022   |  Reported By : Rons Bantwal


ಉತ್ತಮ ಜೀವನ ರೂಪಿಸಲು ಸಂಸ್ಕಾರ ಅತ್ಯಗತ್ಯ : ತೋನ್ಸೆ ಆನಂದ ಶೆಟ್ಟಿ

ಮುಂಬಯಿ (ಆರ್‍ಬಿಐ), ಆ.24: ಉತ್ತಮ ಜೀವನ ರೂಪಿಸಲು ವಿದ್ಯೆ, ಶಿಸ್ತು, ಸಂಸ್ಕಾರ ಅತ್ಯಗತ್ಯ. ಕಠಿಣ ಪರಿಶ್ರಮ, ಗುರಿಯನ್ನು ಸಾಧಿಸುವ ಹಂಬಲ ಹಾಗೂ ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಜೀವನದಲ್ಲಿಯಶಸ್ಸನ್ನು ಗಳಿಸಲು ಸಾಧ್ಯ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ವಿದ್ಯಾಥಿರ್ü ಜೀವನದಲ್ಲಿ ದೊರಕುವ ಸದವಕಾಶಗಳನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಿ' ಎಂದು ಮಹಾವೀರ ಕಾಲೇಜ್‍ನ ಹಳೆವಿದ್ಯಾಥಿರ್ü ಮತ್ತು ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್‍ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ ತಿಳಿಸಿದರು.

ಇತ್ತೀಚೆಗೆ ಮೂಡಬಿದಿರೆ ಇಲ್ಲಿನ ಶ್ರೀ ಮಹಾವೀರಕಾಲೇಜಿನ ವಿದ್ಯಾಥಿರ್ü ಕ್ಷೇಮಪಾಲನಾ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿüಗಳಾಗಿದ್ದು ಆನಂದ ಶೆಟ್ಟಿ ಮಾತನಾಡಿದರು.

ಅತಿಥಿü ಅಭ್ಯಾಗತರಾಗಿದ್ದ, ದುಬೈಯಲ್ಲಿನ ಉದ್ಯಮಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಮಾತನಾಡಿ, `ಗುರುವೆಂದರೆ ಜ್ಞಾನಗಳ ಸಂಗಮ.ಗುರುವಿನ ಮಾರ್ಗದರ್ಶನದಿಂದಜೀವನ ಮುಕ್ತಿಯನ್ನು ಪಡೆಯಲು ಸಾಧ್ಯ.ಯಾವುದು ನಿಜವಾದ ಶಿಕ್ಷಣ ಎನ್ನುವುದರ ಬಗ್ಗೆ ಚಿಂತನೆಅಗತ್ಯ. ವಿದ್ಯೆ, ಅಧ್ಯಾಪಕ ಮತ್ತು ವಿದ್ಯಾಸಂಸ್ಥೆಗಳು ಸಮಾಜದಉನ್ನತಿಯನ್ನು ನಿರ್ಧರಿಸುವ ಅಂಶಗಳು. ನೀವು ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸಬೇಕು.ನಿರಂತರ ಪ್ರಯತ್ನಶೀಲರಾಗಿ ಭವ್ಯ ಭಾರತದ ಶ್ರೇಷ್ಠ ನಾಗರಿಕರಾಗಿ ಬದುಕಿ ಬಾಳಿರಿ' ಎಂದು ವಿದ್ಯಾಥಿರ್üಗಳಿಗೆ ಕಿವಿಮಾತುಗಳನ್ನಾಡಿದರು.

ಗೌರವಾನ್ವಿತ ಅತಿಥಿüಗಳಾಗಿ ಭಾಗವಹಿಸಿದ ಕಾಲೇಜ್‍ನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳಲು ಪ್ರತಿಯೊಬ್ಬ ವಿದ್ಯಾಥಿರ್üಯೂ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಪದವಿ ಕಾಲೇಜ್‍ನ ಪ್ರಾಂಶುಪಾಲ ಡಾ| ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದು ಮಹಾವೀರ ಪದವಿಪೂರ್ವ ಕಾಲೇಜ್‍ನ ಪ್ರಾಂಶುಪಾಲ ಪೆÇ್ರ| ರಮೇಶ್ ಭಟ್, ವಿದ್ಯಾಥಿರ್ü ಕ್ಷೇಮಪಾಲನಾ ಅಧಿಕಾರಿ ಪೆÇ್ರ| ಹರೀಶ್ ಹಾಗೂ ವಿದ್ಯಾಥಿರ್ü ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಮಂಗಳೂರು ವಿವಿ ಬಿ.ಕಾಂ ಪರೀಕ್ಷೆಯಲ್ಲಿ 9ನೇ ರಾಂಕ್ ವಿಜೇತೆ ಜಸ್ಮಿತಾ ರೋಡ್ರಿಗಸ್ ಅವರನ್ನು ಅತಿಥಿüಗಳು ಸನ್ಮಾನಿಸಿದರು ಹಾಗೂ ದತ್ತಿನಿಧಿ ಪುರಸ್ಕಾರಗಳು ಮತ್ತು ವಿದ್ಯಾಥಿರ್üಗಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಪಠ್ಯೇತರ ಮತ್ತು ಆಟೋಟ ಸ್ಪರ್ಧೆಗಳ ವಿಜೇತ ವಿದ್ಯಾಥಿರ್üಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.

ವಿದ್ಯಾಥಿರ್ü ಸಂಘದ ಅಧ್ಯಕ್ಷ ಕಿಶನ್ ಸ್ವಾಗತಿಸಿದರು. ಪ್ರತೀಕ್ಷಾ ಅತಿಥಿüಗಳನ್ನು ಪರಿಚಯಿಸಿದರು. ರಿಯೋನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜ್ಯೋತ್ಸಾ ್ನ ವಂದಿಸಿದರು.

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here