Friday 29th, March 2024
canara news

30ನೇ ಕೊಂಕ್ಣಿ ಮಾನ್ಯತಾ ದಿನಾಚರಣೆ ಸಂಭ್ರಮಿಸಿದ ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ

Published On : 22 Aug 2022   |  Reported By : Rons Bantwal


ಮಾತೃಭಾಷಾ ವೈವಿಧ್ಯತೆಯಿಂದ ಪ್ರತಿಭಾನ್ವೇಷಣೆ ಸಾಧ್ಯ : ಕ್ಯಾ| ಥೋಮಸ್ ಪಿಂಟೋ

ಮುಂಬಯಿ (ಆರ್‍ಬಿಐ), ಆ.21: ಕೊಂಕಣಿ ಭಾಷಾ ಮಂಡಳ್ ಅಯೋಜಿಸಿದ ಇಂದಿನ ಕಾರ್ಯಕ್ರಮವು ನೋಡಿ ಮನಸ್ಸಿಗೆ ಸಂತೃಪ್ತಿ ನೀಡಿತು. ಮಕ್ಕಳ ನೃತ್ಯ, ಕೊಂಕಣಿ ಗಾನಗಳನ್ನು ಕೇಳಿ ಮನ್ನಸ್ಸು ತುಂಬಾ ಖುಷಿ ಅನುಭವಿಸಿತು. ಅಚ್ಚುಕಟ್ಟಾದ ಕಾರ್ಯಕ್ರಮ, ಮಾತೃಭಾಷಾ ವೈವಿಧ್ಯತೆಯಿಂದ ಪ್ರತಿಭಾನ್ವೇಷಣೆ ಸಾಧ್ಯ. ಇಂತಹ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭೆಗಳಿಗೆ ಪೆÇ್ರೀತ್ಸಾಹಿಸುವೆ ಎಂದು ಕ್ಯಾಪ್ಟನ್ ಥೋಮಸ್ ಡಬ್ಲ್ಯೂ .ಪಿಂಟೋ ತಿಳಿಸಿದರು.

ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯು ಇಂದಿಲ್ಲಿ ಭಾನುವಾರ ಸಂಜೆ ದಾದರ್ ಪಶ್ಚಿಮದಲ್ಲಿನ ಡಾ| ಅಂತೋನಿಯೋ ದ'ಸಿಲ್ವಾ ಹೈಸ್ಕೂಲು ಸಭಾಗೃಹದಲ್ಲಿ ಆಯೋಜಿಸಿದ್ದ ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯ 80ನೇ ವಾರ್ಷಿಕೋತ್ಸವ ಮತ್ತು 30ನೇ ಕೊಂಕ್ಣಿ ಮಾನ್ಯತಾ ದಿನಾಚರಣೆ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ಅವಳಿ ಸಂಭ್ರಮಗಳಿಗೆ ಚಾಲನೆಯನ್ನಿತ್ತು ಕ್ಯಾ| ಪಿಂಟೋ ಮಾತನಾಡಿದರು.

ಮುಂಬಯಿ ಉಚ್ಛನ್ಯಾಯಲಯದ ವಕೀಲ ನ್ಯಾಯವಾದಿ ಪಿಯೂಸ್ ವಾಸ್ ಮತ್ತು ಸೆವೆನ್ ಐಲ್ಯಾಂಡ್ ಶಿಪ್ಪಿಂಗ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಜೋಸೆಫ್ ಡಿಸೋಜಾ ಗೌರವ ಅತಿಥಿಗಳಾಗಿ ಮತ್ತು ಭಾಷಾ ಮಂಡಳ್‍ನ ಅಧ್ಯಕ್ಷ ಜಾನ್ ಡಿ'ಸಿಲ್ವಾ, ಉಪಾಧ್ಯಕ್ಷ ಆಲ್ಬರ್ಟ್ ಡಬ್ಲೂ .ಡಿ'ಸೋಜಾ, ಕಾರ್ಯಾಧ್ಯಕ್ಷ ಹೆನ್ರಿ ಲೋಬೊ, ಗೌರವ ಕಾರ್ಯದರ್ಶಿ ಲಾರೆನ್ಸ್ ಡಿ'ಸೋಜಾ ಕಮಾನಿ, ಜೊತೆ ಕಾರ್ಯದರ್ಶಿ ಜೋನ್ ಆರ್. ಪಿರೇರಾ, ಗೌರವ ಕೋಶಾಧಿಕಾರಿ ವಾಲ್ಟರ್ ಡಿ'ಸೋಜಾ ಜೆರಿಮೆರಿ ವೇದಿಕೆಯಲ್ಲಿದ್ದರು.

ನ್ಯಾಯವಾದಿ ವಾಸ್ ಮಾತನಾಡಿ ಮುಂಬಯಿ ಸೇರಿದಂತೆ ಗುಜರಾತ್‍ನಿಂದ ಕೇರಳದವರೆಗೆ ಕೊಂಕಣಿ ಮಾತನಾಡುವ ಜನರು ವಿಸ್ತಾರಿಸಿದ್ದಾರೆ. ನಾವೂ ಕೊಂಕಣಿ ಮಾತೃಭಾಷೆಯನ್ನು ಪ್ರೀತಿಸಬೇಕು. ನಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯನ್ನು ಕಲಿಯಲು ಉತ್ತೇಜನೆ ನೀಡಬೇಕು ಎಂದರು.

ಕೊಂಕಣಿ ಭಾಷೆಯು ತುಂಬಾ ಸಿಹಿಭಾಷೆ. ಆ ಸಿಹಿಯನ್ನು ಭಾûಷೆಯ ಪೆÇೀಷಣೆ ಮೂಲಕ ಎಲ್ಲರಿಗೂ ಹಂಚುವ ಕೆಲಸ ಮಾಡಬೇಕು. ನಮ್ಮ ಯುವ ಜನಾಂಗಕ್ಕೆ ಕೊಂಕಣಿ ಭಾಷೆಯ ಅರಿವು ಮೂಡಿಸಬೇಕು ಎಂದು ಜೋಸೆಫ್ ಡಿಸೋಜಾ ತಿಳಿಸಿದರು.

ಜಾನ್ ಡಿ'ಸಿಲ್ವಾ ಮಾತನಾಡಿ ಇಂದು ನಾವೂ 30ನೇ ಕೊಂಕ್ಣಿ ಮಾನ್ಯತಾ ಆಚರಿಸುವುದು ತುಂಬ ಖುಷಿ ತಂದಿದೆ. ಇಂತಹ ರಾಷ್ಟ್ರ ಮಾನ್ಯತಾ ಭಾಷೆಯನ್ನು ಉಳಿಸುವಂತಹ ಜವಾಬ್ದಾರಿ ನಮ್ಮ ದಾಗಬೇಕು. ನಮ್ಮ ಯುವಜನರಿಗೆ ಕೊಂಕಣಿ ಭಾಷೆಯ ಪ್ರೀತಿಯನ್ನು ಮೂಡಿಸಬೇಕು. ಮಕ್ಕಳಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೆÇ್ರೀತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಷಾ ಮಂಡಳ್‍ನ ಕಾರ್ಯಕಾರಿ ಸಮಿತಿ ಸದಸ್ಯೆ, ಸಮಾಜ ಸೇವಕಿ ಬೆನೆಡಿಕ್ಟಾ ಬಿ.ರೆಬೆಲ್ಲೋ ಅವರನ್ನು ಅತಿಥಿ ಗಣ್ಯರು ಸನ್ಮನಿಸಿ ಗೌರವಿಸಿದರು.

ಸದಸ್ಯ ಪಾಸ್ಕಲ್ ಲೋಬೊ ಸೇರಿದಂತೆ ಅಪಾರ ಸಂಖ್ಯೆಯ ಕೊಂಕಣಿ ಭಾಷಿಗರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ನೃತ್ಯ, ಗಾನಗಳೊಂದಿಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಜಾನ್ ಡಿ'ಸಿಲ್ವಾ ಸ್ವಾಗತಿಸಿದರು. ಹೆನ್ರಿ ಲೋಬೊ, ಆಲ್ಬರ್ಟ್ ಡಬ್ಲೂ .ಡಿ'ಸೋಜಾ, ಟೋನಿ ಮಾರ್ಟಿನ್ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕೋಶಾಧಿಕಾರಿ ಸಿರಿಲ್ ಕಾಸ್ತೆಲಿನೋ, ಕು| ಗ್ಲಾನ್ಸಿಟಾ ಫೆರ್ನಾಂಡಿಸ್, ಲೆವಿನ್ ಫೆರ್ನಾಂಡಿಸ್, ಪ್ರೀತೇಶ್ ಕಾಸ್ತೆಲಿನೋ, ರೆಷ್ಮಾ ಗೋವಿಯಾಸ್, ರೆನಿತಾ ಗೋವಿಯಾಸ್, ವೆರೊನಿಕಾ ಡಿಸೋಜಾ ಅತಿಥಿಗಳಿಗೆ ಪುಷ್ಫಗುಪ್ಚವನ್ನು ನೀಡಿ ಗೌರವಿಸಿದರು. ವಲೇರಿಯಾ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು. ಲಿಯೋ ಫೆರ್ನಾಂಡಿಸ್ ಜೆರಿಮೆರಿ ಮತ್ತು ಫ್ರಾನ್ಸಿಸ್ ಒಲಿವೆರಾ ಕಾರ್ಯಕ್ರಮ ನಿರೂಪಿಸಿದರು. ಲಾರೆನ್ಸ್ ಡಿ'ಸೋಜಾ ಕಮಾನಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here