Tuesday 6th, June 2023
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್‍ನಿಂದ ನವೀಕೃತ ಗೋಕುಲ ಮಂದಿರದಲ್ಲಿ ನೆರವೇರಿದ ಗಣೇಶೋತ್ಸವ

Published On : 31 Aug 2022   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

 ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್‍ಸ್ ಅಸೋಸಿಯೇಶನ್ ಸಂಸ್ಥೆಗಳ ಆಶ್ರಯದಲ್ಲಿ ಸಯಾನ್ ಇಲ್ಲಿನ ನವೀಕೃತ ಗೋಕುಲ ಮಂದಿರದ ಶ್ರೀ ಗೋಪಾಲಕೃಷ್ಣನ ಸನ್ನಿಧಾನದಲ್ಲಿ ಇಂದಿಲ್ಲಿ ಮೂರುದಿನಗಳ ಗಣೇಶೋತ್ಸವ ಸಂಭ್ರಮಕ್ಕೆ ಚಾಲನೆಯನ್ನೀಡಲಾ ಯಿತು.

ಇಂದಿಲ್ಲಿ ಬುಧವಾರ ಬೆಳಗ್ಗೆ ಗಣಹೋಮ, ಪೂರ್ವಾಹ್ನ ಗಂಟೆಗೆ ಶ್ರೀ ಗಣೇಶ ಪ್ರತಿಷ್ಠಾಪನೆ, ಮಧ್ಯಾಹ್ನ ಮತ್ತು ರಾತ್ರಿ ಆರತಿ ನೆರವೇರಿಸಲ್ಪಟ್ಟಿದ್ದು ರಾಜೇಶ ರಾವ್ ಮತ್ತು ವಿನೋದಿನಿ ಆರ್.ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ, ಆರ್ಚಕ ಗೋಪಾಲ ಭಟ್ ಕಿದಿಯೂರು, ವಿದ್ವಾನ್ ಗುರುಪ್ರಸಾದ್ ಭಟ್ ವಿವಿಧ ಪೂಜಾಧಿಗಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಗೋಕುಲ ಭಜನಾ ಮಂಡಳಿ ಮತ್ತು ಯುವ ಕಲಾವೃಂದವು ಭಜನೆ ಹಾಗೂ ದೂರದರ್ಶನದ ಕಲಾವಿದ, ಅನಿರುದ್ಧ್ ಮಂದರ್ ಭಿಡೆ ಬಳಗವು ಅಭಂಗ ಮತ್ತು ಭಜನೆ ನಡೆಸಿತು. ಅಪರಾಹ್ನ ಹರೀಶ್ ಅಯ್ಯರ್ ಬಳಗ ಹಾಗೂ ಸಂಜೆ ರಾಷ್ಟ್ರ ಪ್ರಶಸ್ತಿ ವಿಜೇತ ಮಹೇಶ್ ಕಾಳೆ ತಂಡವು ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು.


ಆರಂಭದ ದಿನದ ಶುಭಾವಸರದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ (ಜಿಪಿಟಿ) ಟ್ರಸ್ಟಿಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ರಾವ್, ಕೃಷ್ಣರಾಜ್ ತಂತ್ರಿ, ಕಾರ್ಯದರ್ಶಿ (ಟ್ರಸ್ಟಿ) ಎಸ್.ರಾಮವಿಟ್ಟಲ ಕಲ್ಲೂರಾಯ, ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಜಿಪಿಟಿ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷÀರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿಗಳಾದ ಚಿತ್ರಾ ಮೇಲ್ಮನೆ ಮತ್ತು ಪ್ರಶಾಂತ್ ಹೆರ್ಲೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಬಿಎಸ್‍ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ನಿಕಟಪೂರ್ವ ಪ್ರಧಾನ ಆರ್ಚಕ ಹರಿ ಭಟ್ ಮುಚ್ಚೂರು, ಎಲ್ಲೂರು ಗುರುರಾಜ್ ಭಟ್, ಸರ್ವಜ್ಞ ಉಡುಪ, ಉಮೇಶ್ ರಾವ್, ಬಾಲಕೃಷ್ಣ ಉಡುಪ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here